Sculpture of Hanuman, Hindu God, seated and with his scepter. On sale in a street market.

ಜ್ಯೋತಿಷ್ಯ

ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

By admin

August 27, 2019

ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು.

ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ

ಮಿಥುನ ರಾಶಿ ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ದಿಢೀರ್‌ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾವುದಕ್ಕೂ ಹಿಂದುಮುಂದು ಯೋಚಿಸಿ ಕಾರ್ಯಪ್ರವೃತ್ತರಾಗಿ.

ಕಟಕ ರಾಶಿ ನಿಮ್ಮ ಹತ್ತಿರದ ಜನರು ವಿನಾಕಾರಣ ಜಗಳಗಳಿಗೆ ಮುಂದಾಗುವ ಸಂಭವವಿದೆ. ಬೇಸರಿಸಬೇಡಿ. ಜೀವನದ ಪ್ರತಿ ಘಟನೆಯು ನಿಮಗೆ ಉತ್ತಮ ಪಾಠ ನೀಡುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ಸಿಂಹ ರಾಶಿ ನಿಮ್ಮ ಮಾತಿಗೆ ಬೆಲೆವುಂಟು ಎಂಬುದು ಒಳ್ಳೆಯದೇ. ಆದರೆ ಜನ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಹಾಗಾಗಿ ಮೇಲ್ನೋಟಕ್ಕೆ ನಿಮ್ಮಂತೆ ಇದ್ದರೂ ಅವರ ಒಳ ವಿಚಾರಧಾರೆಗಳು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದೇ ಆಗಿರುತ್ತದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಮಾಡುವುದು.

ಕನ್ಯಾ ರಾಶಿ ಎಷ್ಟೇ ರೀತಿಯ ಜನರು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ಜನಜೀವನಕ್ಕೆ ಹತ್ತಿರವಾದಂತೆ ಎನಿಸುತ್ತಿರುವುದರಿಂದ ಅವರ ಬಗ್ಗೆ ಗೌರವ ಆದರಗಳು ಹೆಚ್ಚಾಗುವುವು. ಎಲ್ಲೆಡೆಯೂ ನಿಮ್ಮ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯುವುದು.

ತುಲಾ ರಾಶಿ ನಿಮ್ಮ ಗುರಿಯನ್ನು ಬೆನ್ನುಹತ್ತಿ ಸೋತಿದ್ದೀರಿ ಎನ್ನುವ ಬಳಲಿಕೆ ಬೇಡ. ಮುನ್ನುಗ್ಗಿರಿ ಜಯಶೀಲರಾಗುವಿರಿ. ಪತ್ನಿಯ ಸಕಾಲಿಕ ಎಚ್ಚರಿಕೆ ಮಾತುಗಳನ್ನು ಆಲಿಸಿ ಮತ್ತು ಅದರಂತೆ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು. ಮುಂದೆ ಬರಬಹುದಾದ ಉತ್ತಮ ದಿನಗಳನ್ನು ಎದುರಿಸಲು ಸನ್ನದ್ಧರಾಗುವಿರಿ,

ವೃಶ್ಚಿಕ ರಾಶಿ ಬಹುರೂಪಿಯಾದ ಮತ್ತು ಅತ್ಯಂತ ಕರುಣಾಮಯಿಯಾದ ಭಗವಂತನ ಅನುಗ್ರಹ ನಿಮ್ಮ ಮೇಲಿರುವುದರಿಂದ ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಮನೆಗೆ ನೂತನ ಸದಸ್ಯನ ಸೇರ್ಪಡೆ ಸಾಧ್ಯತೆ ಇದೆ. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ.

ಧನಸ್ಸು ರಾಶಿ ಯಾರು ಏನೇ ಅನ್ನಲಿ, ಬಿಡಲಿ ನಿಮ್ಮ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದು ನಿಮ್ಮನ್ನು ಇಚ್ಛಿತ ಗುರಿ ಎಡೆಗೆ ಕರೆದುಕೊಂಡು ಹೋಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ನಿಮಗೆ ಸಂತಸ ನೀಡುವುದು. ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ಸಹಾಯ ಮಾಡುವರು.

ಮಕರ ರಾಶಿ ಹಳೆಯ ವ್ಯಾಜ್ಯಗಳು ನಿಮ್ಮನ್ನು ಬಳಲಿಸುತ್ತವೆ. ಶಾಂತಿಯಿಂದ ಇರಿ. ಮಾತು ಮಾತಿಗೂ ಆಣೆ ಪ್ರಮಾಣಗಳನ್ನು ಮಾಡದಿರಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೂ ಹೋಯಿತು ಎನ್ನುವಂತೆ ಮೌನ ಧರಿಸಿ. ಕುಟುಂಬದಲ್ಲಿ ಒಡಕು ಮೂಡುವ ಸಾಧ್ಯತೆ ಇದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೇ ಪ್ರಶ್ನೆಗಳು ಬರುತ್ತವೆ.

ಕುಂಭ ರಾಶಿ ಕೆಲಸದ ಸ್ಥಳದಲ್ಲಿ ಬಾಸ್‌ನಿಂದ ಪ್ರಶಂಸೆ ಪಡೆಯುವ ಅವಕಾಶ ಅಧಿಕವಾಗಿದೆ. ಮುಂದಿನ ಪದೋನ್ನತಿಗೆ ದಾರಿ ನಿರಾಳವಾಗುವುದು. ನಿಮ್ಮ ಕಾಯಕದಲ್ಲಿ ನಿಷ್ಠೆ ತೋರಿ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇರುವುದು. ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು.

ಮೀನ ರಾಶಿಹಿರಿಯರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ. ಅತಿ ಸೂಕ್ಷ್ಮಮತಿಗಳಾದ ನಿಮಗೆ ಕೆಲವು ವಿಚಾರಗಳನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಅಂತೆಯೇ ಒಂದು ಪ್ರಸಂಗವು ನಿಮ್ಮ ಚಿತ್ತ ಕ್ಷೋಭೆಯನ್ನು ಕದಡುವುದು.