ಸುದ್ದಿ

ನೆನಪಿಡಿ ಊಟದ ನಂತರ ಅಪ್ಪಿತಪ್ಪಿಯೂ ಸಹ ಇಂತಹ ತಪ್ಪುಗಳನ್ನು ಮಾಡದೆ ಹೆಚ್ಚರವಹಿಸಿ,.!

By admin

September 13, 2019

ಸಾಮಾನ್ಯವಾಗಿಮಧ್ಯಾಹ್ನ ಊಟ ಮಾಡಿದ ಬಳಿಕಸ್ವಲ್ಪ ನಿದ್ರೆ ಮಾಡಬೇಕು ಎಂದುಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆಹಾಗೆ ಇರುವುದು.ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ನಮಗನಿಸುವುದು ನಿದ್ರೆ ಮಾಡಬೇಕು ಎಂದು. ಅದು ಮಧ್ಯಾಹ್ನವೇ ಆಗಿರಬಹುದು ಅಥವಾ ರಾತ್ರಿಯ ಊಟವೇ ಆಗಿರಬಹುದು. ಯಾಕೆಂದರೆ ಹೊಟ್ಟೆ ಭಾರವಾದ ಕೂಡಲೇ ದೇಹದಲ್ಲಿ ಜಡತ್ವ ತುಂಬುವುದು. ಇದು ನಿದ್ರೆಗೆ ಜಾರುವಂತೆ ಮಾಡುವುದು. ಆದರೆ ಊಟವಾದ ತಕ್ಷಣವೇ ಮಲಗುವುದು ಸರಿಯಾದ ಕ್ರಮವಲ್ಲ ಮತ್ತು ಇದು ಆರೋಗ್ಯದ ಮೇಲೆ ಪರಿಣಾಮ ಕೂಡ ಬೀರುವುದು. ಅದೇ ರೀತಿಯಾಗಿ ಊಟವಾದ ಬಳಿಕ ನೀವು ಮಾಡಲೇಬಾರದ ಕೆಲವೊಂದು ಕೆಲಸಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ.

ತಂಪಾದ ನೀರು ಕುಡಿಯಬೇಡಿ  : ನಮ್ಮ ದೇಹದಲ್ಲಿ ಶೇ. 70ರಷ್ಟು ನೀರಿನಾಂಶವಿದೆ ಎಂದು ಹೇಳಲಾಗುತ್ತದೆ. ಇದರಿಂದ ನೀರು ನಮ್ಮದೇಹಕ್ಕೆ ಅತ್ಯಗತ್ಯವಾಗಿರುವುದು. ಜೀರ್ಣಕ್ರಿಯೆಗೂ ನೀರು ತುಂಬಾ ಸಹಕಾರಿ. ಆದರೆ ಊಟವಾದ ಕೂಡಲೇ ತಂಪಾದ ನೀರು ಕುಡಿಯಬಾರದು. ಯಾಕೆಂದರೆ ತಂಪಾದ ನೀರು ಆಹಾರವನ್ನು ಅಂಟಿಕೊಳ್ಳುವಂತೆ ಮಾಡುವುದು ಮತ್ತು ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಜೀರ್ಣಕ್ರಿಯೆ ಬೆಂಕಿ ಎಂದು ಭಾವಿಸಿದರೆ, ತಂಪು ನೀರು ಶಾಮಕದಂತೆ!

ನಿದ್ರಿಸುವುದು : ಮಧ್ಯಾಹ್ನ ಊಟ ಮಾಡಿದ ಬಳಿಕ ಸ್ವಲ್ಪ ನಿದ್ರೆ ಮಾಡಬೇಕು ಎಂದು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇ ಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆ ಹಾಗೆ ಇರುವುದು. ಇದರಿಂದ ನೀವು ನಿದ್ರೆಯಿಂದ ಎದ್ದ ಬಳಿಕವೂ ಹೊಟ್ಟೆ ಭಾರವಾದಂತೆ ಆಗುವುದು.

