ಆರೋಗ್ಯ

ಮುಖದ ಕಪ್ಪು ಕಲೆಗಳಿಂದ ಮುಕ್ತಿ ಬೇಕು ? ಇಲ್ಲಿದೆ ಪರಿಹಾರ..!

By admin

December 31, 2019

ಹೊಟ್ಟೆ ಹಾಳಾಗಿದ್ದರೂ ತೊಂದರೆಯಿಲ್ಲ, ಮುಖ ಚೆನ್ನಾಗಿ ಕಾಣಬೇಕು ಎಂಬುದು ಬಹುತೇಕ ಈಗಿನ ಜನರ ಮನಃಸ್ಥಿತಿಯಾಗಿದೆ. ಅದರಲ್ಲೂ ಹೆಚ್ಚಿನ ಮಹಿಳೆಯರಿಗೆ ಮುಖ ಬಿಳಿಹಾಳೆಯಂತೆ ಪೂರ್ತಿ ಸಮನಾಗಿರಬೆಕು ಎಂಬ ಆಸೆ. ಆದರೆ ಮುಖದ ಮೇಲಿನ ಕಪ್ಪು ಕಲೆ ಈ ಬಯಕೆಗೆ ತಣ್ಣೀರೆರಚಿ ಮಾನಸಿಕ ಹಿಂಸೆ ನೀಡುತ್ತದೆ. ಆ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಮುಖ ಅರಳುವಂತೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಯೋಣ.

ಉಷ್ಣವಾಗಿ ಮುಖದ ಮೆಲೆ ಕಪ್ಪುಕಲೆಗಳಾಗುತ್ತಿದ್ದರೆ ಸೊಗದೆ ಬೇರನ್ನು ನಿಯತವಾಗಿ ಬಳಸಬೇಕು. ಕುದಿಯುತ್ತಿರುವ ನೀರಿಗೆ ಒಂದು ಚಮಚ ಸೊಗದೆಬೇರಿನ ಚೂರ್ಣವನ್ನು ಹಾಕಿ ಬೆಂಕಿ ಆರಿಸಿ ರಾತ್ರಿ ಮುಚ್ಚಿಡಬೇಕು. ಮರುದಿನವಿಡೀ ಇದೇ ನೀರನ್ನು ಕುಡಿಯಬೇಕು. ಮಂಜಿಷ್ಟ, ಯಷ್ಟಿಮಧು ಮತ್ತು ಅರಿಶಿಣವನ್ನು ಹಾಲಿನಲ್ಲಿ ಕಲಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆಯಬೇಕು. ಹೀಗೆ ಮಾಡುವುದರಿಂದ ಕಪ್ಪು ಕಲೆ ನೀಗಿ ಮುಖದ ಕಾಂತಿ ಹೆಚ್ಚಾಗುತ್ತದೆ. ಹಾಮೋನ್ ವ್ಯತ್ಯಯವಾಗಿದ್ದರೂ ಕಪ್ಪು ಕಲೆಗಳು ಬರುವ ಸಂಭವ ಇರುವುದರಿಂದ ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕಾಗುತ್ತದೆ.

ಬೋರೆಹಣ್ಣು, ಬೆಣ್ಣೆ ಮತ್ತು ಜೇನುತುಪ್ಪವನ್ನು ಕಲಸಿ ಪೇಸ್ಟ್​ಮಾಡಿ ಕಪ್ಪು ಕಲೆಯಾದ ಜಾಗದಲ್ಲಿ ಹಚ್ಚಿದರೆ ಕಲೆ ಹೋಗುತ್ತದೆ. ಜೊತೆಯಲ್ಲಿ ಚರ್ಮದ ರಕ್ಷಣೆಗೆ ಕೊಲ್ಲಾಜನ್ ಬೇಕು. ವಿಟಮಿನ್ ಸಿ ಜೀವಸತ್ವ ಹೊಂದಿರುವ ಆಹಾರಪದಾರ್ಥದಿಂದ ಇದು ದೊರೆಯುತ್ತದೆ. ಹಾಗಾಗಿ ಸೀಬೆಹಣ್ಣು, ನಿಂಬೆಹಣ್ಣು, ಕಿತ್ತಳೆಹಣ್ಣು ಇವುಗಳನ್ನು ಹೆಚ್ಚು ಸೇವಿಸಬೇಕು. ಬಿಸಿಮಾಡಿದ ಎಣ್ಣೆ ಚರ್ಮದ ರಕ್ಷಣೆಗೆ ಮಾರಕ. ಕರಿದ ಆಹಾರಪದಾರ್ಥಗಳು, ಬೇಕರಿ ತಿನಿಸುಗಳು, ಜಂಕ್ ಫುಡ್​ಗಳ ಸೇವನೆಯನ್ನು ನಿಲ್ಲಿಸಬೇಕು.

