ಇನ್ನೇನು ಸ್ವಲ್ಪ ದಿನಗಳಲ್ಲೇ ತನ್ನ ಬಹುಕಾಲದ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆ್ಯಕ್ಷನ್ ಪ್ರಿನ್ಸ್, ಸಿನಿಮಾದಲ್ಲಿ ವಿಲನ್ ಗಳ ಎದುರು ಖಡಕ್ ಆಗಿಯೇ ಡೈಲಾಗ್ ಹೇಳುವ ನಟ ಈಗ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ.
ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗಿದ್ದು, ಈಗ ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ ಕೆ.ಆರ್ ರಸ್ತೆಯಿಂದ ಸದಾಶಿವನಗರದಲ್ಲಿರುವ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಎಂಟ್ರಿಯಾಗಲಿದ್ದಾರೆ.
ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದು,ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥದಲ್ಲಿ ಅರುಣ್ ಸಾಗರ್ ಆಂಜನೇಯನ ಮೂರ್ತಿಯ ಸೆಟ್ ಹಾಕಲಿದ್ದಾರೆ.