KOLAR NEWS PAPER

ಕರುವಿನ ಮೇಲೆ ಅತ್ಯಾಚಾರ! ವೃದ್ಧ ಪೊಲೀಸ್ ವಶಕ್ಕೆ

By KOLAR NEWS CHANDRU

January 11, 2023

ಕೋಲಾರ: ಹಸುವಿನ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಯುವಕನೊಬ್ಬ ಪೊಲೀಸರ ವಶವಾದ ಘಟನೆ ಕೋಲಾರ  ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಡಾವಣೆಯಲ್ಲಿ ನಡೆದಿದೆ. ಕರು ರಾಮರೆಡ್ಡಿ ಎಂಬವರಿಗೆ ಸೇರಿದ್ದಾಗಿದೆ. 50 ವರ್ಷದ ಶಫೀ ಉಲ್ಲಾ ಕರು ವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶಫಿ ಈ ಹಿಂದೆಯೂ ಹಸುವಿನ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದಿದ್ದನು. ಆ ಸಂದರ್ಭದಲ್ಲಿ ಗ್ರಾಮಸ್ಥರೇ ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದರೆ ಇದೀಗ ಆತ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಹೌದು, ಕಾಮುಕನೊಬ್ಬ ಹಸುವಿನ ಕರು ಮೇಲೆ ಕೀಚಕತನ ಮೆರೆದಿರುವ ವಿಲಕ್ಷಣ ಘಟನೆ ಕೋಲಾರದ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಕರು ಅಸ್ವಸ್ಥಗೊಂಡಿದ್ದು, ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿದ್ದಾರೆ. ಇತ್ತ ಬೇತಮಂಗಲ ಪೊಲೀಸರು ಅರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.