ವರ್ಷಗಳ ಕಾಲ ಪ್ರೀತಿ ಮಾಡಿದ ಹುಡುಗಿಯರು ಮದುವೆ ವಿಚಾರ ಬಂದಾಗ ತಮ್ಮ ಮನಸ್ಸನ್ನು ಬದಲಿಸ್ತಾರೆ. ಪ್ರೀತಿಸಿದ ಅದೆಷ್ಟೋ ಹುಡುಗಿಯರು ಬಾಯ್ ಫ್ರೆಂಡ್ ಬಿಟ್ಟು ಬೇರೆ ಹುಡುಗನ ಕೈ ಹಿಡಿತಾರೆ. ಅಷ್ಟಕ್ಕೂ ಹುಡುಗಿಯರು ಯಾಕೆ ಹೀಗೆ ಮಾಡ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡದೆ ಇರುವುದಿಲ್ಲ.
ಮಹಿಳೆಯರು ಎಷ್ಟು ಮುಂದುವರೆದಿದ್ದರು ತಂದೆ-ತಾಯಿ ಪ್ರೀತಿ, ಭಯ ಅವರನ್ನು ಕಾಡುತ್ತದೆ. ಪ್ರೀತಿಸಿದ ಹುಡುಗನಿಗೆ ಪಾಲಕರು ಒಲ್ಲೆ ಎಂದ್ರೆ ಭಯ ಅವ್ರನ್ನು ಕಾಡುತ್ತದೆ. ತಂದೆ-ತಾಯಿಗೆ ನೋವು ನೀಡಲು ಮನಸ್ಸು ಮಾಡದ ಹುಡುಗಿಯರು ಪ್ರೇಮಿಯಿಂದ ದೂರ ಸರಿಯುತ್ತಾರೆ.
ಮದುವೆಗಿಂತ ಕೆಲಸಕ್ಕೆ ಇತ್ತೀಚಿನ ಹುಡುಗಿಯರು ಹೆಚ್ಚು ಒತ್ತು ನೀಡ್ತಿದ್ದಾರೆ. ಉತ್ತಮ ವೃತ್ತಿಯಲ್ಲಿರುವ ಹುಡುಗಿಯರು ಮದುವೆ ನಿರ್ಧಾರವನ್ನೂ ತಾವೇ ತೆಗೆದುಕೊಳ್ತಿದ್ದಾರೆ. ಪ್ರೀತಿ ಮಾಡುವಾಗ ಯಾವುದು ಹೆಚ್ಚು, ಯಾವುದು ಕಡಿಮೆ ಎಂಬ ಜ್ಞಾನವಿರುವುದಿಲ್ಲ. ದಿನಕಳೆದಂತೆ ಬಾಯ್ ಫ್ರೆಂಡ್ ನಿಂದ ಏನೆಲ್ಲ ಸಿಗಬಹುದು ಎಂಬುದು ಹುಡುಗಿಯರಿಗೆ ತಿಳಿಯುತ್ತ ಹೋಗುತ್ತದೆ. ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಹುದು ಎಂಬ ಮುನ್ಸೂಚನೆ ಸಿಕ್ಕ ತಕ್ಷಣ ಹುಡುಗಿಯರು ಬದಲಾಗ್ತಾರೆ.
ಜವಾಬ್ದಾರಿ, ಭಯ ಕೂಡ ಅವರನ್ನು ಕಾಡುತ್ತದೆ. ಏಕಾಂಗಿಯಾಗಿ ನಿರ್ಧಾರ ತೆಗೆದುಕೊಂಡು ಮದುವೆಯಾದ್ರೆ ಮುಂದೆ ಸಮಸ್ಯೆಯಾದ್ರೆ ಪಾಲಕರು ಬರುವುದಿಲ್ಲ. ಎಲ್ಲ ಸಮಸ್ಯೆ, ಜವಾಬ್ದಾರಿಯನ್ನು ತಾವೇ ನಿಭಾಯಿಸಬೇಕೆಂಬ ಭಯ ಅವರು ಹಿಂದೆ ಸರಿಯುವಂತೆ ಮಾಡುತ್ತದೆ.
ಆರಂಭದಲ್ಲಿ ಪ್ರೇಮಿ ಮಾತು, ವರ್ತನೆಗೆ ಹುಡುಗಿಯರು ಮನಸೋಲುತ್ತಾರೆ. ದಿನ ಕಳೆದಂತೆ ಸ್ಟೇಟಸ್ ಬಗ್ಗೆ ಚಿಂತೆ ಕಾಡುತ್ತದೆ. ಸಮಾಜ ಮುಂದೆ ತಲೆ ತಗ್ಗಿಸುವ ಪ್ರಸಂಗ ಬರಬಹುದು ಎನ್ನುವ ಕಾರಣಕ್ಕೆ ಬ್ರೇಕ್ ಅಪ್ ಮಾಡಿಕೊಳ್ತಾರೆ.