ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿ ಕೆಲಸ ಮಾಡುತ್ತಿರುವ ಕಾರ್ಮಿಕ ಭವಿಷ್ಯ ನಿಧಿ ಇಲಾಖೆ ಇಪಿಎಫ್ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತದೆ. ಇಪಿಎಫ್ ಖಾತೆ ಹೊಂದಿರುವ ಪ್ರತಿ ಕಾರ್ಮಿಕರ ಸಂಬಳದಲ್ಲಿ ಪ್ರತಿ ತಿಂಗಳು ಇಪಿಎಫ್ ನಿಧಿಗಾಗಿ ಸ್ವಲ್ಪ ಹಣ ಕಡಿತ ಮಾಡಿಕೊಳ್ಳಲಾಗುತ್ತದೆ. ಆದರೆ, ಪ್ರತಿ ತಿಂಗಳೂ ತನ್ನ ಸಂಬಳದಲ್ಲಿ ಕಡಿತಗೊಂಡ ಹಣ ಇಪಿಎಫ್ ಖಾತೆಗೆ ಸಂದಾಯವಾಗುತ್ತಿದೆಯೇ? ಇಪಿಎಫ್ ನಿಧಿಗೆ ನಿರ್ದಿಷ್ಟ ಬಡ್ಡಿಸಂದಾಯವಾಗುತ್ತಿದೆಯೇ ಎಂಬುದನ್ನು ತಿಳಿಯಲು ಮತ್ತು ಇಪಿಎಫ್ ಖಾತೆಯ ಬ್ಯಾಲನ್ಸ್ ಹಣ ಚೆಕ್ ಮಾಡಲು ಹಲವಾರು ವಿಧಾನಗಳಿವೆ. ಈ ಸರಳ ವಿಧಾನಗಳ ಮೂಲಕ ನಿಮ್ಮ ಇಪಿಎಫ್ ಅಕೌಂಟ್ ಬ್ಯಾಲೆನ್ಸ್ ಸುಲಭವಾಗಿ ಚೆಕ್ ಮಾಡಬಹುದು. ವೆಬ್ ಪೋರ್ಟಲ್ ಮೂಲಕ ಇಪಿಎಫ್ ಬಾಕಿ ಹಣ ನೋಡುವದು ಒಂದು ವಿಧಾನವಾದರೆ, ನಿಮ್ಮ ಮೊಬೈಲ್ ಮೂಲಕವೂ ಸಹ ಬ್ಯಾಲನ್ಸ್ ಚೆಕ್ ಮಾಡಬಹುದು. ಇದಲ್ಲದೆ ಆಪ್ ಮೂಲಕವೂ ಬಾಕಿ ಹಣ ಎಷ್ಟಿದೆ ಎಂದು ಸ್ವತಃ ನಾವೇ ತಿಳಿದುಕೊಳ್ಳಬಹುದು.
ಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯುವ ಮಾಹಿತಿ : ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಐದು ರೀತಿಯ ವಿಧಾನಗಳಿವೆ ಇಲ್ಲಿದೆ ನೋಡಿ .1. ಇಪಿಎಫ್‌ಓ ಪೋರ್ಟಲ್ ಮೂಲಕ2. ಎಸ್‌ಎಂಎಸ್ ಮುಖಾಂತರವು ತಿಳಿಯಬಹುದು 3. ಮಿಸ್ಡ್ ಕಾಲ್ ಮಾಡುವ ಮೂಲಕ4. ಇಪಿಎಫ್‌ಓ ಮೊಬೈಲ್ ಆಪ್ ಮುಖಾಂತರವು ಸಹ ತಿಳಿಯಬಹುದಾಗಿದೆ.
ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನ : ಇಪಿಎಫ್ ಬ್ಯಾಲೆನ್ಸ್ ಪ್ರಸ್ತುತ ನಿಮ್ಮ ಇಪಿಎಫ್ ಅಕೌಂಟ್‌ನಲ್ಲಿರುವ ಒಟ್ಟು ಮೊತ್ತವೇ ಇಪಿಎಫ್ ಬ್ಯಾಲೆನ್ಸ್. ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಕಡಿತವಾಗಿ ಇಪಿಎಫ್ ಖಾತೆಗೆ ಜಮೆಯಾಗುವ ನಿರ್ದಿಷ್ಟ ಮೊತ್ತ ಹಾಗೂ ಅದಕ್ಕೆ ನಿಮ್ಮ ಉದ್ಯೋಗದಾತರು ಸೇರಿಸುವ ಪಾಲಿನಿಂದ ಜಮೆಯಾಗಿರುವ ಒಟ್ಟು ಮೊತ್ತವೇ ಇಪಿಎಫ್ ಬ್ಯಾಲೆನ್ಸ್.
