ಫ್ಲೋರೋಸಿಸ್ ಎಂಬದು ಅತಿಯಾದ ಫ್ಲೋರೈಡ್ ಸೇವನೆಯಿಂದ ಬರುತ್ತದೆ. ದುಷ್ಪರಿಣಾಮಕಾರಿ ಫ್ಲೋರೈಡ್ ಅಂತರ್ಜಲದಲ್ಲಿ ಕಂಡುಬರುತ್ತದೆ. ಕಲ್ಲುಬಂಡೆಗಳಲ್ಲಿರುವ ನೀರಿನಲ್ಲಿ ಹೆಚ್ಚಾಗಿ ಫ್ಲೋರೈಡ್ ಅಂಶ ದೃಢಪಟ್ಟಿರುತ್ತದೆ. ಜೀವರಾಶಿಗಳು ಫ್ಲೋರೈಡ್‌ಯುಕ್ತ ನೀರನ್ನು ಸೇವನೆ ಮಾಡುವುದರಿಂದ, ಫ್ಲೋರೋಸಿಸ್ ನಿಂದ ಬಳಲುತ್ತಾರೆ. ಸಂಶೋಧಕಗಳ ಪ್ರಕಾರ ಫ್ಲೋರೈಡ್ ಮಕ್ಕಳ ಬುದ್ಧಿಮತ್ತೆಯ ಪ್ರಮಾಣದಲ್ಲಿ ಪ್ರಭಾವ ಬೀರಿರುವುದನ್ನು ದಾಖಲಿಸಿದ್ದಾರೆ.
ದೀರ್ಘಕಾಲ ಫ್ಲೋರೈಡ್ ಸೇವನೆ ಮಾಡುವುದರಿಂದ ದಂತ ಮತ್ತುಮೂಳೆಗಳಲ್ಲದೆ, ಇತರೆ ಭಾಗದಲ್ಲೂ ದುಃಷ್ಪರಿಣಾಮಗಳು ಬೀರುತ್ತಿವೆ. ಸಕಲ ಅಂಗಾAಗಗಳ ಮೇಲೆಫ್ಲೋರೈಡ್ ಪ್ರಭಾವ ಬೀರುತ್ತದೆ ಹಾಗೂ ಪ್ರಮುಖವಾಗಿ ಹೃದಯ, ಸ್ವಾಶಕೊಶ, ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಮತ್ತು ಮೂತ್ರಪಿಂಡದಲ್ಲಿ ಕೂಡ ಇದರ ಪ್ರಭಾವವನ್ನುನೋಡಬಹುದು. ಗರ್ಭಿಣಿಯರಲ್ಲಿ ಫ್ಲೋರೈಡ್ ನಿಂದ ಥೈರಾಯ್ಡ್, ಪ್ರಿ-ಎಕ್ಲಾ೦ಪ್ಸಿಯಾ ಹಾಗೂ ರಕ್ತಹೀನತೆಯ ಸಮಸ್ಯೆಗಳು ದಾಖಲೆಯಾಗಿದೆ. ಇಳಿವಯಸ್ಕರಲ್ಲಿ ಕೀಲುಗಳ ನೋವು, ಕಣ್ಣಿನ ದೃಷ್ಟಿದೋಷ, ಹಲ್ಲು ಉದುರುವುದು, ಬೆನ್ನುಬಾಗುವುದು, ಅಜೀರ್ಣ ಸಮಸ್ಯೆಗಳು ಹೆಚ್ಚಾಗುವುದರಲ್ಲಿ ಫ್ಲೋರೈಡ್‌ನ ಪಾತ್ರವೂ ಬಹಳವಾಗಿ ಕಂಡುಬರುತ್ತದೆ.
