ಸತತ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ತರುವಂತೆ ಮಾಡಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಚಿನ್ನದ ದರ ಇಳಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ಗೊತ್ತು ಆದರೆ ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10ಗ್ರಾಂ ಚಿನ್ನಕ್ಕೆ38,072 ರೂ. ಆಗಿದೆ.
ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಒಂದು ಕೆ.ಜಿ ಬೆಳ್ಳಿಗೆ45,266 ರೂ. ಆಗಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಒಟ್ಟು2,000 ರೂ. ನಷ್ಟು ಇಳಿಕೆ. ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದ್ದು, ಚಿನ್ನದ ದರದಲ್ಲಿ ಒಟ್ಟು ಶೇ.0. ರಷ್ಟು ಇಳಿಕೆ ಕಂಡ ಪರಿಣಾಮ ಪ್ರತಿ ಔನ್ಸ್’ಗೆ1,491..12 ಡಾಲರ್ ಆಗಿದೆ.