ಹೌದು,ನೀವೂ ಕೇಳಿದ್ದು ನಿಜ, ರೈತರು ಸರ್ಕಾರದ ಈ ಯೋಜನೆ ಮೂಲಕ 2.5 ಲಕ್ಷ ಸಬ್ಸಿಡಿ ಪಡೆದು ಬೋರ್ ವೆಲ್ ಕೊರೆಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ಮಾಹಿತಿ ನಮ್ಮ ರೈತ ಭಾಂದವರಿಗೆ ಹೆಚ್ಚು ಉಪಯುಕ್ತವಾಗಿದ್ದು,ಆದಷ್ಟೂ ಎಲ್ಲರಿಗೂ ಮತ್ತು ನಿಮ್ಮ ಸ್ನೇಹಿತರಿಗೂ ಮರೆಯದೇ ಶೇರ್ ಮಾಡಿ…
ಈಗಂತೂ ಹಲವಾರು ವಿಭಾಗಗಳಲ್ಲಿ ಸರ್ಕಾರಗಳು ಜನರಿಗೆ ಉಪಯುಕ್ತವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ.ಅದರಲ್ಲಿ ಇದು ಒಂದು ರೈತರಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ.
ಕೆಲವೊಂದು ಅಭಿವೃದ್ಧಿ ನಿಗಮದ ಸಹಕಾರದಡಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿದ್ದು.. ಇದರ ಮೂಲಕ ಉಚಿತವಾಗಿ ರೈತರು ಬೋರ್ ವೆಲ್ ಕೊರೆಸಬಹುದಾಗಿದೆ.. ಜೊತೆಗೆ ಉಚಿತವಾಗಿ ಬೋರ್ವೆಲ್ ಗಳಿಗೆ ವಿದ್ಯುತ್ ಕೂಡ ನೀಡುವ ಯೋಜನೆ ಪ್ರಗತಿಯಲ್ಲಿದೆ..
ಸಮುದಾಯ ನೀರಾವರಿ ಬೋರ್ ವೆಲ್ ಯೋಜನೆ:-
ಈ ಯೋಜನೆಯಡಿಯಲ್ಲಿ ಅಕ್ಕ ಪಕ್ಕಕ್ಕೆ ಹೊಂದಿಕೊಂಡಂತೆ ಇರುವ ಒಟ್ಟು 8 ಎಕರೆ ಕೃಷಿ ಜಮೀನನ್ನು ಹೊಂದಿದ ಮೂವರು ರೈತರಿಗೆ 4 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಟ್ಟು ಎರಡು ಬೋರ್ ವೆಲ್ ಗಳನ್ನು ನೀಡಲಾಗುತ್ತಿದ್ದು, ಒಟ್ಟು 8 ರಿಂದ 15 ಎಕರೆ ಜಮಿನನ್ನು ಹೊಂದಿದ ರೈತರಿಗೆ 6 ಲಕ್ಷ ರೂಪಾಯಿಗಳಿಗೆ 3 ಬೋರ್ ವೆಲ್ ಗಳನ್ನು ನೀಡಲಾಗುತ್ತಿದೆ. ಯಶಸ್ವಿಯಾದ ಬೋರ್ ವೆಲ್ ಗಳಿಗೆ ಇತರೆ ಬಿಡಿ ಭಾಗಗಳೊಂದಿಗೆ ವಿದ್ಯುತ್ತನ್ನೂ ಸಹ ನೀಡಲಾಗುತ್ತಿದೆ.
