ಬೆಂಗಳೂರು: ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕೆ ತೆರೆ ಬಿದ್ದಿದೆ. ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಗೆಲುವು ತಂದು ಕೊಟ್ಟ ಟೀಂ ಇಂಡಿಯಾಗೆ ಕೋಟಿ ಕೋಟಿ ಭಾರತೀಯರು ಭೇಷ್, ಇಂಡಿಯಾ ಭೇಷ್ ಎಂದು ಬೆನ್ನು ತಟ್ಟಿದರು.
ಹೌದು. ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಏಳನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ. ಟೀಂ ಇಂಡಿಯಾ ಒಡ್ಡಿದ್ದ 337 ರನ್ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಆಟಕ್ಕೆ ಮಳೆಯೂ ಅಡ್ಡಿಯಾಗಿತ್ತು. ಮಳೆ ನಿಂತು ಮತ್ತೆ ಪಂದ್ಯ ಪ್ರಾರಂಭವಾದಾಗ ಡೆಕ್ವರ್ತ್ ನಿಯಮದ ಪ್ರಕಾರ ಪಾಕ್‍ಗೆ ಗೆಲ್ಲಲು 30 ಎಸೆತಗಳಲ್ಲಿ 136ರನ್ ಟಾರ್ಗೆಟ್ ನೀಡಲಾಗಿತ್ತು. ಕೊನೆಗೆ ಭಾರತಕ್ಕೆ 86 ರನ್‍ಗಳ ರೋಚಕ ಗೆಲುವು ಸಿಕ್ಕಿದೆ.
ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ ಇತ್ತ ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ಸಿಲಿಕಾನ್ ಸಿಟಿಯಲ್ಲೂ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮನೆ, ಅಂಗಡಿ, ಹೊಟೇಲುಗಳಲ್ಲಿ ಜನ ಉಸಿರು ಬಿಗಿ ಹಿಡಿದು ಪಂದ್ಯ ವೀಕ್ಷಿಸಿದ್ರು. ಕೊನೆಗೆ ಪಾಕಿಗಳ ಹುಟ್ಟಡಗಿಸಿದ ಭಾರತ ತಂಡ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.
ಧಾರವಾಡದಲ್ಲಿಯೂ ಅಭಿಮಾನಿಗಳು ಭಾರತ್ ಮಾತಾಕಿ ಜೈ ಘೋಷಣೆಗಳೊಂದಿಗೆ ನಡುರಾತ್ರಿಯಲ್ಲಿಯೂ ಪಟಾಕಿ ಸಿಡಿಸಿ ಜೈ ಘೋಷ ಹಾಕಿದ್ರು.