ರೆಸಿಪಿ

ಮನೆಯಲ್ಲೇ ಕಾಲ್ ಸೂಪ್ ಮಾಡುವ ಸಿಂಪಲ್ ವಿಧಾನ…

By admin

February 25, 2019

ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ…

ಬೇಕಾಗುವ ಸಾಮಾಗ್ರಿಗಳು 1. ಮೇಕೆ ಕಾಲು – 2, 2. ಈರುಳ್ಳಿ – ಮೀಡಿಯಂ, 3. ಬೆಳ್ಳುಳ್ಳಿ – 2-3 ಎಸಳು4. ಶುಂಠಿ – ಸ್ವಲ್ಪ, 5. ಚಕ್ಕೆ – ಸ್ವಲ್ಪ, 6. ಲವಂಗ – 2-3, 7. ದನಿಯಾ ಪುಡಿ – ಅರ್ಧ ಚಮಚ8. ಕೆಂಪು ಮೆಣಸಿನಕಾಯಿ – ಖಾರಕ್ಕೆ ಬೇಕಾದಷ್ಟು, 9. ಕೊತ್ತಂಬರಿ ಸೊಪ್ಪು – ಸ್ವಲ್ಪ10. ಉಪ್ಪು – ರುಚಿಗೆ ತಕ್ಕಷ್ಟು, 11. ಎಣ್ಣೆ – 2 ಚಮಚ, 12. ಅರಿಶಿಣ – ಚಿಟಿಕೆ

ಮಾಡುವ ವಿಧಾನ* ಮೊದಲಿಗೆ ಅಂಗಡಿಯಿಂದ ಸುಟ್ಟು ತಂದ ಕಾಲನ್ನು ಚೆನ್ನಾಗಿ 2 ರಿಂದ 3 ಬಾರಿ ಶುದ್ಧ ನೀರಿನಲ್ಲಿ ತೊಳೆಯಬೇಕು.* ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.* ತಣ್ಣಗೆ ಆದ ಮೇಲೆ ಒಂದು ಮಿಕ್ಸರ್ ಜಾರ್‍ಗೆ ಹಾಕಿ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಜೊತೆಗೆ ಧನಿಯಾ, ಅರಿಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.* ಈಗ ಒಂದು ಕುಕ್ಕರ್ ಬಿಸಿಗಿಟ್ಟು, ಎಣ್ಣೆ ಹಾಕಿ ಬಿಸಿಯಾದ ಮೇಲೆ ತೊಳೆದ ಕಾಲುಗಳನ್ನು ಹಾಕಿ. 2 ನಿಮಿಷ ಫ್ರೈ ಮಾಡಿ.

* ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಉಪ್ಪು ಸೇರಿಸಿ, ಜಾಸ್ತಿ ನೀರು ಹಾಕಿ 3-5 ಕೂಗು ಕೂಗಿಸಿ.* ಸೂಪ್ ನೀರಿನಂತೆ ಇದ್ದರೆ ಕುಡಿಯಲು ಚೆನ್ನಾಗಿರುತ್ತದೆ. ಹೀಗಾಗಿ ಜಾಸ್ತಿ ನೀರು ಹಾಕಿ ಚೆನ್ನಾಗಿ ಕೂಗಿಸಬೇಕು.* ಕುಕ್ಕರ್ ಪ್ರೆಶರ್ ಇಳಿದ ಮೇಲೆ ಕಾಲನ್ನು ಬೇರ್ಪಡಿಸಿ, ಸೂಪನ್ನು ಪ್ರತ್ಯೇಕಿಸಿ.* ಸರ್ವ್ ಮಾಡುವಾಗ ಸೂಪ್‍ಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ. ಕುಡಿಯಲು ಚೆನ್ನಾಗಿರುತ್ತದೆ.* ಸೂಪ್‍ನೊಂದಿಗೆ ಕಾಲನ್ನು ಸೇವಿಸಬಹುದು ಅಥವಾ ಅದೇ ಕಾಲನ್ನು ಮೇಲೆ ತಿಳಿಸಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಾರು ಮಾಡಿಕೊಂಡು ಸೇವಿಸಬಹುದು.