ಧೂಮಪಾನ : ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೆಲವರಿಗೆ ಕೆಲವರಿಗೆ ಊಟವಾದ ಕೂಡಲೇ ಧಂ ಎಳೆಯಲೇ ಬೇಕು. ಇಲ್ಲದೆ ಇದ್ದರೆ ಅವರಿಗೆ ಸರಿಯಾಗಿ ಊಟ ಮಾಡಿದ ಹಾಗೆ ಆಗುವುದೇ ಇಲ್ಲ. ಊಟವಾದ ತಕ್ಷಣ ಧೂಮಪಾನ ಮಾಡುವುದು ನೀವು ಒಮ್ಮೆಲೇ ಹತ್ತು ಸಿಗರೇಟ್ ಸೇದಿದಂತೆ. ನೀವು ಇನ್ನು ಮುಂದೆ ಧೂಮಪಾನ ಮಾಡಲೇಬಾರದು.

ಸ್ನಾನಮಾಡಬೇಡಿ  : ಊಟವಾದ ಬಳಿಕ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಯು ವಿಳಂಬವಾಗುವುದು. ಹೊಟ್ಟೆಯ ಸುತ್ತಲಿನ ರಕ್ತವು ಜೀರ್ಣಕ್ರಿಯೆಗೆ ನೆರವಾಗುವ ಬದಲು ದೇಹದ ಬೇರೆ ಭಾಗಗಳಿಗೆ ತೆರಳುವುದು. ಇದರಿಂದ ಊಟವಾದ ಬಳಿಕ ಸ್ನಾನ ಮಾಡಬಾರದು. ನಾವು ಊಟ ಮಾಡುವ ವೇಳೆ ರಕ್ತವು ಹೊಟ್ಟೆಯ ಭಾಗಕ್ಕೆ ಹರಿಯಲು ಆರಂಭವಾಗುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು. ಆದರೆ ಊಟವಾದ ತಕ್ಷಣ ನಾವು ಸ್ನಾನ ಮಾಡಿದರೆ ಆಗ ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವುದು. ಇದು ದೇಹದ ತಾಪಮಾನ ತಗ್ಗಿಸುವುದು. ರಕ್ತವು ಕೈ, ಕಾಲು ಚರ್ಮದ ಭಾಗಕ್ಕೆ ತೆರಳಿ ದೇಹದ ಉಷ್ಣತೆ ಕಾಪಾಡಿಕೊಳ್ಳಲು ನೆರವಾಗುವುದು. ಇದರಿಂದ ಊಟವಾದ ತಕ್ಷಣವೇ ಸ್ನಾನ ಮಾಡಲೇಬಾರದು.

ಊಟವಾದತಕ್ಷಣಓಡುವುದು!: ಊಟವಾದ ತಕ್ಷಣವೇ ಓಡುವುದು ಸೆಳೆತ ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ದೇಹದಲ್ಲಿ ಜಡತ್ವ ಉಂಟಾಗಬಹುದು.

ಅತಿಯಾಗಿನೀರುಕುಡಿಯುವುದು  : ಊಟವಾದ ತಕ್ಷಣ ಅತಿಯಾಗಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ರಸದ ಮೇಲೆ ಪರಿಣಾಮ ಬೀರುವುದು ಮತ್ತು ಇನ್ಸುಲಿನ್ ಮಟ್ಟವನ್ನು ಅತಿಯಾಗಿ ಹೆಚ್ಚಿಸುವುದು.ಹೊಟ್ಟೆತುಂಬಊಟಮಾಡಿಈಜಬೇಡಿ  : ಊಟವಾದ ಕೂಡಲೇ ನೀವು ಈಜಲು ಹೋಗಲೇಬಾರದು. ಊಟವಾದ ತಕ್ಷಣವೇ ನೀವು ನೀರಿಗೆ ಜಿಗಿದರೆ ಆಗ ಸೆಳೆತ ಕಾಣಿಸಬಹುದು ಮತ್ತು ನೀರಿನಲ್ಲಿ ಎಳೆದುಕೊಂಡು ಹೋಗಬಹುದು.