ಸುದ್ದಿ

ವಿಘ್ನ ವಿನಾಯಕ,ಗಣೇಶನಿಗೇ ಇನ್ಸೂರೆನ್ಸ್..ಇದನ್ನೊಮ್ಮೆ ನೋಡಿ ….!

By admin

August 29, 2019

ಹಿಂದೂಗಳ ಯುನಿವರ್ಸಲ್ ಹಬ್ಬ ಗಣೇಶ ಚತುರ್ಥಿಗೆ ಇನ್ನೇನು ಮೂರೇ ದಿನ. ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಕಡೆ, ಗಣೇಶನ ವಿವಿಧ ಭಂಗಿಯ ವಿಗ್ರಹಗಳು ಈಗಾಗಲೇ ಪೆಂಡಾಲ್ ಗೆ ಬಂದು ಸೇರುತ್ತಿವೆ. ದೇಶದ ಎಲ್ಲ ಕಡೆ ಗಣೇಶ ಹಬ್ಬ ಆಚರಿಸಿದರೂ, ಮಹಾರಾಷ್ಟ್ರದಲ್ಲಿ ಒಂದು ಕೈಮೇಲು. ಇಲ್ಲಿ ಕೆಲವೊಂದು ಕಡೆ, ಗಣೇಶನಿಗೆ ವಿಮೆ ಮಾಡಿಸುವ ಪದ್ದತಿಯನ್ನು ರೂಢಿಸಿಕೊಂಡು ಬರಲಾಗಿದೆ. ಗಣೇಶ ಚತುರ್ಥಿ;

ಪರಿಸರಸ್ನೇಹಿ ಗಣಪನ ಹಬ್ಬಕ್ಕೆ ದಾವಣಗೆರೆಯಲ್ಲಿ ತಯಾರಿ ಮುಂಬೈ ಸೆಂಟ್ರಲ್ ಭಾಗದ ಕಿಂಗ್ಸ್ ಸರ್ಕಲ್ ನಲ್ಲಿ ಗೌಡ ಸಾರಸ್ವತ ಬ್ರಾಹಣ (ಜಿಎಸ್ಬಿ) ಸಮುದಾಯದವರು, ವರ್ಷ ವರ್ಷ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಈ ವಿನಾಯಕನಿಗೆ ದೇಶದ ‘ಶ್ರೀಮಂತ ಗಣೇಶ’ ಎಂದೇ ಹೆಸರು.

ಕಾರಣ, ಒಂದು ಅತಿ ವೈಭೋವೋಪಿತವಾಗಿ ನಡೆಯುವ ಗಣೇಶೋತ್ಸವ ಮತ್ತು ಈ ಗಣೇಶನಿಗೆ ಮಾಡಿಸುವ ಇನ್ಸೂರೆನ್ಸ್ ಮೊತ್ತ. ಈ ಬಾರಿಯ ಉತ್ಸವಕ್ಕೆ ಗಣೇಶನಿಗೆ ಬರೋಬ್ಬರಿ 266.65 ಕೋಟಿ ರೂಪಾಯಿ ವಿಮೆಯನ್ನು ಮಾಡಿಸಲಾಗಿದೆ. ” ರಾಷ್ಟ್ರೀಕೃತ ವಿಮಾ ಕಂಪನಿಯಿಂದ, ಮುನ್ನೆಚ್ಚರಿಕಾ ಕ್ರಮವಾಗಿ ನಾವು ಹಲವಾರು ಅಪಾಯಗಳಿಗೆ ವಿಮೆ ಮಾಡಿಸಿ ಕೊಂಡಿದ್ದೇವೆ” ಎಂದು ಜಿಎಸ್ಬಿ ಸೇವಾ ಮಂಡಲ್ ವಕ್ತಾರ ಸತೀಶ್ ನಾಯಕ್ ಹೇಳಿದ್ದಾರೆ. ” 20.40 ಕೋಟಿ ರೂ.ಗಳ ವಿಮೆಯನ್ನು ಚಿನ್ನ, ಬೆಳ್ಳಿ ಮತ್ತು ಆಭರಣಗಳಿಗೆ, ಸ್ವಯಂಸೇವಕರು, ಪುರೋಹಿತರು, ಅಡುಗೆಯವರು, ಚಪ್ಪಲ್ ಸ್ಟಾಲ್ ನಲ್ಲಿನ ಕೆಲಸಗಾರರು,

ಪಾರ್ಕಿಂಗ್ ಪ್ರದೇಶದಲ್ಲಿ ಕೆಲಸ ಮಾಡುವವರು ಮತ್ತು ಭದ್ರತಾ ಸಿಬ್ಬಂದಿಗಳಿಗೆ 224.90 ಕೋಟಿ ರೂಪಾಯಿ ವೈಯಕ್ತಿಕ ಅಪಘಾತ ವಿಮೆಯನ್ನು ಮಾಡಿಸಲಾಗಿದೆ” ಎಂದು ನಾಯಕ್ ಹೇಳಿದ್ದಾರೆ. ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮಣ್ಣಿನ ಗಣಪತಿ ಉಚಿತವಾಗಿ ಪಡೆಯಿರಿ ” ಇದರ ಜೊತೆಗೆ, ಭೂಕಂಪ, ಬೆಂಕಿ ಅವಗಢಕ್ಕೆ ಒಂದು ಕೋಟಿ, ಇನ್ನುಳಿದಂತೆ 20.35 ಕೋಟಿ ರೂಪಾಯಿ ಸಾರ್ವಜನಿಕ ಸ್ವತ್ತುಗಳು, ಪೆಂಡಾಲ್ ಮತ್ತು ಬರುವ ಭಕ್ತರ ವಿಮೆಗಾಗಿ ಮೀಸಲಿಡಲಾಗುವುದು. ಈ ಉತ್ಸವ ಐದು ದಿನ ನಡೆಯಲಿದೆ” ಎಂದು ನಾಯಕ್ ಹೇಳಿದ್ದಾರೆ.