ಸಿನಿಮಾ

ದರ್ಶನ್ ಅಭಿಮಾನಿಗಳಿಗೆ ಸಖತ್ ಸಿಹಿ ಸುದ್ದಿ!ಫಿಕ್ಸ್ ಆಯ್ತು ಕುರುಕ್ಷೇತ್ರ ಚಿತ್ರದ ರಿಲೀಜ್ ಡೇಟ್…ಯಾವಾಗ ಗೊತ್ತಾ?

By admin

February 05, 2019

ಚಂದನವನದಲ್ಲಿ ಸ್ಟಾರ್ ನಟರ ಹೈ ಬಜೆಟ್ ಚಿತ್ರಗಳು ಒಂದರ ಮುಂದೆ ಒಂದು ಬಿಡುಗಡೆಯಾಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿತ್ತು.

ಇದೇ ತಿಂಗಳ ಫೆಬ್ರುವರಿ ೧೧ರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ ತೆರೆಗೆ ಅಪ್ಪಳಿಸಲಿದ್ದು ಚಿತ್ರ ರಸಿಕರು ಈ ಚಿತ್ರವನ್ನು ಕಣ್ತುಂಬಿ ಕೊಳ್ಳಲು ತುದಿ ಗಾಲಲ್ಲಿ ನಿಂತಿದ್ದಾರೆ.

ಈ ಚಿತ್ರದ ನಂತರ ಕನ್ನಡ ಚಿತ್ರರಂಗದ ಹೈ ಬಜೆಟ್ ಮತ್ತು ಬಹು ನಿರೀಕ್ಷಿತ ಪೌರಾಣಿಕ ಚಿತ್ರ ಚಾಲೆಂಜಿಂಗ್ ಸ್ಟಾರ್ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗುವ ಸೂಚನೆಯನ್ನು ಚಿತ್ರ ತಂಡ ಕೊಟ್ಟಿದ್ದು ದಚ್ಚು  ಅಭಿಮಾನಿಗಳು ಈ ಚಿತ್ರವನ್ನು ನೋದಲು ಕಾತುರದಿಂದ ಕಾಯುತ್ತಿದ್ದಾರೆ.

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಕುರುಕ್ಷೇತ್ರ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 5 ರಂದು ‘ಕುರುಕ್ಷೇತ್ರ’ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮುನಿರತ್ನ ಘೋಷಿಸಿದ್ದಾರೆ.

ಚಿತ್ರ ತಡವಾಗಿ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣ ನೀಡಿದ ಅವರು, ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಅಂದುಕೊಂಡಂತೆ ಬರುತ್ತಿಲ್ಲ. ಪದೇ ಪದೇ ರೀ ವರ್ಕ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೈ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಕುರುಕ್ಷೇತ್ರದಲ್ಲಿ ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.