ನಾವು ಸೇವಿಸುವ ಆಹಾರ, ನೀರು ದೇಹದಲ್ಲಿ ಹೀರಿಕೊಂಡು ರಕ್ತನಾಳಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೆ ತಲಪುತ್ತದೆ ಹಾಗೂ ಪ್ರಭಾವ ಬೀರುತ್ತದೆ. ಅತಿಯಾದಫ್ಲೋರೈಡ್ ಸೇವೆನಯಿಂದ ಮೂತ್ರಪಿಂಡಗಳಲ್ಲಿ ಸೂಸುವಿಕೆಗೊಂಡು ಮೂತ್ರವಿಸರ್ಜನೆ ಮೂಲಕ ಹೊರಬರುತ್ತದೆ. ಮೂತ್ರ, ರಕ್ತ ಹಾಗೂ ಇತರೆ ಜೈವಿಕ ಮಾದರಿಗಳ ಆಧಾರದ ಮೇಲೆ ಫ್ಲೋರೈಡ್ ಅಂಶವನ್ನು ಕಂಡು ಹಿಡಿಯಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳ ಪ್ರಕಾರ 5ppm-1.5ppm ವರೆಗೂ ಫ್ಲೋರೈಡ್ ಅಂಶ ನಮಗೆ ಉಪಯೋಗಕಾರಿ; ಆದರೆ ಹೆಚ್ಚಿನ ಫ್ಲೋರೈಡ್ ಸೇವನೆಯು ದುಷ್ಪರಿಣಾಮಗಳ ಆಗರವಾಗಿ ಕಂಡುಬರುತ್ತದೆ. ವಿಶ್ವಾದ್ಯ0ತ ಫ್ಲೋರೈಡ್ ನಿಯಂತ್ರಣಕ್ಕಾಗಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ತಜ್ಞರ ಪ್ರಕಾರ ಫ್ಲೋರೈಡನ್ನು ಹತೋಟಿಯಲ್ಲಿ ಇಡಲು ಹಲವು ಪ್ರಾಕೃತಿಕ ವಿಧಾನಗಳನ್ನು ಸೂಚಿಸಿದ್ದಾರೆ. ಕ್ಯಾಲ್ಸಿಯಂ ಹೆಚ್ಚಾಗಿ ಇರುವಂತಹ ಆಹಾರ ಪದಾರ್ಥಗಳಾದ ಹಾಲು, ಸೊಪ್ಪು, ಕೋಸುಗಡ್ಡೆ, ವಿಟಮಿನ್ಸ್ ಇರುವ ಹುಣಸೆಹಣ್ಣು, ನಿಂಬೆಹಣ್ಣು ಆಹಾರ ಪದಾರ್ಥಗಳು, ಅರಿಸಿನ, ನುಗ್ಗೆಕಾಯಿಸೊಪ್ಪು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಸಾಂದ್ರತೆಯನ್ನು ಹೆಚ್ಚಿಸಿ, ಫ್ಲೋರೈಡ್ನಿಂದ ಆಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ವೈದ್ಯಕೀಯ ವಿದ್ಯಾಯಲದಲ್ಲಿ ಜೀವರಾಸಾಯನಶಾಸ್ತ್ರದ ಪ್ರಾಧ್ಯಾಪಕರ ತಂಡ ಪ್ರಾಯೋಗಿಕ ಅಧ್ಯಯನವನ್ನು ನಡೆಸಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಫ್ಲೋರೋಸಿಸ್ ಬಗ್ಗೆ ಜಾಗೃತಿ ಮೂಡಿಸಿ, ಈ ಅಸ್ವಸ್ಥತೆಯನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವುದರಲ್ಲಿ ಶ್ರಮಿಸುತ್ತಿದ್ದಾರೆ. ನೀರಿನಲ್ಲಿ, ಹಾಲಿನಲ್ಲಿ, ಆಹಾರ ಪದಾರ್ಥಗಳಲ್ಲಿ ಹಾಗೂ ಇತರೆ ಜೈವಿಕ ಮಾದರಿಗಳಲ್ಲಿ ಫ್ಲೋರೈಡ್‌ನ್ನು ಕಂಡುಹಿಡಿಯುವುದು ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆಗಳನ್ನು ನಡೆಸುತಿದ್ದಾರೆ