ಕ್ರಿಕೆಟ್ ಬಹುತೇಕರ ಕನಸು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಕ್ರೀಡೆ ಗೊತ್ತಿಲ್ಲದವರಿಗೂ ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ವಿದ್ಯಾಭ್ಯಾಸ ಹೊಂದಿರುವವರು ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ.
ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಪಂದ್ಯದ ತೀರ್ಪುಗಾರನಾಗಿ ನೀವು ಕೆಲಸ ಮಾಡಬಹುದು. ಪ್ರತಿ ಪಂದ್ಯಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಉಲ್ಲಂಘನೆಯಾದ್ರೆ ದಂಡ ವಿಧಿಸುವ ಜವಾಬ್ದಾರಿ ಹೊರಬೇಕಾಗುತ್ತದೆ.ಇನ್ನು ಇಲ್ಲಿ ಕೆಲಸ ಮಾಡುವ ವಿಡಿಯೋ ವಿಶ್ಲೇಷಕರಿಗೆ ಪ್ರತಿ ಪಂದ್ಯಕ್ಕೆ 15 ಸಾವಿರ ರೂಪಾಯಿ ಸಿಗುತ್ತದೆ. ಎರಡೂ ತಂಡದ ಆಟವನ್ನು ಈತ ವಿಶ್ಲೇಷಣೆ ಮಾಡಬೇಕು. ಇದು ಸುಲಭದ ಕೆಲಸವಲ್ಲ. ಆಟಗಾರನಲ್ಲಿ ಕಾಣಿಸಿಕೊಂಡ ಕೊರತೆಯನ್ನು ಆತ ಹೇಳಬೇಕಾಗುತ್ತದೆ.
ಪಂದ್ಯದ ಅಂಕಿ-ಅಂಶಗಳನ್ನು ಸಂಗ್ರಹಿಸುವ ಕೆಲಸವನ್ನು ಕ್ರಿಕೆಟ್ STATISTICIAN ಮಾಡುತ್ತಾರೆ. ಯಾವ ಆಟಗಾರ ಎಷ್ಟು ರನ್ ಗಳಿಸಿದ ಎಂಬ ಲೆಕ್ಕ ಅವ್ರ ಬಳಿಯಿರಬೇಕಾಗುತ್ತದೆ. ಬಿಸಿಸಿಐ ಇವ್ರಿಗೆ ದಿನಕ್ಕೆ 10 ಸಾವಿರ ರೂಪಾಯಿ ನೀಡುತ್ತದೆ. ಈ ಹುದ್ದೆ ಪಡೆಯಲು ನೀವು ಗಣಿತದಲ್ಲಿ ಬಿಎಸ್ಸಿ, ಎಂಎಸ್ಸಿ ಜೊತೆಗೆ ಪಿಹೆಚ್ಡಿ ಪಡೆದಿರಬೇಕು.ಬ್ಯಾಟ್, ಬಾಲ್, ಗ್ಲೌಸ್ ಹೀಗೆ ಕ್ರಿಕೆಟ್ ಗೆ ಬೇಕಾಗುವ ಕಿಟ್ ತಯಾರಿಸಿ ಅದನ್ನು ತಂಡಕ್ಕೆ ಕಳುಹಿಸಬೇಕಾಗುತ್ತದೆ. ಕಿಟ್ ಮಾರಾಟ ಮಾಡಿ ಸಾಕಷ್ಟು ಗಳಿಸಬಹುದು. ನೀವಿದನ್ನು ಕಂಪನಿ ರೂಪದಲ್ಲಿಯೂ ಶುರು ಮಾಡಬಹುದು.
ಪ್ರಸಿದ್ಧ ಕ್ರಿಕೆಟ್ ಆಟಗಾರರು ಮ್ಯಾನೇಜರ್ ಹೊಂದಿರುತ್ತಾರೆ. ಅವ್ರ ಜೊತೆ ಕ್ರಿಕೆಟ್ ನಲ್ಲಿ ಆಪರೇಷನ್ ಮ್ಯಾನೇಜರ್ ಎಂಬ ಹುದ್ದೆಯೊಂದಿರುತ್ತದೆ. ಆತ ತಂಡದ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. ವರ್ಷಕ್ಕೆ ಮ್ಯಾನೇಜರ್ ಗೆ 15 ಲಕ್ಷಕ್ಕಿಂತ ಹೆಚ್ಚು ಸಂಬಳ ಸಿಗುತ್ತದೆ. ಟಾಸ್ ಗೆದ್ದು ಪಂದ್ಯ ಶುರುವಾದ್ಮೇಲೆ ನಾವು ಮೈದಾನ ನೋಡ್ತೇವೆ. ಆದ್ರೆ ಮೈದಾನ ಸಿದ್ಧಪಡಿಸಲು ಕೆಲಸಗಾರರು ಬೇಕು. ಪಿಚ್ ಬಗ್ಗೆ ಜ್ಞಾನ ಹೊಂದಿರುವವರನ್ನು ಈ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಬಿಸಿಸಿಐ ಸರ್ಟಿಫಿಕೆಟ್ ಕೋರ್ಸ್ ಮಾಡಿದೆ. ಅದ್ರಲ್ಲಿ ಪಾಸ್ ಆದವರಿಗೆ ಕೆಲಸ ಸಿಗಲಿದೆ. ವರ್ಷಕ್ಕೆ 12 ಲಕ್ಷ ರೂಪಾಯಿ ಸಂಬಳ ಸಿಗಲಿದೆ.