ಚಳಿಗಾಲ ಬಂತೆಂದರೆ ಸಾಕು ಒಂದೆಲ್ಲಾ ಒಂದು ತ್ವಚೆ ಸಮಸ್ಯೆ ಶುರುವಾಗುವುದು. ಮೈಯನ್ನು ಉಣ್ಣೆ ಬಟ್ಟೆ, ಸ್ವೆಟರ್, ಕೋಟ್ ಇವುಗಳಿಂದ ರಕ್ಷಣೆ ಮಾಡಿದರೂ ಮುಖವನ್ನು ಹಾಗೇ ಬಿಡುವುದರಿಂದ ಮುಖದ ತ್ವಚೆ ಒಡೆಯಲಾರಂಭಿಸುತ್ತದೆ. ಇದರಿಂದ ಮುಖದ ತ್ವಚೆ ಡ್ರೈಯಾಗಿ ಮುಖದ ಕಾಂತಿ ಕಡಿಮೆಯಾಗುವುದು. ತುಟಿ ಒಡೆಯಲಾರಂಭಿಸುತ್ತದೆ, ಇದರಿಂದ ಮುಖ ಮತ್ತಷ್ಟು ಮಂಕಾಗಿ ಆಗಿ ಕಾಣುವುದು.
ಚಳಿಯ ಪರಿಣಾಮ ನಿಮ್ಮ ಮುಖದ ಮೇಲೆ ಬೀರದಂತೆ ತಡೆಗಟ್ಟಲು ಫೇಶಿಯಲ್ ಮಾಡಿಸುವುದು ಒಳ್ಳೆಯದು. ಫೇಶಿಯಲ್ ಮಾಡಿಸುವುದರಿಂದ ಚಳಿಯಿಂದ ಒಡೆದು ಮುಖ ಕಪ್ಪಾಗುವುದಿಲ್ಲ, ಎಂದಿನಂತೆ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಇಟ್ಟುಕೊಳ್ಳಬಹುದು. ಚಳಿಗಾಲದಲ್ಲಿ ಫೇಶಿಯಲ್ ಮಾಡಿಸಿದರೆ ನಿಮ್ಮ ತ್ವಚೆ ಈ 7 ಲಾಭ ಪಡೆಯುತ್ತದೆ ನೋಡಿ:
ಚಳಿ ಶುರುವಾದರೆ ಸಾಕು, ಮುಖದಲ್ಲಿ ತೇವಾಂಶ ಕಡಿಮೆಯಾಗುವುದು, ಸಾಕಷ್ಟು ನೀರು ಕುಡಿದರೂ ಕೂಡ ತ್ವಚೆ ಡ್ರೈಯಾಗುವುದು. ಹಾಲಿನ ಕೆನೆ ಹಚ್ಚುವುದು, ಮಾಯಿಶ್ಚರೈಸರ್ ಹಚ್ಚುವುದು ಮಾಡಿದರೂ ಕೂಡ ಬೇಸಿಗೆಯಲ್ಲಿ ಇರುವ ತ್ವಚೆಯ ಹೊಳಪು ಕಾಣಸುವುದಿಲ್ಲ. ಚಳಿಗಾಲದಲ್ಲೂ ಮುಖ ಅಕರ್ಷಕವಾಗಿ ಕಾಣಿಸಲು ಫೇಶಿಯಲ್ ಮಾಡಿಸಿ. ಹೀಗೆ ಫೇಶಿಯಲ್ ಮಾಡಿಸುವುದರಿಂದ ನಿಮ್ಮ ತ್ವಚೆ ಎಣ್ಣೆಯಾಗಿರಲಿ, ಶುಷ್ಕ ತ್ವಚೆಯಾಗಿರಲಿ ಮುಖದಲ್ಲಿ ತೇವಾಂಶವಿರುವುದರಿಂದ ಆಕರ್ಷಕವಾಗಿ ಕಾಣುವುದು. ಫೇಶಿಯಲ್ ನಿಮ್ಮ ತ್ವಚೆ ಸೌಂದರ್ಯವನ್ನು 20-25 ದಿನಗಳವರೆಗೆ ಕಾಪಾಡುತ್ತದೆ. ನಂತರ ಪುನಃ ಫೇಶಿಯಲ್ ಮಾಡಿಸಿ.
ಸಾಕಷ್ಟು ಒತ್ತಡದ ಕೆಲಸ ಕೂಡ ಮುಖದ ಕಾಂತಿಯ ಮೇಲೆ ಪರಿಣಾಮ ಬೀರುತ್ತದೆ. ಫೇಶಿಯಲ್ ಮಾಡಿಸಲು ಹೋದಾಗ ಬ್ಯೂಟಿಷಿಯನ್‌ಗಳು ಒಂದು ಗಂಟೆ ನಿಮ್ಮ ತ್ವಚೆಯನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ, ಇದರಿಂದ ತ್ವಚೆ ಹಾಗೂ ನೀವು ವಿಶ್ರಾಂತಿಯನ್ನು ಪಡೆಯುವಿರಿ. ತ್ವಚೆಗೆ ಮಸಾಜ್ ದೊರೆದಾ ತ್ವಚೆ ಕಾಂತಿ ಹೆಚ್ಚುವುದು. ತ್ವಚೆಯಲ್ಲಿ ಮಾಯಿಶ್ಚರೈಸರ್ ಉಳಿಯುವುದರಿಂದ ತ್ವಚೆ ಒಡೆಯುವ ಸಮಸ್ಯೆ ಉಂಟಾಗುವುದಿಲ್ಲ. ಇದರಿಂದ ಚಳಿಗಾಲದಲ್ಲೂ ಕಾಂತಿಯುತವಾದ ಆಕರ್ಷಕ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.