ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ.
ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು.
ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದರು. ಮಧ್ಯಾಹ್ನ ನಾವು ಅಂತ್ಯ ಸಂಸ್ಕಾರದ ಸಮಯದ ನಿಗದಿ ಮಾಡುತ್ತೇವೆ. ಅಪಾರ್ಟ್ ಮೆಂಟ್ ಬಳಿ, ಸಾರ್ವಜನಿಕರು ರಾಜಕಾರಣಿಗಳು ಬರುವುದು ಬೇಡ ಎಂದು ಪತ್ನಿ ಸರಸ್ವತಿ ಕಾರ್ನಾಡ್ ಮನವಿ ಮಾಡಿಕೊಂಡಿದ್ದಾರೆ.
ಸಾಹಿತಿಗಳನ್ನು ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಈ ಹಿಂದೆ ಭಾರೀ ಟೀಕೆ ವ್ಯಕ್ತವಾಗಿತ್ತು. ಜಿ ಎಸ್ ಶಿವರುದ್ರಪ್ಪ, ಅನಂತಮೂರ್ತಿ ಅಂತ್ಯಕ್ರಿಯೆ ವೇಳೆ ಕಲಾಗ್ರಾಮದಲ್ಲಿ ಸ್ಥಳ ನೀಡುವ ಬಗ್ಗೆ ಭಿನ್ನ ಅಭಿಪ್ರಾಯ ಗಳು ಹೊರಬಿದ್ದಿತ್ತು. ಈ ಸಂದರ್ಭದಲ್ಲಿ ಸಾವಿನಲ್ಲೂ ರಾಜಕೀಯ ಬೇಡ ಎಂಬ ಅಭಿಪ್ರಾಯವನ್ನ ತಮ್ಮ ಪತ್ನಿ ಬಳಿ ತಿಳಿಸಿ ಸರ್ಕಾರಿ ಗೌರವ, ಸರ್ಕಾರಿ ಜಾಗ ಬೇಡ ಎಂದು ತಿಳಿಸಿದ್ದರು.