ಸುದ್ದಿ

ಒಂದು ಮೀನಿಗೆ 5 ಲಕ್ಷ ರೂ ನೀಡಲು ಮುಂದಾದ್ರೂ ಮಾಲೀಕ ಮಾತ್ರ ಮಾರಾಟ ಮಾಡಿಲ್ಲ ಯಾಕೆ ಗೊತ್ತಾ,? ಇಷ್ಟಕ್ಕೂ ಆ ಮೀನಿನ ವಿಶೇಷತೆಯಾದರೂ ಏನು ಗೊತ್ತಾ ಇಲ್ಲಿದೆ ನೋಡಿ ಅಚ್ಚರಿ ಮುಡಿಸುವ ವಿಷಯ,.!!

By admin

October 12, 2019

ಬರಿ  ಒಂದು ಮೀನಿಗೆ ಗ್ರಾಹಕರೊಬ್ಬರು 5 ಲಕ್ಷ ರೂ. ನೀಡಲು ಮುಂದಾದ್ರೂ ಮಾಲೀಕ ಮಾತ್ರ ಮಾರಾಟ ಮಾಡಲ್ಲ ಎಂದು ಹೇಳಿದ ಯಾಕೆ ಗೊತ್ತಾ,.! ಈ ವಿಶೇಷ ಮೀನಿನ ಮೇಲೆ ಉರ್ದುವಿನಲ್ಲಿ ‘ಅಲ್ಲಾಹ’ ಎಂದು ಬರೆಯಲಾಗಿದ್ದು, ಕೆಲವರು ಜಲಚರಕ್ಕಾಗಿ ಲಕ್ಷಾಂತರ ರೂಪಾಯಿ ನೀಡಲು ಮುಂದಾಗುತ್ತಿದ್ದಾರೆ. ಇಷ್ಟಕ್ಕೂ  ಆ ಮೀನಿನ ವಿಶೇಷತೆಯಾದರೂ ಏನು ಗೊತ್ತಾ ಇಲ್ಲಿದೆ ನೋಡಿ ಅಚ್ಚರಿ ಮುಡಿಸುವ ವಿಷಯ.

ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಕೈರಾನಾದಲ್ಲಿರುವ ಈ ವಿಶೇಷ ಮೀನು ನೋಡಲು ಜನರು ದೂರದಿಂದ ಆಗಮಿಸುತ್ತಿದ್ದಾರೆ. ಶಬಾಬ್ ಅಹಮದ್ ಎಂಬವರು ಎಂಟು ತಿಂಗಳ ಹಿಂದೆ ಪುಟ್ಟ ಮೀನನ್ನು ತಂದು ಅಕ್ವೇರಿಯಂನಲ್ಲಿ ಸಾಕುತ್ತಿದ್ದರು. ಮೀನು ದೊಡ್ಡದಾದಂತೆ ಅದರ ಮೇಲ್ಭಾಗದಲ್ಲಿ ಅಲ್ಲಾಹ ಎಂಬ ಅಕ್ಷರಗಳು ಕಾಣಿಸತೊಡಗಿದವು. ಈ ಮೀನು ಮನೆಗೆ ಬಂದಾಗಿನಿಂದ ನಮಗೆ ಒಳ್ಳೆಯದಾಗುತ್ತಿದೆ ಎಂಬುವುದು ಅಹಮದ್ ಅವರ ಬಲವಾದ ನಂಬಿಕೆಯಾಗಿತ್ತು ,.ಅದನ್ನೇ ಅವರೆಲ್ಲಾರು ನಂಬುತ್ತಿದ್ದರು.

ಶಾಮಲಿ ನಗರದ ಹಾಜಿ ರಶಿದ್ ಖಾನ್ ಎಂಬವರು 5 ಲಕ್ಷ ರೂ.ಗೆ ಮೀನು ನೀಡುವಂತೆ ಕೇಳಿದ್ದಾರೆ. ರಶಿದ್ ಖಾನ್ 5 ಲಕ್ಷಕ್ಕಿಂತೂ ಹೆಚ್ಚು ಹಣ ನೀಡಲು ಸಿದ್ಧರಿದ್ದಾರೆ. ಮೀನಿನ ಫೋಟೋಗಳು ವಾಟ್ಸಪ್ ನಲ್ಲಿ ಹರಿದಾಡಿದ್ದರಿಂದ ಶಾಮಲಿ ಜಿಲ್ಲೆಯ ಜನರು ಮನೆಗೆ ಬರುತ್ತಿದ್ದಾರೆ. ಕೆಲವು ಸಣ್ಣ ಮೀನುಗಳು ವಿಶೇಷ ಬರಹವುಳ್ಳ ಮೀನು ಇದೆ ಎಂದು ಅಹಮದ್ ಹೇಳುತ್ತಾರೆ.

ಮನೆಗೆ ಆಗಮಿಸುತ್ತಿರುವ ಜನರು ಮೀನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಮೀನಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ರಶಿದ್ ಖಾನ್ ಅವರ ರೀತಿಯಲ್ಲಿ ಮೀನು ಖರೀದಿಗೆ ಮುಂದಾಗುತ್ತಿದ್ದು, ಒಳ್ಳೆಯ ಬೆಲೆ ಸಿಕ್ಕ ಕೂಡಲೇ ಮಾರುತ್ತೇನೆ. ಈ ಮೀನು ಮಾರಾಟದಿಂದ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದು ಅಹಮದ್ ಅವರು ತಿಳಿಸಿದ್ದಾರೆ.