ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನು ಏನು ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, “ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ. ದರ್ಶನ್ ನನ್ನ ಪರ ನಿಲ್ಲುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದರು.
ಯಾರಿಗೂ ತೊಂದರೆ ಕೊಡಬಾರದು ಎನ್ನುವುದು ನನ್ನ ಉದ್ದೇಶ. ಅಲ್ಲದೇ ಯಾರಿಗೂ ತೊಂದರೆಯಾಗದಂತಹ ಸಮಯದಲ್ಲಿ ನಾನು ಅವರನ್ನು ಕರೆಯುತ್ತೇನೆ. ಎಲ್ಲರ ಜೊತೆಯೂ ಚರ್ಚೆ ಮಾಡುತ್ತೇನೆ. ಶೂಟಿಂಗ್ ಟೈಂ ಫ್ರೀ ಆಗಿದ್ದಾಗ ಕರೆಸಿಕೊಳ್ಳುತ್ತೇನೆ. ನನ್ನ ಹಿಂದೆ ಪಕ್ಷ, ಅಧಿಕಾರ ಇಲ್ಲ.
ಕೇವಲ ಜನರ ಬೆಂಬಲ ಇಟ್ಟುಕೊಂಡು ಮುಂದೆ ಹೋಗುತ್ತಿದ್ದೇನೆ. ಚಿತ್ರರಂಗದಲ್ಲಿ ಅಂಬರೀಶ್ ಅವರ ಮೇಲೆ ಅಪಾರ ಗೌರವ ಇದೆ. ಆ ಗೌರವವನ್ನು ಯಾರು ಬೀಳಿಸಲು ಆಗಲ್ಲ ಎಂದು ಮಳವಳ್ಳಿಯಲ್ಲಿ ಸುಮಲತಾ ಹೇಳಿದರು.