ಉಪಯುಕ್ತ ಮಾಹಿತಿ

ನಕಲಿ ಮೊಟ್ಟೆಗಳನ್ನ ಪತ್ತೆ ಹಚ್ಚುವುದು ಹೇಗೆ ಅಂತ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

December 01, 2018

ಈಗಂತೂ ಎಲ್ಲಾ ನಕಲಿ. ಸ್ವಲ್ಪ ಯಾಮಾರಿದರೂ ನಕಲಿ ಆಹಾರ ಪದಾರ್ಥಗಳನ್ನೂ ಸಹ ತಿನ್ನಿಸುವ ಕಾಲ ಇದು.ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ಆದರೆ ನಕಲಿ ಯಾವುದು ಅಸಲಿ ಯಾವುದು ಎಂಬುದನ್ನು ತಿಳಿಯೋದು ಕಷ್ಟ. ನಕಲಿ ಮೊಟ್ಟೆ ಬಗ್ಗೆ ನೀವೂ ಜಾಗರೂಕರಾಗಿರಬೇಕು. ನಕಲಿ ಮೊಟ್ಟೆ ಹೇಗಿರುತ್ತೆ ಎಂಬುದನ್ನು ತಿಳಿದುಕೊಂಡಲ್ಲಿ ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

*ಸಾಮಾನ್ಯವಾಗಿ ಅಸಲಿ ಮೊಟ್ಟೆ ಹೊಳಪಿರುವುದಿಲ್ಲ. ನಕಲಿ ಮೊಟ್ಟೆಯ ಮೇಲ್ಭಾಗ ಬೆಳ್ಳಗೆ ಹೊಳೆಯುತ್ತದೆ.

*ಅಸಲಿ ಮೊಟ್ಟೆಯ ಮೇಲ್ಬಾಗ ಮುಟ್ಟಿದಾಗ ನಿಮಗೆ ಮೃದು ಅನುಭವವಾಗುತ್ತದೆ. ನಕಲಿ ಮೊಟ್ಟೆ ಮೇಲ್ಭಾಗ ಮೃದುವಾಗಿರುವುದಿಲ್ಲ.

*ಅಸಲಿ ಮೊಟ್ಟೆಯನ್ನು ಅಲುಗಾಡಿಸಿದಾಗ ಒಳಗಿಂದ ಯಾವುದೇ ಶಬ್ದ ಬರುವುದಿಲ್ಲ. ನಕಲಿ ಮೊಟ್ಟೆ ಅಲುಗಾಡಿಸಿದಾಗ ಒಳಗೆ ಏನೋ ಇದೆ ಎಂಬುದು ಗೊತ್ತಾಗುತ್ತದೆ.

*ಅಸಲಿ ಮೊಟ್ಟೆಯನ್ನು ಒಡೆದಾಗ ಹಳದಿ ಭಾಗ ಬಿಳಿ ಭಾಗದಿಂದ ಬೇರ್ಪಟ್ಟಿರುತ್ತದೆ. ಆದ್ರೆ ನಕಲಿ ಮೊಟ್ಟೆಯಲ್ಲಿ ಇವೆರಡೂ ಅಂಟಿಕೊಂಡಿರುತ್ತದೆ.

ಹಾಗಾಗಿ ಯಾವುದೇ ಆಹಾರ ಪದಾರ್ಥವನ್ನು ಕೊಳ್ಳುವ ಮುಂಚೆ ಅಥ್ವಾ ಅದನ್ನು ಮಾಡುವ ಮುಂಚೆ ಜಾಗುರಕತೆಯಿಂದ ಇರುವುದು ಒಳ್ಳೆಯದು.