Health

ಹಲವು ರೋಗಗಳಿಗೆ ರಾಮಬಾಣ ಗೋಲ್ಡನ್ ಮಿಲ್ಕ್​. ಇದರ ಬಗ್ಗೆ ನಿಮಗೆ ಗೊತ್ತಾ?

By admin

June 01, 2020

ಅರಿಶಿನ ಬೆರೆತ ಹಾಲು ಭಾರತೀಯರಿಗೆ ಅಪರಿಚಿತವೇನಲ್ಲ. ಯಾವಾಗ ಶೀತ ಕೆಮ್ಮು ನೆಗಡಿ ಜ್ವರ ಬಂತೋ ನಮ್ಮ ಹಿರಿಯರು ಮೊದಲಾಗಿ ಅರಿಶಿನ ಪುಡಿ ಹಾಕಿ ಕುದಿಸಿದ ಹಾಲನ್ನು ಬಿಸಿಬಿಸಿಯಾಗಿ ಕುಡಿಸುತ್ತಿದ್ದರು. ಈ ಹಾಲು ನಮಗೆ ಔಷಧಿಯ ರೂಪದಲ್ಲಿ ಪರಿಚಿತವೇ ಹೊರತು ತೂಕ ಇಳಿಸುವ ಉಪಾಯದ ರೂಪದಲ್ಲಲ್ಲ! ನಮಗೆ ಕಾಣದ ಈ ಗುಣವನ್ನು ವಿದೇಶೀಯರು ಈಗಾಗಲೇ ಕಂಡುಕೊಂಡು ವ್ಯಾಪಾರ ಪ್ರಾರಂಭಿಸಿಬಿಟ್ಟಿದ್ದಾರೆ.

‘ಟರ್ಮರಿಕ್ ಲ್ಯಾಟೇ’ ಅಥವಾ “ಗೋಲ್ಡನ್ ಮಿಲ್ಕ್” ಎಂಬ ಅಂದ ಚೆಂದದ ಆಕರ್ಷಕ ಹೆಸರುಗಳನ್ನಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಚೆಂದದ ಹೆಸರಿಗೆ ಮರುಳಾಗಿ ದುಬಾರಿ ಬೆಲೆ ತೆತ್ತು ಕೊಳ್ಳುವ ಬದಲು ಇದನ್ನು ಮನೆಯಲ್ಲಿಯೇ ತಯಾರಿಸಿ ಕೊಳ್ಳುವುದು ಅತಿ ಸುಲಭ. ಒಂದು ಲೋಟ ಹಾಲನ್ನು ಚೆನ್ನಾಗಿ ಬಿಸಿ ಮಾಡಿ ಕುದಿ ಬರುವ ಮುನ್ನ ಒಂದು ಲೋಟಕ್ಕೆ ಕಾಲು ಚಿಕ್ಕಚಮಚದಷ್ಟು ಅರಿಶಿನ ಪುಡಿ ಬೆರೆಸಿ ಕದಡಿ ಉರಿ ಆರಿಸಿದರೆ ಆಯ್ತು. ಅರಿಶಿನ ಬೆರೆತ ಹಾಲು ಸಿದ್ಧ.

ಮೆದುಳಿಗೆ ಪ್ರಯೋಜನಕಾರಿ ಗೋಲ್ಡನ್ ಮಿಲ್ಕ್​ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರೊಂದಿಗೆ ದಾಲ್ಚಿನ್ನಿ ಮತ್ತು ಶುಂಠಿಯನ್ನು ಸೇರಿಸಿದರೆ, ಅದರ ಪ್ರಯೋಜನವು ಅನೇಕ ಪಟ್ಟು ಹೆಚ್ಚಾಗುತ್ತದೆ. ದಾಲ್ಚಿನ್ನಿ ಬಳಸುವುದರಿಂದ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಶುಂಠಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ.

ಗೋಲ್ಡನ್ ಹಾಲಿನಲ್ಲಿ ಅಥವಾ ಅರಿಶಿನದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಗಳಿವೆ. ಉರಿಯೂತ ಅಥವಾ ಗಾಯ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ. ಕ್ಯಾನ್ಸರ್, ಆಲ್ಜೈಮರ್, ಹೃದ್ರೋಗ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ ತೊಂದರೆ ಇರುವವರು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ.