ಸುದ್ದಿ

ಗಣಪತಿಗೆ ಮಾನವ ಮುಖ ಇರುವ ಜಗತ್ತಿನ ಏಕೈಕ ದೇವಾಲಯ! ಇಲ್ಲಿ ಗಜಮುಖನಿಗಲ್ಲ ನರ ಮುಖದ ಗಣಪತಿಗೆ ನಡೆಸಲಾಗುತ್ತದೆ ಪೂಜೆ…!!

By admin

July 13, 2019

ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು.

ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ. ದಂತಕಥೆಗಳ ಪ್ರಕಾರ ಪ್ರಭು ಶ್ರೀರಾಮ ಪಿತೃ ದೋಷ ನಿವಾರಣೆಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎನ್ನಲಾಗುತ್ತದೆ. ತನ್ನ ತಂದೆ ದಶರಥನ ಪಿಂಡ ಪ್ರದಾನವನ್ನು ಆತ ಸ್ವತಃ ಶಿವನ ಅಣತಿಯಂತೆ ಇಲ್ಲಿಯೆ ಮಾಡಿಸಿದ್ದನೆನ್ನಲಾಗುತ್ತದೆ.

ಹೆಸರೇ ಸೂಚಿಸುವಂತೆ ತಿಲ+ತರ್ಪಣ ಅಂದರೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ತರ್ಪಣ ನೀಡುವ ಸ್ಥಳ ಎಂದರ್ಥ. ಇವತ್ತಿಗೂ ಇಲ್ಲಿ ಪಿಂಡ ಪ್ರದಾನ ನಡೆಸುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಸ್ಥಳದ ಮೂಲ ಹೆಸರು ಮಂತ್ರವಾದಂ ಎಂಬುದಾಗಿದೆ. ರಾಮ ತನ್ನ ತಂದೆಯ ಪಿಂಡ ಪ್ರದಾನ ಕಾರ್ಯಗಳನ್ನು ನೆರವೇರಿಸುವಾಗ ನಾಲ್ಕು ಪಿಂಡಗಳು ಪದೆ ಪದೆ ಹುಳದ ರೂಪ ತಾಳುತ್ತವೆ.

ವ್ಯಥೆಯಿಂದ ರಾಮನು ಶಿವನನ್ನು ಧ್ಯಾನಿಸಲು ಶಿವನು ರಾಮನಿಗೆ ಮಂತ್ರವಾದಂ ಎಂಬ ಸ್ಥಳದಲ್ಲಿ ಪಿಂಡ ಪ್ರದಾನ ಕಾರ್ಯ ನಡೆಸಲು ಹೇಳುತ್ತಾನೆ. ಶಿವನ ಆಜ್ಞೆಯಂತೆಯೆ ರಾಮನು ಇಲ್ಲಿ ಪಿಂಡ ಪ್ರದಾನ ಮಾಡುವಾಗ ನಾಲ್ಕು ಪಿಂಡಗಳೂ ಶಿವಲಿಂಗದ ಆಕಾರ ತಾಳುತ್ತವೆ. ಈ ನಾಲ್ಕೂ ಲಿಂಗಗಳು ಆದಿ ವಿನಾಯಕ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಮುಕ್ತೀಶ್ವರರ್ ದೇವಾಲಯದಲ್ಲಿ ಇವೆ.

ಹೆಸರೇ ಸೂಚಿಸುವಂತೆ ತಿಲ+ತರ್ಪಣ ಅಂದರೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ತರ್ಪಣ ನೀಡುವ ಸ್ಥಳ ಎಂದರ್ಥ. ಇವತ್ತಿಗೂ ಇಲ್ಲಿ ಪಿಂಡ ಪ್ರದಾನ ನಡೆಸುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಸ್ಥಳದ ಮೂಲ ಹೆಸರು ಮಂತ್ರವಾದಂ ಎಂಬುದಾಗಿದೆ. ರಾಮ ತನ್ನ ತಂದೆಯ ಪಿಂಡ ಪ್ರದಾನ ಕಾರ್ಯಗಳನ್ನು ನೆರವೇರಿಸುವಾಗ ನಾಲ್ಕು ಪಿಂಡಗಳು ಪದೆ ಪದೆ ಹುಳದ ರೂಪ ತಾಳುತ್ತವೆ.

ವ್ಯಥೆಯಿಂದ ರಾಮನು ಶಿವನನ್ನು ಧ್ಯಾನಿಸಲು ಶಿವನು ರಾಮನಿಗೆ ಮಂತ್ರವಾದಂ ಎಂಬ ಸ್ಥಳದಲ್ಲಿ ಪಿಂಡ ಪ್ರದಾನ ಕಾರ್ಯ ನಡೆಸಲು ಹೇಳುತ್ತಾನೆ. ಶಿವನ ಆಜ್ಞೆಯಂತೆಯೆ ರಾಮನು ಇಲ್ಲಿ ಪಿಂಡ ಪ್ರದಾನ ಮಾಡುವಾಗ ನಾಲ್ಕು ಪಿಂಡಗಳೂ ಶಿವಲಿಂಗದ ಆಕಾರ ತಾಳುತ್ತವೆ. ಈ ನಾಲ್ಕೂ ಲಿಂಗಗಳು ಆದಿ ವಿನಾಯಕ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಮುಕ್ತೀಶ್ವರರ್ ದೇವಾಲಯದಲ್ಲಿ ಇವೆ.ತಮಿಳುನಾಡಿನ ಚಿದಂಬರಂನಲ್ಲಿಯೂ ಗಣೇಶನ ಮಾನವ ಮುಖದ ವಿಗ್ರಹವೊಂದಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಹೆಚ್ಚು ಐತಿಹ್ಯಗಳು ತಿಳಿದುಬಂದಿಲ್ಲ. ಭಾರತದಲ್ಲಿ ಹಲವಾರು ಸ್ಥಳಗಳು ಇನ್ನೂ ಅಜ್ಞಾತವಾಗಿಯೆ ಉಳಿದಿವೆ. ಈ ಸ್ಥಳಗಳ ಐತಿಹ್ಯಗಳನ್ನು ತಿಳಿದುಕೊಂಡರೆ ಎಷ್ಟೋ ಸತ್ಯಗಳು ಹೊರ ಜಗತ್ತಿಗೆ ತಿಳಿದು ಬರಬಹುದು.