ಟೆಕ್ ಗುರು ಎನಿಸಿಕೊಂಡಿರುವ ಗೂಗಲ್ ವಿಡಿಯೊ ಕಾಲಿಂಗ್‌ಗಾಗಿ ‘ಗೂಗಲ್ ಡುಯೋ'(Google Duo) ಆಪ್ ಅನ್ನು ಪರಿಚಯಿಸಿದೆ. ಈ ಆಪ್‌ನಲ್ಲಿ ವಿಡಿಯೊ ಕಾಲಿಂಗ್ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ವಿಡಿಯೊ ಕಾಲಿಂಗ್ ಭಾರೀ ಟ್ರೆಂಡ್ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಮತ್ತಷ್ಟು ಹೊಸತನಗಳನ್ನು ಅಳವಡಿಸಲು ಸಜ್ಜಾಗಿದೆ.
ಹೌದು, ಗೂಗಲ್ ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಇದೀಗ ‘ಗ್ರೂಪ್ ವಿಡಿಯೊ ಕಾಲಿಂಗ್’ ಮತ್ತು ‘ಡಾಟಾ ಸೇವಿಂಗ್ ಮೋಡ್’ ಫೀಚರ್ಸ್‌ಗಳನ್ನು ಸೇರಿಸಲಿದೆ. ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಫೇಸ್ ಟು ಫೇಸ್ ವಿಡಿಯೊ ಕಾಲಿಂಗ್ ಮಾಡಲು ಇಚ್ಚಿಸುತ್ತಿದ್ದು, ಈಗಾಗಲೇ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಗೂಗಲ್ ಡುಯೋ ಆಪ್‌ನ ಬಳಕೆದಾರರ ಸಂಖ್ಯೆಯು ಸಹ ಏರಿಕೆಗತಿಯಲ್ಲಿದೆ. ಎಂದು ಗೂಗಲ್ ಪ್ರೊಡೆಕ್ಟ್ ಮ್ಯಾನೇಜರ ಶ್ವೇತಾ ವೈದ್ಯ ಹೇಳಿದ್ದಾರೆ.ಎರಡು ಹೊಸ ಫೀಚರ್ಸ್‌ಗಳೊಂದಿಗೆ ಕಂಪನಿಯು ಬಳಕೆದಾರರು ಖಾಸಗಿತನದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದು, ವಿಡಿಯೊ ಕಾಲಿಂಗ್ ಗುಣಮಟ್ಟವು ಹೈ ಕ್ವಾಲಿಟಿಯಲ್ಲಿರುತ್ತದೆ. ಹಾಗಾದರೇ ಗೂಗಲ್ ಡುಯೋ ಕಾಲಿಂಗ್ ಆಪ್ ನೂತನ ಫೀಚರ್ಸ್‌ಗಳು ಏನೆಲ್ಲಾ ಪ್ರಯೋಜನ ಒದಗಿಸಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಡೇಟಾ ಸೇವಿಂಗ್ ಹೆಚ್ಚು ಜನಪ್ರಿಯವಾಗುತ್ತಿರುವ ಗೂಗಲ್ ಡುಯೋ ವಿಡಿಯೊ ಕಾಲಿಂಗ್ ಆಪ್‌ನಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಡೇಟಾ ಸೇವಿಂಗ್ ಮೋಡ್ ಆಯ್ಕೆಯನ್ನು ಸೇರಿಸಲಿದ್ದು, ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳುವ ಮೂಲಕ ಬಳಕೆದಾರರು ಶೇ.50% ಮೊಬೈಲ್ ಡಾಟಾ ಉಳಿಸಿಬಹುದು. ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಸೇರಿಕೊಳ್ಳಲಿದೆ ಎನ್ನಲಾಗಿದೆ.ಗ್ರೂಪ್ ವಿಡಿಯೊ ಕಾಲಿಂಗ್ ಗೂಗಲ್ ಡುಯೋ ಆಪ್‌ನಲ್ಲಿ ಸಂಸ್ಥೆಯು ಹೊಸದಾಗಿ ಗ್ರೂಪ್ ವಿಡಿಯೊ ಕಾಲಿಂಗ್ ಆಯ್ಕೆಯನ್ನು ಸೇರಿಸಲಿದ್ದು, ಗ್ರೂಪ್ ಕಾಲಿಂಗ್ ಫೀಚರ್‌ನಲ್ಲಿ ಒಂದು ಬಾರಿಗೆ ಗರಿಷ್ಠ 8 ಸದಸ್ಯರೊಂದಿಗೆ ಕಾಲ್ ಕನೆಕ್ಟ್ ಮಾಡಬಹುದಾಗಿದೆ. ಗ್ರೂಪ್ ವಿಡಿಯೊ ಕಾಲಿಂಗ್ ಆಯ್ಕೆ ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎನ್ನಲಾಗುತ್ತಿದೆ.
ಭದ್ರತೆ ಗೂಗಲ್ ಎರಡು ಮಹತ್ತರ ಫೀಚರ್ಸ್‌ಗಳನ್ನು ಸೇರಿಸಲಿದ್ದು, ಇದರೊಂದಿಗೆ ಬಳಕೆದಾರರ ಕಾಲಿಂಗ್ ಮತ್ತು ಮೆಸೆಜ್‌ಗೆ ಸುರಕ್ಷತೆ ಒಸಗಿಸಲು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಭದ್ರತೆ ನೀಡುತ್ತದೆ. ಬಳಕೆದಾರಿಗೆ ತಮ್ಮ ಗ್ರೂಪ್ ಕಾಲಿಂಗ್‌ನಲ್ಲಿ ಖಾಸಗಿತನ ಕಾಪಾಡಲು ಈ ಆಯ್ಕೆ ಉಪಯುಕ್ತವೆನಿಸಲಿದೆ.ಡಾಟಾ ಬಳಕೆ ಲಿಮಿಟ್ ಡಾಟಾ ಬಳಕೆಯಲ್ಲಿ ಲಿಮಿಟ್ ಆಯ್ಕೆ ಸಹ ಇರಲಿದ್ದು, ಈ ಆಯ್ಕೆಯು ಮೊಬೈಲ್ ಡಾಟಾ ಮತ್ತು ವೈಫೈ ನೆಟವರ್ಕ್ ಸೌಲಭ್ಯದ ಬಳಕೆಯಲ್ಲಿಯು ಲಭ್ಯವಾಗಲಿದೆ. ಭಾರತ, ಇಂಡೊನೇಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಬಳಕೆದಾರರಿಗೆ ಡಾಟಾ ಬಳಕೆಯಲ್ಲಿ ಲಿಮಿಟ್ ಆಯ್ಕೆ ದೊರೆಯಲಿದೆ.ಫೀಚರ್ಸ್ ಸೇರ್ಪಡೆ ಗೂಗಲ್‌ನ ಎರಡು ಹೊಸ ಫೀಚರ್ಸ್‌ಗಳು ಭಾರತದ ಅಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಐಓಎಸ್ ಮಾದರಿಯ ಓಎಸ್ ಬಳಕೆದಾರರಿಗೂ ದೊರೆಯಲಿದೆ. ನೂತನ ಅಪ್‌ಡೇಟ್ ವರ್ಷನ್‌ನಲ್ಲಿ ಈ ಫೀಚರ್ಸ್‌ಗಳು ಸೇರಿಕೊಳ್ಳಲಿವೆ.