ಇಪಿಎಫ್‌ಓ ಪೋರ್ಟಲ್ ಮೂಲಕ : ಇಪಿಎಫ್‌ಓ ಪೋರ್ಟಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಮೊದಲು ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್ ) ಸಕ್ರಿಯವಾಗಿರಬೇಕು. ಪ್ರತಿ ಇಪಿಎಫ್ ಚಂದಾದಾರ ಸದಸ್ಯರಿಗೆ ವಿಶಿಷ್ಟ ಯುಎಎನ್ ನೀಡಲಾಗಿರುತ್ತದೆ. ಪೋರ್ಟಲ್ ನಲ್ಲಿ ಈ ನಂಬರ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಂತರ ನಿಮಗೆ ಪಾಸ್‌ವರ್ಡ್ ದೊರೆಯುತ್ತದೆ. ಈ ಪಾಸ್‌ವರ್ಡ್ ಬಳಸಿ ಇಪಿಎಫ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಬ್ಯಾಲೆನ್ಸ್ ಚೆಕ್ ಮಾಡಬಹುದು. ಜತೆಗೆ ಇಪಿಎಫ್ ಪಾಸ್‌ಬುಕ್ ಅನ್ನು ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಎಸ್‌ಎಂಎಸ್ ಮೂಲಕ :ಕಳೆದ ಬಾರಿಯ ವಂತಿಗೆ ಹಾಗೂ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಕಳುಹಿಸುವ ಮೂಲಕವೂ ನೋಡಬಹುದು. ಈ ಸೇವೆ ತಮ್ಮ ಯುಎಎನ್ ಸಂಖ್ಯೆ ಆಕ್ಟಿವೇಟ್ ಮಾಡಿಕೊಂಡಿರುವ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ. ನೀವು ಇಪಿಎಫ್‌ಗೆ ನೋಂದಣಿ ಮಾಡಿಕೊಂಡ ನಿಮ್ಮ ಮೊಬೈಲ್ ನಂಬರ್ ಮೂಲಕ7738299899 ಗೆ ಎಸ್‌ಎಂಎಸ್ ಮಾಡಬೇಕು.
ಮೊಬೈಲ್ ಆಪ್ ಮೂಲಕ:ಇಪಿಎಫ್‌ಓM-Sewa ಹೆಸರಿನ ಸ್ಮಾರ್ಟ್‌ಫೋನ್ ಆಪ್ ಬಿಡುಗಡೆ ಮಾಡಿದೆ. ಇದರಲ್ಲಿ ಇಪಿಎಫ್ ಬ್ಯಾಲೆನ್ಸ್ ಹಾಗೂ ಖಾತೆಯ ಇತರ ವಿವರಗಳನ್ನು ಚೆಕ್ ಮಾಡಬಹುದಾಗಿದೆ. ಈ ಸೇವೆ ಯುಎಎನ್ ಪೋರ್ಟಲ್ ನಲ್ಲಿ ಯುಎಎನ್ ಆಕ್ಟಿವೇಟ್ ಮಾಡಿಕೊಂಡ ಸದಸ್ಯರಿಗೆ ಲಭ್ಯವಿದೆ. ಅಲ್ಲದೆ ಈ ಆಪ್ ಮೂಲಕ ಸಹ ಯುಎಎನ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.1. ಮೊದಲಿಗೆ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಂಡು ಮೆಂಬರ್ ಬಟನ್ ಕ್ಲಿಕ್ ಮಾಡಿ. ನಂತರ ಬ್ಯಾಲೆನ್ಸ್/ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ.2. ಈಗ ನಿಮ್ಮ ಯುಎಎನ್ ನಂಬರ್ ಹಾಗೂ ನೋಂದಾಯಿತ ಮೊಬೈಲ್ ನಂಬರ್ ಎಂಟರ್ ಮಾಡಿದ ನಂತರ ಇಪಿಎಫ್ ಅಕೌಂಟ್ ವಿವರಗಳನ್ನು ನೋಡಬಹುದು.