ಆಕ್ಸಿಡೈಸ್ ಆದ ಕೊಬ್ಬನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಒಳ್ಳೆಯ ಕೊಬ್ಬನ್ನು ತೆಗೆದುಕೊಳ್ಳಬೇಕು. ನಟ್ಸ್​ಗಳಲ್ಲಿರುವ ಕೊಬ್ಬು ಚರ್ಮದ ರಕ್ಷಣೆಗೆ ಪೂರಕ. ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್​ನಟ್, ಶೇಂಗಾ ಇವು ನಟ್ಸ್​ಗಳಾಗಿವೆ. ಪ್ರತಿನಿತ್ಯ 50 ಗ್ರಾಂನಷ್ಟು ನಟ್ಸ್ ಸೇವಿಸುವುದು ಈ ಕಲೆಗಳನ್ನು ಕಡಿಮೆ ಮಾಡಲು ಸಹಕಾರಿ.

ಆಹಾರದಲ್ಲಿ ಸಲಾಡ್​ಗಳು ಹೆಚ್ಚು ಪರಿಣಾಮಕಾರಿ. ಹಸಿತರಕಾರಿಗಳನ್ನು ಉಪಯೋಗಿಸಿ ಮಾಡಿದ ಸಲಾಡ್​ಗಳನ್ನು ಪ್ರತಿನಿತ್ಯ ಮೂರು ಹೊತ್ತು ಆಹಾರವಾಗಿ ಸೇವಿಸುವುದು ಚರ್ಮದ ರಕ್ಷಣೆಗೆ ಸಹಕಾರಿ. ಬೇಕಾದಲ್ಲಿ ಇದಕ್ಕೆ ಎಕ್ಷಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ಸೇರಿಸಬಹುದು.

ಕಾಬೋಹೈಡ್ರೇಟ್​ಗಳನ್ನು ಕಡಿಮೆ ಮಾಡಿ ನೈಸರ್ಗಿಕ ಹಸಿ ತರಕಾರಿ, ಹಸಿರುಸೊಪ್ಪು, ಹಣ್ಣು ಹಂಪಲುಗಳು, ನಟ್ಸ್​ಗಳು ಇವೆಲ್ಲವುಗಳನ್ನು ಹೆಚ್ಚು ಮಾಡಿ ಅಂದರೆ ಸರಿಯಾದ ಪಥ್ಯ ಪದ್ಧತಿಯ ಮೂಲಕ ಚರ್ಮದ ರಕ್ಷಣೆ ಮಾಡಿಕೊಳ್ಳಬಹುದು. ಹಾಗೆಯೇ ಮುಖದ ಮೇಲಿನ ಕಪ್ಪು ಕಲೆಯನ್ನು ಹೋಗಲಾಡಿಸಿಕೊಳ್ಳಬಹುದು.

ಎನಿಮಾ, ಸೌನಾಬಾತ್, ಸ್ಟೀಮ್ ಬಾತ್ ಇವೂ ಕೂಡ ದೇಹವನ್ನು ಶುದ್ಧಿ ಮಾಡಲು ಸಹಾಯ ಮಾಡುತ್ತದೆ. ಇದರ ಫಲವಾಗಿ ಚರ್ಮದ ರಕ್ಷಣೆ ಸಾಧ್ಯ. ಹುತ್ತದ ಮಣ್ಣನ್ನು ಮುಖಕ್ಕೆ ಹಚ್ಚಿಕೊಳ್ಳುವುದು, ತರಕಾರಿಗಳ ಪ್ಯಾಕ್ ಮಾಡಿ ಮುಖಕ್ಕೆ ಲೇಪಿಸಿಕೊಳ್ಳುವುದು, ಉಗಿಚಿಕಿತ್ಸೆಯಂತಹ ಪ್ರಕೃತಿಚಿಕಿತ್ಸೆಗಳು ಮುಖದ ಈ ಸಮಸ್ಯೆ ನಿವಾರಿಸಲು ಸಹಕಾರಿ.