ಆಧ್ಯಾತ್ಮ

ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಇಟ್ಟುಕೊಳ್ಳಬೇಕಾ?ಬಿಸಾಡಬೇಕಾ?

By admin

May 09, 2019

ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ನಂತರ ಸಾಮಾನ್ಯವಾಗಿ ಪ್ರಸಾದವನ್ನು ಕೊಡುತ್ತಾರೆ. ಜೊತೆಗೆ ಹೂ ಅಥವಾ ಹೂವಿನ ಮಾಲೆಯನ್ನು ಸಹ ಕೊಡುತ್ತಾರೆ. ಪೂಜಾರಿಗಳು ಪ್ರಸಾದದ ರೂಪದಲ್ಲಿ ಕೊಟ್ಟ ಹೂವನ್ನು ಭಕ್ತರು ಸ್ವಿಕಾರ ಮಾಡುತ್ತಾರೆ. ಆದರೆ ಹೀಗೆ ಕೊಟ್ಟ ಹೂವನ್ನು ಏನು ಮಾಡಬೇಕೆಂದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಹಾಗಾದ್ರೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಏನು ಮಾಡಬೇಕು..?

ದೂರದ ಊರುಗಳಿಗೆ ಹೋಗಿದ್ದರೆ, ಅಲ್ಲಿನ ದೇವಸ್ಥಾನದಲ್ಲಿ ಸಿಕ್ಕ ಹೂಗಳು ಮನೆಗೆ ಬರುವ ಮೊದಲೇ ಬಾಡಿರುತ್ತದೆ. ಸಾಮಾನ್ಯವಾಗಿ ಬಾಡಿದ ಹೂಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂಬ ನಂಬಿಕೆ ನಮ್ಮ ಹಿಂದೂ ಧರ್ಮದಲ್ಲಿದೆ. ಹಾಗಂತ ದೇವರ ಪ್ರಸಾದವನ್ನು ಎಸೆಯಲು ಸಾಧ್ಯವಿಲ್ಲ. ಪ್ರಸಾದದ ರೂಪದಲ್ಲಿ ಹೂ ಸಿಕ್ಕಾಗ ಅದನ್ನು ಮನೆಗೆ ತರಬಹುದು.

ಹೀಗೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಹಣ, ಆಭರಣಗಳನ್ನಿಡುವ ಕಪಾಟಿನಲ್ಲಿ ಹೂವನ್ನು ಇಡಬೇಕು. ಒಂದು ವೇಳೆ ಹೂ ಬಾಡಿದ್ದರೆ ಯಾವುದಾದರೂ ಬಟ್ಟೆ ಅಥವಾ ಪೇಪರಿನಲ್ಲಿ ಕಟ್ಟಿ ಹೂವನ್ನು ಇಡಬೇಕು. ಇದರಿಂದ ಧನ, ಸಂಪತ್ತು ಪ್ರಾಪ್ತಿ ಆಗುತ್ತೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ದೇವಸ್ಥಾನಗಳಿಗೆ ಹೋದಾಗ ಪ್ರಸಾದ ರೂಪದಲ್ಲಿ ಸಿಕ್ಕ ಹೂವಿನ ಎಸಳನ್ನು ಮುಡಿದುಕೊಂಡು, ಉಳಿದ ಹೂವನ್ನು ಮೂಸಿ ಮರದ ಕೆಳಗೆ ಅಥವಾ ಪವಿತ್ರ ನದಿ, ಸರೋವರಕ್ಕೆ ಹಾಕಬಹುದು. ಇದು ಕೂಡ ಒಳ್ಳೆಯ ಮಾರ್ಗ. ಅಪ್ಪಿತಪ್ಪಿಯೂ ದೇವರ ಪ್ರಸಾದವನ್ನು ಕೊಳಚೆಗೆ ಹಾಕಬಾರದು.