ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ . ಪ್ರತಿ ನಿತ್ಯ ಹಲವು ರೀತಿಯ ಹಣ್ಣುಗಳನ್ನು ತಿನ್ನುತಾ ಇರ್ತೇವೆ. ನಾವು ಈಗ ತಿಳಿಸುವ ಹಣ್ಣು ಹೌದು ಹಿಪ್ಪುನೇರಳೆ ಹಣ್ಣು ಎಂದು ಕರೆಯುವ ಮಲ್ಬರಿ ಹಣ್ಣು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಈ ಹಿಪ್ಪುನೇರಳೆ ಹಣ್ಣುಗಳನ್ನು ತಿನ್ನುವುದರಿಂದಾಗಿ ಮನುಷ್ಯರ ನಾಲಗೆ ಕೆಂಪಾಗುವಂತೆ ಅವುಗಳ ಕೊಕ್ಕು ಕೆಂಬಣ್ಣಕ್ಕೆ ತಿರುಗಿರುತ್ತವೆ. ರುಚಿ ಮಾತ್ರ ಹುಳಿ ಮಿಶ್ರಿತ ಸಿಹಿ, ಮತ್ತೆಮತ್ತೆ ತಿನ್ನಬೇಕೆಂಬ ರುಚಿಯುಳ್ಳ ಹಿಪ್ಪುನೇರಳೆಯಲ್ಲಿ ಬಹಳಷ್ಟು ಔಷಧಿ ಗುಣಗಳಿವೆ
ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಮತೋಲನದಲ್ಲಿರುವಂತೆ ಹಿಪ್ಪುನೇರಳೆಯಲ್ಲಿನ ಸಂಯೋಜನೆಗಳು ಸಹಕರಿಸುತ್ತವೆ. ಸಕ್ಕರೆ ಪ್ರಮಾಣ ಸಾಮಾನ್ಯ ಸ್ಥಿತಿಗೆ ತರಲು ಚೀನಾದಲ್ಲಿ ಹಿಪ್ಪುನೇರಳೆಯನ್ನು ಔಷಧವಾಗಿ ಬಳಸುತ್ತಾರೆ.
ಅಷ್ಟೇ ಅಲ್ಲದೆ ಚರ್ಮದ ಮೇಲೆ ಏರ್ಪಡುವ ಕೆಂಪುಮಚ್ಚೆಗಳನ್ನು ಹಿಪ್ಪುನೇರಳೆ ಸೊಪ್ಪು ರಸ ಹಚ್ಚಿದರೆ ಕಡಿಮೆಯಾಗುತ್ತದೆ. ಕರ್ಕುಮಿನ್ ಮತ್ತು ಹಿಪ್ಪುನೇರಳೆ ಎಲೆಗಳನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಚರ್ಮದ ಮೇಲೆ ಉಂಟಾಗುವ ನವೆಯನ್ನು ಕಡಿಮೆ ಮಾಡುತ್ತದೆಂದು ರೋಮೇನಿಯನ್ ಅಧ್ಯಯನಗಳು ಹೇಳುತ್ತವೆ.
ವಯಸ್ಸನ್ನು ಪ್ರಭಾವಿಸುವಲ್ಲಿ, ನಿತ್ಯ ಉಲ್ಲಾಸವಾಗಿ ಇರಲು ಈ ಹಣ್ಣುಗಳು ಸಹಕರಿಸುತ್ತವೆ. ಇದಕ್ಕೆ ಕಾರಣ ಇವುಗಳಲ್ಲಿ ಇರುವ ರೆಸ್ವೆಟ್ರಾಲ್ ಎಂಬ ಆಂಟಿ ಆಕ್ಸಿಡೆಂಟ್ ಕಾರಣ.
ರಕ್ತವನ್ನು ಸರಬರಾಜು ಮಾಡುವ ಧಮನಿಗಳಲ್ಲಿ ಏರ್ಪಡುವ ಅಡ್ಡಿಯನ್ನು ಕಡಿಮೆ ಮಾಡುವಲ್ಲಿ ಮಲ್ಬರಿ ಸೊಪ್ಪಿನ ರಸ ಸಹಕಾರಿ.
ಒಣಗಿನ ಹಿಪ್ಪುನೇರಳೆ ಹಣ್ಣು ಪ್ರೋಟೀನ್, ವಿಟಮಿನ್ ಸಿ, ಕೆ, ಫೈಬರ್ ಮತ್ತು ಐರನ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಸ್ನ್ಯಾಕ್ ಆಗಿಯೂ ಬಳಸಬಹುದು.
ಹಿಪ್ಪುನೇರಳೆಯಲ್ಲಿನ ಆಲ್ಕಲಾಯಿಡ್‌ಗಳು ಬಿಳಿ ರಕ್ತಕಣಗಳನ್ನು ಉದ್ದೀಪನಗೊಳಿಸುತ್ತವೆ. ಈ ರಕ್ಷಕ ಕಣಗಳು ರೋಗನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸಿ ಅಪಾಯದಿಂದ ಕಾಪಾಡುತ್ತವೆ. ಆರೋಗ್ಯವಾಗಿರುವಂತೆ ಮಾಡುತ್ತವೆ.