ನಮ್ಮ ದೇಹದಲ್ಲಿ ಏನೇ ತೊಂದರೆ ಆದರೂ ಕೂಡ ನಾವು ಮೊದಲು ಹೋಗುವುದು ವೈದ್ಯರ ಬಳಿ ಆಗಿದೆ, ಹೌದು ವೈದ್ಯರನ್ನ ದೇವರು ಎಂದು ನಂಬಲಾಗಿದೆ, ಒಬ್ಬ ವೈದ್ಯ ಮನಸ್ಸು ಮಾಡಿದರೆ ಸಾಯುವ ಅಂಚಿನಲ್ಲಿ ಇರುವ ಮನುಷ್ಯನನ್ನ ಬದುಕಿಸುತ್ತಾನೆ. ಇನ್ನು ಮನುಷ್ಯನಿಗೆ ಬರುವ ಹಲವು ಖಾಯಿಲೆಗಳು ಯಾರಿಗೂ ಗೊತ್ತಾಗುವುದಿಲ್ಲ, ಆದರೆ ನಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳನ್ನ ನೋಡಿ ನಮಗೆ ಇಂತಹುದ್ದೇ ತೊಂದರೆ ಆಗಿದೆ ಎಂದು ಗುರುತಿಸುವುದು ಒಬ್ಬ ಡಾಕ್ಟರ್ ಮಾತ್ರ. ಮುಂದುವರೆದ ಈ ವೈದ್ಯ ಲೋಕದಲ್ಲಿ ನಾವು ಹೊಟ್ಟೆಯಲ್ಲಿ ಇರುವ ಮಗು ಯಾವುದು ಎಂದು ಕೂಡ ನಾವು ತಿಳಿದುಕೊಳ್ಳಬಹುದಾಗಿದೆ.
ಈಗಿನ ಕಾಲದಲ್ಲಿ ವೈದ್ಯರು ಇದ್ದರೆ ಮಾತ್ರ ನಮ್ಮ ಜೀವ ಉಳಿಯಲು ಸಾಧ್ಯ, ಹೌದು ಈಗ ಕಾಣಿಸಿಕೊಳ್ಳುತ್ತಿರುವ ನಾನಾರೀತಿಯ ಖಾಯಿಲೆಗಳಿಂದ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಕೂಡ ಆಸ್ಪತ್ರೆಯ ಮೆಟ್ಟಿಲನ್ನ ಹತ್ತಬೇಕಾದ ಪರಿಸ್ಥಿತಿ ಈಗ ನಿರ್ಮಾಣ ಆಗಿದೆ. ಇನ್ನು ವೈದ್ಯರು ಅಥವಾ ಡಾಕ್ಟರ್ಸ್ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ, ಆದರೆ ಯಾಕೆ ವೈದರು ಬಿಳಿ ಬಟ್ಟೆಯನ್ನ ಮಾತ್ರ ಧರಿಸುತ್ತಾರೆ ಮತ್ತು ಯಾಕೆ ಅವರು ಬೇರೆ ಬಣ್ಣದ ಬಟ್ಟೆಗಳನ್ನ ಧರಿಸಲ್ಲ ಅನ್ನುವ ಪ್ರಶ್ನೆ ಹಲವು ಜನರ ತಲೆಯಲ್ಲಿ ಬಂದಿರುತ್ತದೆ. ಹಾಗಾದರೆ ಏಕೆ ವೈದ್ಯರು ಬಿಳಿ ಬಣ್ಣದ ಬಟ್ಟೆಯನ್ನ ಮಾತ್ರ ಧರಿಸುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಒಬ್ಬ ವೈದ್ಯ ತನ್ನ ಹೆಚ್ಚು ಸಮಯವನ್ನ ಆಸ್ಪತ್ರೆಯಲ್ಲಿಯೇ ಕಳೆಯುತ್ತಾರೆ, ಹೌದು ಹೆಚ್ಚಾಗಿ ವೈದ್ಯರು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ, ತುರ್ತು ಪರಿಸ್ಥಿತಿಯ ಸಲುವಾಗಿ ವೈದ್ಯರು ರೋಗಿಗಳು ಇಲ್ಲದೆ ಇದ್ದರೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಇನ್ನು ವೈದ್ಯರು ಚಿಕಿತ್ಸೆ ನೀಡುವಾಗ ರೋಗಿಗಳ ರಕ್ತ ಅಥವಾ ಬೇರೆ ಯಾವುದೇ ರೀತಿಯ ದ್ರವದ ಪದಾರ್ಥಗಳು ಅವರ ಬಟ್ಟೆಗೆ ತಾಗಬಾರದು ಮತ್ತು ಹೀಗೆ ತಾಗಿದರೆ ವೈದ್ಯರಿಗೂ ಕೂಡ ಸೋಂಕು ಹರಡುವ ಸಾಧ್ಯತೆ ಬಹಳ ಜಾಸ್ತಿ ಇರುತ್ತದೆ, ಈ ಎಲ್ಲ ಕಾರಣಗಳಿಂದ ವೈದ್ಯರು ಬಿಳಿ ಬಟ್ಟೆಯನ್ನ ಧರಿಸುತ್ತಾರೆ.
ಹೌದು ಬಿಳಿ ಬಣ್ಣದ ಬಟ್ಟೆ ಅಥವಾ ಕೋಟ್ ಗಳನ್ನ ಧರಿಸುವುದರಿಂದ ಅವುಗಳಿಗೆ ರಕ್ತ ಅಥವಾ ಇತರೆ ದ್ರವ ರೂಪದ ಪದಾರ್ಥಗಳು ತಾಗಿದರೆ ಬೇಗ ಗೊತ್ತಾಗುತ್ತದೆ, ಹಾಗೆ ಬಿಳಿ ಬಟ್ಟೆ ಧರಿಸಲು ಇನ್ನೊಂದು ಮುಖ್ಯವಾದ ಕಾರಣ ಏನು ಅಂದರೆ ಬಿಳಿ ಬಣ್ಣದ ಸ್ವಚ್ಛತೆಯ ಸಂಕೇತವಾಗಿದೆ ಮತ್ತು ಒಬ್ಬ ವೈದ್ಯ ಅಂದರೆ ಆತ ತುಂಬಾ ಸ್ವಚ್ಛವಾಗಿ ಇರಬೇಕು ಮತ್ತು ಆತ ಧರಿಸುವ ಬಟ್ಟೆ ಕೂಡ ಸ್ವಚ್ಛವಾಗಿ ಇರಬೇಕು ಅನ್ನುವ ಕಾರಣಕ್ಕೆ ಎಲ್ಲಾ ವೈದ್ಯರು ಬಿಳಿ ಬಣ್ಣದ ಬಟ್ಟೆಯನ್ನ ಧರಿಸುತ್ತಾರೆ. ವೈದ್ಯರು ಇದ್ದರೆ ಮಾತ್ರ ಈ ಪ್ರಪಂಚ ಇಲ್ಲವಾದರೆ ನಾವು ನೀವು ಯಾವುದಾದರೂ ಒಂದು ರೋಗಗಕ್ಕೆ ತುತ್ತಾಗುತ್ತೇವೆ.
ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೀರಾ…?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ
ಹಣಕಾಸಿನ ತೊಂದರೆ ಭೂಮಿ ವಿಚಾರ ಕೋರ್ಟ್ ಕೇಸ್ ಅನಾರೋಗ್ಯ
ಇನ್ನೂ ನಿಮ್ಮ ಅನೇಕ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427