ಉಪಯುಕ್ತ ಮಾಹಿತಿ

ಇನ್ಮುಂದೆ ಈ ರೂಲ್ಸ್ ತಿರಸ್ಕರಿಸಿದ ತಕ್ಷಣವೆ ನಿಮ್ಮ ಫೇಸ್ಬುಕ್ ಬ್ಲಾಕ್….!

By admin

May 17, 2019

ನ್ಯೂಜಿಲ್ಯಾಂಡ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ನಿಯಮಗಳನ್ನು ಬದಲಾಯಿಸಿಕೊಂಡಿದೆ. ಉಗ್ರನೋರ್ವ ಹಿಂಸಾತ್ಮಕ ದಾಳಿಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಆಗಿ ವಿಡಿಯೋ ಮಾಡಿದ ನಂತರ, ಫೇಸ್‌ಬುಕ್ ತನ್ನ ಲೈವ್-ಸ್ಟ್ರೀಮಿಂಗ್ ಸೇವೆಯನ್ನು ಬಳಸುವುದಕ್ಕೆ ನಿಬಂಧನೆಗಳನ್ನು ಹೇರಿರುವುದಾಗಿ ಘೋಷಿಸಿದೆ.

ನ್ಯೂಜಿಲ್ಯಾಂಡ್ ದಾಳಿಯಿಂದ ಭಾರೀ ವಿವಾದಕ್ಕೆ ಒಳಗಾಗಿದ್ದ ಫೇಸ್‌ಬುಕ್ ತನ್ನ ನೇರ ಪ್ರಸಾರ ನಿಯಮಗಳನ್ನು ಬದಲಿಸಿರುವುದಾಗಿ ತಿಳಿಸಿದ್ದು, ತಾನು ನೂತನವಾಗಿ ಜಾರಿಗೆ ತಂದಿರುವ ನಿಯಮಗಳನ್ನು ಮೀರಿ ಯಾರಾದರೂ ಹಿಂಸಾತ್ಮಕ ವೀಡಿಯೊ ಸ್ಟ್ರೀಮಿಂಗ್ ಅಥವಾ ಪೋಸ್ಟ್‌ಗಳನ್ನು ಅಪ್ ಲೋಡ್ ಮಾಡಿದರೆ ಅವರ ಖಾತೆಗಳನ್ನು ನಿಷೇಧಿಸಲಾಗುತ್ತದೆ ಎಂದು ತಿಳಿಸಿದೆ.ಫೇಸ್‌ಬುಕ್ ತಂದಿರುವ ಹೊಸ ನಿಯಮದ ಪ್ರಕಾರ, ಫೇಸ್​ಬುಕ್ ಬಳಕೆದಾರರು ಯಾವುದೇ ರೀತಿಯ ಹಿಂಸಾ ಪ್ರವೃತ್ತಿಯ ವಿಡಿಯೋಗಳನ್ನು ಲೈವ್ ಮಾಡುವುದು ಹಾಗೂ ಶೇರ್ ಆಗಲಿ ಮಾಡುವುದನ್ನು ನಿಷೇಧಿಸಲಾಗಿದೆ.

ಒಂದು ವೇಳೆ ಬಳಕೆದಾರರು ನಿಯಮಗಳನ್ನು ಮೀರಿದರೆ, ಅಂತಹ ಖಾತೆಯನ್ನು ಕೂಡಲೇ ಬ್ಲಾಕ್ ಮಾಡಲಾಗುವುದು ಎಂದು ಫೇಸ್​ಬುಕ್ ಎಚ್ಚರಿಸಿದೆ. ಭಯೋತ್ಪಾದನೆ ಎಂಬುದು ಸಮಾಜದ ಪಿಡುಗಾಗಿದೆ. ಹಾಗಾಗಿ, ಯಾವುದೇ ಫೇಸ್‌ಬುಕ್ ಖಾತೆದಾರನು ಭಯೋತ್ಪಾದಕ ವಿಷಯ ಅಥವಾ ಸಂಘಟನೆಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ಅಥವಾ ವಿಡಿಯೋಗಳ ಲಿಂಕ್ ಹಂಚಿಕೊಳ್ಳುವುದು ನಿಯಮದ ವಿರುದ್ಧ. ಹಾಗಾಗಿ ಇಂತಹ ಘಟನೆಗಳು ನಡೆದ ಖಾತೆಯನ್ನು ಆ ಕೂಡಲೇ ನಿಷೇಧಿಸಲಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.

ಇತ್ತೀಚಿಗಷ್ಟೇ ನ್ಯೂಜಿಲ್ಯಾಂಡ್ ಕ್ರೈಸ್ಟ್​ಚರ್ಚ್​ ಮಸೀದಿ ಮೇಲೆ ನಡೆದ ಭಯಾನಕ ಭಯೋತ್ಪಾದಕ ದಾಳಿಯನ್ನು ಉಗ್ರನೋರ್ವ ಲೈವ್​ ಸ್ಟೀಮಿಂಗ್ ಮೂಲಕ ಪ್ರಸಾರ ಮಾಡಿದ್ದನು. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಇದನ್ನು ತಡೆಯದ ವಿಫಲವಾದ ಫೇಸ್‌ಬುಕ್ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗಿ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.