ಗಂಡ ಹೆಂಡತಿ” ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಕೇಳಿದ್ದಾರೆ.
ನಾನು ನನ್ನ ಅನುಭವ ಹಾಗೂ ಜೀವನದಲ್ಲಿ ನಡೆದ ಸತ್ಯವನ್ನೇ ಹೇಳಿಕೊಂಡಿದ್ದೇನೆ.ಗಂಡ ಹೆಂಡತಿ ಚಿತ್ರದ ವೇಳೆ ನಡೆದ ಘಟನೆಗಳ, ನನ್ನ ಅನುಭವಗಳನ್ನು ನಾನು ಮೀಟೂ ಅಭಿಯಾನದ ಮೂಲಕ ಹಂಚಿಕೊಂಡಿದ್ದೆ. ಇದರಿಂದ ಆ ಚಿತ್ರ ನಿರ್ದೇಶಕರಿಗೆ, ನಿರ್ದೇಶಕರ ಸಂಘದ ಸದಸ್ಯರಿಗೆ ನೋವಾಗಿದೆ. ನನಗೆ ಯಾರನ್ನೂ ನೋವು ಮಾಡಬೇನ್ನುವುದಿಲ್ಲ. ಯಾರ ಜೀವನ ಹಾಳಾಗಬೇಕೆಂದು ನಾನು ಬಯಸಲ್ಲ.
ನನ್ನ ಉದ್ದೇಶ ಯಾರ ಹೆಸರು ಹಾಗೂ ಜೀವನವನ್ನು ಹಾಳು ಮಾಡಬೇಕೆಂದು ಇರಲಿಲ್ಲ.ಹಿರಿಯ ನಟ ಅಂಬರೀಶ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ಮಾತಿಗೆ ಬೆಲೆಕೊಟ್ಟು ನಾನು ನಿರ್ದೇಶಕರ ಹಾಗೂ ಚಿತ್ರತಂಡದ ಸರ್ವರಲ್ಲಿ ಕ್ಷಮೆ ಬೇಡುತ್ತೇನೆ ಎಂದಿದ್ದಾರೆ.