ಸಿನಿಮಾ

ಯಾರಿದು ಧ್ರುವ ಸರ್ಜಾ ಮದುವೆಯಾಗುತ್ತಿರುವ ಪ್ರೇರಣಾ!ಯಾವ ಲವ್ ಸ್ಟೋರಿಗೂ ಕಡಿಮೆ ಇಲ್ಲ ಇವರ 16ವರ್ಷದ ಪ್ರೇಮ್ ಕಹಾನಿ..

By admin

November 17, 2018

ಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಹುದಿನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ.

ಧ್ರುವ ಸರ್ಜಾ ಅವರು ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರು ಅಕ್ಕಪಕ್ಕದ ಮನೆಯವರಾಗಿದ್ದಾರೆ.

ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ ದಿನ ತಾವು ಶೀಘ್ರದಲ್ಲೇ ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದರು.

ಧ್ರುವಾ ಸರ್ಜಾರವರದ್ದು ೧೬ ವರ್ಷದ ಪ್ರೀತಿ

ಸ್ಯಾಂಡಲ್ ವುಡ್ ನ ಆ್ಯಕ್ಷನ್ ಪ್ರಿನ್ಸ್ ತಮ್ಮ 16ನೇ ವಯಸ್ಸಿನಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು.ಹಾಗಾಗಿ ಧ್ರುವ ಹಾಗೂ ಪಕ್ಕದ ಮನೆ ಹುಡುಗಿ ಪ್ರೇರಣಾ ಅವರದ್ದು 16 ವರ್ಷದ ಪ್ರೀತಿ.ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದ್ದು, ಸಿಂಪಲ್ ಆಗಿ ಡಿಸೆಂಬರ್ 9 ರಂದು ಧ್ರುವ್ ಅಸರ್ಜಾ ಮತ್ತು ಪ್ರೆರನಾರವರ ಎಂಗೇಜ್ಮೆಂಟ್ ನಡೆಯಲಿದೆ.

ನಟ ಧ್ರುವ ಸರ್ಜಾ ವರಿಸಿಲಿರುವ ಹುಡುಗಿ ಪ್ರೇರಣಾ ಬಸವನಗುಡಿಯ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಸದ್ಯ ಈಗ ಪ್ರೇರಣಾ ಮನೆಯಲ್ಲಿದ್ದಾರೆ. ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ.

ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ. ಈ ಕಲ್ಯಾಣ ಮಂಟಪದಲ್ಲಿ ಖ್ಯಾತ ನಟ, ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಅವರು ನಿಶ್ಚಿತಾರ್ಥಕ್ಕೆ ಆಂಜನೇಯ ಮೂರ್ತಿಯ ಸೆಟ್ ಹಾಕಲಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಧ್ರುವ ಅಣ್ಣ ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರನ್ನು ವರಿಸಿದ್ದರು, ಮದುವೆಯಾಗಿತ್ತು. ಈಗ ತಮ್ಮ ಬಹುಕಾಲದ ಗೆಳತಿಯ ಜೊತೆ ಮದುವೆಯಾಗಲು ಧ್ರುವ ಸರ್ಜಾ ನಿರ್ಧರಿಸಿದ್ದಾರೆ.