ದೇಗುಲ ದರ್ಶನ

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರತಿಯೊಬ್ಬರಿಗೂ ಇನ್ಮುಂದೆ ಸಿಗಲಿದೆ ಫ್ರೀ ಲಡ್ಡು.

By admin

January 06, 2020

ವೈಕುಂಠ ಏಕಾದಶಿ ಪ್ರಯುಕ್ತ 1.70 ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈದರ್ಶನಕ್ಕೆ 1 ಲಕ್ಷದ 80 ಸಾವಿರ ಭಕ್ತರಿಗೆ ಮಾತ್ರ ವೈಕುಂಠ ದರ್ಶನ ಕಲ್ಪಿಸಲಾಗಿದೆ. ತಿರುಪತಿ -ತಿರುಮಲದ ದೇಗುಲದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ಸಾನಿಧ್ಯದಲ್ಲಿ ಜನವರಿ 6 ಮತ್ತು 7ರಂದು 2 ದಿನಗಳ ಕಾಲ ವೈಕುಂಠ ಏಕಾದಶಿ – ದ್ವಾದಶಿ ಪ್ರಯುಕ್ತ ಭಕ್ತಾಧಿಗಳಿಗೆ ವೈಕುಂಠ ದ್ವಾರ ದರ್ಶನ ಕಲ್ಪಿಸಲಾಗಿದೆ.

ಜನವರಿಯಂದು 21,28 ರಂದು ದಿವ್ಯಾಂಗರಿಗೆ, ಮಾರ್ಚ್ 22 ಮತ್ತು 29 ರಂದು ಹಸುಗೂಸು ಹೊಂದಿರುವ ತಂದೆ ತಾಯಿಯರಿಗೆ ದೇವರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆಲವು ದಿನಗಳಿಂದ ಕಾಲ್ನಡಿಗೆಯಲ್ಲಿ ದೇಗುಲಕ್ಕೆ ಬಂದು ಧರ್ಮ ದರ್ಶನ ಮಾಡುವ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ದೇಗುಲಕ್ಕೆ ಬರುವ ಪ್ರತೀ ಭಕ್ತರಿಗೂ ಒಂದೊಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

ತಿರುಮಲ ಯಾತ್ರಿಕರಿಗೆ ಹೊಸ ವರ್ಷದ ಗಿಫ್ಟ್ ಕೊಡಲು ಟಿಟಿಡಿ ತೀರ್ಮಾನಿಸಿದ್ದು, ದೇವರ ದರ್ಶನಕ್ಕೆ ಬರುವ ಪ್ರತಿ ಭಕ್ತರಿಗೂ ಇನ್ನು ಮುಂದೆ ಉಚಿತ ಲಡ್ಡು ವಿತರಿಸಲು ನಿರ್ಧರಿಸಲಾಗಿದೆ. ತಿರುಮಲದಲ್ಲಿರುವ ತಿಮ್ಮಪ್ಪನ ದೇಗುಲದಲ್ಲಿ ನಿತ್ಯ ಸುಮಾರು 3 ಲಕ್ಷ ಲಡ್ಡುಗಳ ವಿತರಣೆಯಾಗುತ್ತಿದ್ದು, ಈ ಪೈಕಿ 80 ಸಾವಿರದಿಂದ ಒಂದು ಲಕ್ಷದವರೆಗೂ ಲಡ್ಡುಗಳನ್ನು ಉಚಿತವಾಗಿ ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ. ಅಂದರೆ ಪ್ರತೀ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.