ಆರೋಗ್ಯ

ಎಲೆಕೋಸಿನಿಂದ ಮಾನವನ ದೇಹಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ. ಈ ಅರೋಗ್ಯ ಮಾಹಿತಿ ನೋಡಿ.

By admin

January 17, 2020

ಎಲೆಕೋಸು ರುಚಿಯಷ್ಟೆ ಅಲ್ಲ, ದೇಹದ ಆರೋಗ್ಯ ಕಾಪಾಡುವಲ್ಲಿ ಕೂಡ ಬಹಳ ಮುಖ್ಯವಾದ ತರಕಾರಿ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಆದರೆ ಉತ್ತಮ ಪೌಷ್ಟಿಕಾಂಶ ಹೊಂದಿರುತ್ತದೆ. ಅತ್ಯಂತ ಪ್ರಮಾಣದಲ್ಲಿ ತೇವಾಂಶ ಹೊಂದಿರುತ್ತದೆ. ಇದರಲ್ಲಿ ನಾರಿನಂಶ ಉತ್ತಮವಾಗಿರುವುದರಿಂದ ಮೂಲವ್ಯಾಧಿಗಳ ತೊಂದರೆ ಇರುವವರು ದಿನನಿತ್ಯ ಬೇಯಿಸಿದ ಎಲೆಕೋಸನ್ನು ಸೇವಿಸಿ. ಹೊಟ್ಟೆಯಲ್ಲಿ ಉಂಟಾಗುವ ಹುಣ್ಣುಗಳಿಗೂ ಕೂಡ ಇದು ಉತ್ತಮ ತರಕಾರಿ.

ಇದರಲ್ಲಿರುವ ಆಂಟಿ-ಅಲ್ಸರ್‌ ಅಂಶಗಳು ವಿಟಮಿನ್‌ ಯು ದೊರಕುತ್ತದೆ. ಇದು ಹಸಿ ಇದ್ದಾಗ ಮಾತ್ರ ದೊರಕುತ್ತದೆ. ಬೇಯಿಸಿದಾಗ ಇದು ನಾಶವಾಗಿ ಬಿಡುತ್ತದೆ. ಕೋಸಿನಲ್ಲಿರುವ ಟಾರ್‌ಟ್ರೋನಿಕ್‌ ಆಸಿಡ್‌ ಎಂಬ ಅಂಶವು ಆಹಾರದ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಅಂಶವನ್ನು ಕೊಬ್ಬಾಗಿ ಪರಿವರ್ತನೆಗೊಳ್ಳುವುದನ್ನು ತಡೆಯುತ್ತದೆ. ಈ ಅಂಶವು ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಆಹಾರ. ಕೋಸಿನ ಸಲಾಡ್‌ ಹಾಗೂ ಸೂಪ್‌ಅನ್ನು ಊಟ ಮಾಡುವ ಮೊದಲು ಸೇವಿಸುವುದರಿಂದ ಇದರ ಪ್ರಯೋಜನ ಪಡೆಯಬಹುದು. ಕೋಸಿನಲ್ಲಿ ಆಂಟಿ-ಥೈರಾಕ್ಸಿನ್‌ ಅಂಶವು ಅಧಿಕವಾಗಿರುವುದರಿಂದ ಈ ತರಕಾರಿಯನ್ನು ಹೈಪೋಥೈರಾಯ್ಡಿಸಂ ಕಾಯಿಲೆಯಿಂದ ಬಳಲುತ್ತಿರುವವರು ಸೇವಿಸಕೂಡದು.

ಥೈರಾಕ್ಸಿನ್‌ ಅಂಶವನ್ನು ಮತ್ತಷ್ಟು ಕುಂದಿಸುವುದರಿಂದ ದೇಹ ತೊಂದರೆಗೊಳಗಾಗುತ್ತದೆ. ಆದರೆ ಹೈಪರ್‌-ಥೈರಾಯ್ಡಿಸಂ ಇರುವ ವ್ಯಕ್ತಿಗಳಲ್ಲಿ ಅಧಿಕವಾಗಿ ಉತ್ಪತ್ತಿಯಾಗುತ್ತಿರುವ ಥೈರಾಕ್ಸಿನ್‌ನ್ನು ಕಡಿಮೆ ಮಾಡಲು ಕೋಸು ಉತ್ತಮ ಆಹಾರ. 39 ಮಿಲಿಗ್ರಾಂ ಕ್ಯಾಲ್ಸಿಯಂ, 44 ಮಿಲಿಗ್ರಾಂ ಫಾಸ್ಫರಸ್‌ ಹಾಗೂ 124 ಮಿಲಿಗ್ರಾಂನಷ್ಟು ವಿಟಮಿನ್‌ ‘ಸಿ’ ಯನ್ನು ಹೊಂದಿರುವ ಎಲೆಕೋಸು ಒಂದು ಉತ್ತಮ ರೋಗ ನಿರೋಧಕ ಆಹಾರವು ಹೌದು.