ಸುದ್ದಿ

ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗುತ್ತಾರಾ ಎನ್ನುವುದಕ್ಕೆ ಇಲ್ಲಿದೆ ನೋಡಿ ಉತ್ತರ,.!ನೋಡಿದ್ರೆ ಬೆಚ್ಚಿ ಬೀಳ್ತಿರಾ,..!!

By admin

September 27, 2019

ಮಂಡ್ಯ: ಗುತ್ತಲು ರಸ್ತೆಯಲ್ಲಿ 2018ರ ಅ.2ರ ಸಂಜೆ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗಿದ್ದಾರೆ. ಆ ದೆವ್ವಗಳ ಚಿತ್ರಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂಬ ಚಿತ್ರಸಹಿತ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿವೆ.

ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಬಳಿ ಬಿಳಿ ಬಟ್ಟೆ ತೊಟ್ಟಿದ್ದ ಮಹಿಳೆಯಂತೆ ನಿಂತು ಡ್ರಾಪ್ ಕೇಳುವ ವಿಡಿಯೋ ವೈರಲ್ ಆಗಿ. ಅದು ದೆವ್ವವೇ ಇರಬೇಕು ಎಂಬ ಚರ್ಚೆಗಳು ನಡೆದಿದ್ದವು.

ಅದರ ಬೆನ್ನಲ್ಲೇ ನಗರದ ಗುತ್ತಲು ರಸ್ತೆ ಬದಿಯಲ್ಲಿ ಮತ್ತು ಬೇಕರಿಯೊಂದರ ಪಕ್ಕ ದೆವ್ವಗಳು ನಿಂತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಕಾರಿನಲ್ಲಿ ಬರುತ್ತಿದ್ದಾಗ ದೆವ್ವಗಳು ನಿಂತಿರುವುದು ಕಂಡುಬಂದಿದೆ. ಅನುಮಾನಗೊಂಡ ಅವರು ಬೆಳಗ್ಗೆ ಸ್ಥಳಕ್ಕೆ ಬಂದು ಅಕ್ಕಪಕ್ಕದ ಅಂಗಡಿಗಳಲ್ಲಿ ಇದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಸೆ.12ರಂದು ಮಧ್ಯರಾತ್ರಿ 2.22 ನಿಮಿಷದಲ್ಲಿ ದೆವ್ವದ ರೂಪಗಳು ಕಾಣಿಸಿಕೊಂಡಿವೆ. ಸಿಸಿ ಕ್ಯಾಮರಾದ ದೃಶ್ಯಗಳು ಹಾಗೂ ಚಿತ್ರಗಳು ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ ಜನತೆ ಭಯಭೀತರಾಗಿದ್ದಾರೆ.

ಕಳೆದ ವರ್ಷ ಗಾಂಧಿ ಜಯಂತಿಯಂದು ನಡೆದಿತ್ತು ಅಪಘಾತ : 2018ರ ಅ.2ರ ಸಂಜೆ ಪಾನಮತ್ತನಾಗಿದ್ದ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಚಾಲನೆ ಮಾಡಿಕೊಂಡು ಬಂದಿದ್ದ. ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಗಿರಿಜಮ್ಮ (45), ರಾಹುಲ್ (18), ಶಶಾಂಕ್ (18) ಮತ್ತು ರಫೀಕ್ (40) ಎಂಬುವರ ಮೇಲೆ ಲಾರಿ ಹರಿದಿತ್ತು. ಇದರಿಂದಾಗಿ ನಾಲ್ವರು ಮೃತಪಟ್ಟಿದ್ದರು. 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅವರೇ ದೆವ್ವಗಳಾಗಿದ್ದಾರೆ ಎಂಬ ಆತಂಕ, ಚರ್ಚೆಗಳು ಗುತ್ತಲು ರಸ್ತೆ ಮತ್ತು ನಗರ ಪ್ರದೇಶದಲ್ಲಿ ನಡೆದಿವೆ.