ಏತ ನೀರಾವರಿ ಯೋಜನೆ:-
ಸರ್ಕಾರದ ವತಿಯಿಂದ ಸಾಕಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿದ್ದು ನೀರಾವರಿ ಸೌಲಭ್ಯಗಳಿಗೆ ಸಾಕಷ್ಟು ರೀತಿಯಲ್ಲಿ ಸಹಕಾರಿಯಾಗುತ್ತಿದೆ. ಈ ಯೋಜನೆಯಡಿಯಲ್ಲಿ ಅಕ್ಕ ಪಕ್ಕಕ್ಕೆ ಹೊಂದಿಕೊಂಡಂತೆ ಇರುವ ಒಟ್ಟು 8 ಎಕರೆ ಕೃಷಿ ಜಮೀನನ್ನು ಹೊಂದಿದ ಮೂವರು ರೈತರಿಗೆ 4 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಟ್ಟು ಎರಡು ಬೋರ್ ವೆಲ್ ಗಳನ್ನು ನೀಡಲಾಗುತ್ತಿದ್ದು, ಒಟ್ಟು 8 ರಿಂದ 15 ಎಕರೆ ಜಮಿನನ್ನು ಹೊಂದಿದ ರೈತರಿಗೆ 6 ಲಕ್ಷ ರೂಪಾಯಿಗಳಿಗೆ 3 ಬೋರ್ ವೆಲ್ ಗಳನ್ನು ನೀಡಲಾಗುತ್ತಿದೆ.
ವೈಯಕ್ತಿಕ ನೀರಾವರಿ ಬೋರ್ ವೆಲ್ ಯೋಜನೆ…
ಒಂದು ಎಕರೆಗಿಂತ ಹೆಚ್ಚಿನ ಜಮೀನನ್ನು ಹೊಂದಿರುವ ಉಡುಪಿ, ಕೊಡಗು, ದಕ್ಷಿಣ ಕನ್ನಡ, ಚಿಕ್ಕ ಮಗಳೂರು, ಹಾಸನ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತ್ತು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ಜಮೀನಿನಲ್ಲಿ ಭೂಗರ್ಭ ಶಾಸ್ತ್ರಜ್ಞರ ನೆರವಿನಿಂದ ಬೋರ್ ವೆಲ್ ಬಿಂದುವನ್ನು ಗುರುತಿಸಲು ಆದೇಶ ಹೊರಡಿಸಿದ್ದು ಇತರೆ ಜಿಲ್ಲೆಗಳಲ್ಲಿ 2 ರಿಂದ 5 ಎಕರೆ ಜಮೀನುಗಳಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೋರ್ ವೆಲ್ ನ ವೆಚ್ಚವು ಅಂದಾಜು 3 ಲಕ್ಷ ರೂಪಾಯಿಗಳಷ್ಟಿದ್ದು ಸರ್ಕಾರವು ರೈತರಿಗೆ 2.50 ಲಕ್ಷ ಸಬ್ಸಿಡಿ ನೀಡುತ್ತಿದ್ದು ಉಳಿಕೆ 50,000 ರೂಪಾಯಿಗೆ ವಾರ್ಷಿಕ 4% ದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಿದ್ದು 3 ವರ್ಷಗಳ ಮರುಪಾವತಿ ಕಾಲಾವಕಾಶವನ್ನು ನಿಗದಿ ಮಾಡಿದೆ.
ಈ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು:-
- ಸಣ್ಣ ಮತ್ತು ಕೆಳ ಹಂತದ ರೈತರಾಗಿರಬೇಕು.
- ಫಲಾನುಭವಿಗಳು 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
- ಕಡ್ಡಾಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
- ವಾರ್ಷಿಕ ಆದಾಯವು ಗರಿಷ್ಠ 22,000 ಕ್ಕಿಂತ ಹೆಚ್ಚು ಮೀರಿರಬಾರದು.
ಈ ಯೋಜನೆಯಿಂದ ಆಗೋ ಲಾಭ ಏನು..?
- ಈ ಯೋಜನೆಯಿಂದಾಗಿ 20,107 ರೈತರ ಒಟ್ಟು 50, 267 ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯವು ದೊರೆತಿದೆ.
- 284 ಕೋಟಿ ರೂಪಾಯಿಗಳ ವೆಚ್ಚದಲ್ಲಿ 58,145 ಬೋರ್ ವೆಲ್ ಗಳನ್ನು ಒದಗಿಸಿಲಾಗಿದೆ.
- ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅವುಗಳಿಗೆ ಬಿಡಿ ಭಾಗಗಳು ಮತ್ತು ವಿದ್ಯುತ್ ಸಂಪರ್ಕ ಸೌಲಭ್ಯವನ್ನೂ ಸಹ ನೀಡಲಾಗಿದೆ.