ಅನೇಕರು ನಿಯಮಿತ ಆದಾಯ ಗಳಿಸುವ ದಾರಿ ಹುಡುಕುತ್ತಾರೆ. ನೌಕರಿ ಬಿಟ್ಟು ಸ್ವಂತ ಬ್ಯುಸಿನೆಸ್ ಶುರು ಮಾಡಿ, ಕೈತುಂಬ ಲಾಭ ಗಳಿಸುವ ಬ್ಯುಸಿನೆಸ್ ಹುಡುಕಾಟ ನಡೆಸುತ್ತಾರೆ. ಅಂತವರಿಗೆ ಮೊಟ್ಟೆ ಮಾರಾಟಕ್ಕಾಗಿ ಕೋಳಿ ಸಾಕಣಿಕೆ ಬೆಸ್ಟ್. 1,500 ಕೋಳಿಗಳನ್ನು ಸಾಕಿ ಸಣ್ಣ ಮಟ್ಟದಲ್ಲಿಯೂ ನೀವು ಮೊಟ್ಟೆ ಮಾರಾಟ ಶುರು ಮಾಡಬಹುದು.
ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 7-9 ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ. ಒಮ್ಮೆ ಕ್ಲಿಕ್ ಆದ್ರೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಉತ್ತಮ ತರಬೇತಿ ಪಡೆದು ಈ ಕೃಷಿ ಶುರುಮಾಡುವುದು ಒಳ್ಳೆಯದು.
ಸ್ಥಳ, ಪಂಜರ, ಸಲಕರಣೆಗೆ ಸುಮಾರು ಐದರಿಂದ ಆರು ಲಕ್ಷ ರೂಪಾಯಿ ಖರ್ಚಾಗುತ್ತದೆ. ನೀವು ಕೋಳಿ ಖರೀದಿಗೆ ಸುಮಾರು 50 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 1500 ಕೋಳಿಯನ್ನು ನೀವು ಖರೀದಿ ಮಾಡಬೇಕು. ನಿಮ್ಮ ಪ್ಲಾನ್ ಗಿಂತ ಶೇಕಡಾ 10 ರಷ್ಟು ಹೆಚ್ಚುವರಿ ಕೋಳಿಗಳನ್ನು ಖರೀದಿ ಮಾಡಿ. ಅನಾರೋಗ್ಯದಿಂದ ಕೋಳಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.
20 ವಾರಗಳ ಕಾಲ ಕೋಳಿಗೆ ಆಹಾರದ ಖರ್ಚು ಸುಮಾರು ಒಂದರಿಂದ ಒಂದುವರೆ ಲಕ್ಷ ರೂಪಾಯಿ. ಕೋಳಿ ವರ್ಷಕ್ಕೆ ಸುಮಾರು 300 ಮೊಟ್ಟೆಗಳನ್ನು ನೀಡುತ್ತದೆ. 20 ವಾರಗಳ ನಂತ್ರ ಕೋಳಿ ಮೊಟ್ಟೆಯಿಡಲು ಶುರು ಮಾಡುತ್ತದೆ. 20 ವಾರಗಳ ನಂತ್ರ ಕೋಳಿ ಆಹಾರಕ್ಕೆ 3-4 ಲಕ್ಷ ರೂಪಾಯಿ ಖರ್ಚಾಗುತ್ತದೆ. 1500 ಕೋಳಿಗಳು ವರ್ಷಕ್ಕೆ 290 ಮೊಟ್ಟೆಯಂತೆ 4,35,000 ಮೊಟ್ಟೆ ನೀಡುತ್ತದೆ ಎಂದಿಟ್ಟುಕೊಳ್ಳಿ. ಒಂದು ಮೊಟ್ಟೆ 3.5 ರೂಪಾಯಿಗೆ ಮಾರಾಟವಾದ್ರೂ ವರ್ಷಕ್ಕೆ ಸುಮಾರು 14 ಲಕ್ಷ ರೂಪಾಯಿ ಗಳಿಕೆ ಮಾಡಬಹುದು.