ಸುದ್ದಿ

ಮೀನಿಗಾಗಿ ಬಲೆ ಬೀಸಿದವನಿಗೆ ಸಿಕ್ಕಿದ್ದು ಬರೋಬ್ಬರಿ 20 ಕೋಟಿ, ಅದೇಗೆ ಗೊತ್ತೆ

By admin

August 10, 2019

ಇತ್ತೀಚಿಗೆ ಗೋಲ್ಡ್ ಜಾತಿಯ ಮೀನು ಹಿಡಿದ್ದಿದ್ದ ಮೀನುಗಾರ 5 ಲಕ್ಷ ಸಂಪಾದನೆ ಮಾಡಿರುವ ಬಗ್ಗೆ ಸುದ್ದಿ ಆಗಿತ್ತು. ಈಗ ಮೀನುಗಾರನೊಬ್ಬ 20 ಕೋಟಿ ಗಳಿಸಿದ್ದಾನೆ ಎಂದು ತಿಳಿದು ಬಂದಿದೆ. ಅದೇಗೆ ಅಂತೀರಾ. ಓಮನ್ ದೇಶಕ್ಕೆ ಸೇರಿದ ಖಾಲಿದ್ ತನ್ನ ಇಬ್ಬರು ಗೆಳೆಯರೊಡನೆ ಹೋಗಿ ಹಗಲೆಲ್ಲ ಮೀನು ಹಿಡಿದು ಕುಟುಂಬಕ್ಕೆ ಪೋಷಣೆ ಮಾಡುತ್ತಿದ್ದ, ಈತ ಬಡತನದಲ್ಲಿ ಬೆಂದು ಹೋಗಿದ್ದ ಆದರೆ ಅವತ್ತು ಆತನ ಅದೃಷ್ಟದ ದಿನವಾಗಿತ್ತು.

ಒಂದು ದಿನ ಹೀಗೆ ಮೀನು ಹಿಡಿಯಲು ಹೋದಾಗ ಅಷ್ಟೊಂದು ಮೀನು ಸಿಗಲಿಲ್ಲ. ಇದರಿಂದ ಆತ ಬೇಸರದಲ್ಲಿದ್ದ. ಇನ್ನೇನು ವಾಪಸ ಬರಬೇಕೆಂದು ಆತ ಯೋಚಿಸುತ್ತಿರಬೇಕಾದರೆ ತಿಮಿಂಗಲ ವಾಂತಿ ತೇಲುತ್ತಿರುವುದು ಗಮನಕ್ಕೆ ಬಂತು ಕೂಡಲೇ ಅದಕ್ಕೆ ಬಲೇ ಹಾಕಿ ತನ್ನ ಬೋಟ್ ನಲ್ಲಿ ಇಟ್ಟುಕೊಂಡ. ಅಂದಹಾಗೆ ತಿಮಿಂಗಿಲ ವಾಂತಿಗೆ ಅಷ್ಟೊಂದು ಬೆಲೆ ಏಕೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ.

ತಿಮಿಂಗಿಲಗಳು ಕೆಲವು ಬಾರಿ ವಾಂತಿ ಮಾಡಿಕೊಳ್ಳುತ್ತವೆ. ಮೇಣದಂತಿರುವ ಇದನ್ನು ಅಂಬರ್ ಗ್ರೀಸ್ ಎಂದೂ ಕರೆಯಲಾಗುತ್ತದೆ. ಸಮುದ್ರದ ನೀರಿನಲ್ಲಿ ವರ್ಷಗಟ್ಟಲೆ ತೇಲುವ ಇದು ಬರಬರುತ್ತಾ ಕಲ್ಲಿನಂತಾಗುತ್ತದೆ. ಬಳಿಕ ಸಮುದ್ರದ ದಡ ಬಂದು ಸೇರುತ್ತದೆ. ಇದಕ್ಕಾಗಿ ಹಲವರು ಹುಡುಕಾಟ ನಡೆಸುತ್ತಾರಾದರೂ ಅದೃಷ್ಟ ಇದ್ದವರಿಗೆ ಮಾತ್ರ ಸಿಗುತ್ತದೆ.

ಈ ಅಂಬರ್ ಗ್ರೀಸ್ ಅನ್ನು ಪರ್ಫ್ಯೂಮ್ ಉದ್ಯಮದಲ್ಲಿ ಬಳಕೆ ಮಾಡಿಕೊಳ್ಳಲಿದ್ದು, ಲಕ್ಷಾಂತರ ರೂಪಾಯಿಗಳಿಗೆ ಇದನ್ನು ಖರೀದಿ ಮಾಡುತ್ತಾರೆ. ಇದು ಸಿಕ್ಕವರದ್ದು, ಅದೃಷ್ಟವೇ ಸರಿ.