ಉಪಯುಕ್ತ ಮಾಹಿತಿ

ಕೆಲಸ ಹುಡುಕಲು ಸಹಾಯವಾಗುವ ಉತ್ತಮ ವೃತ್ತಿಪರ ಸಂಪರ್ಕಗಳ ಬೆಳವಣಿಗೆಗೆ ಬೇಕಾಗುವ ಸಲಹೆಗಳು ಯಾವುದು ಗೊತ್ತಾ?

By admin

November 11, 2019

ಓದು ಮುಗಿಸಿದ ನಂತರ ಉದ್ಯೋಗ ಹುಡುಕುವುದು, ಒಂದು ಜಾಬ್‌ನಲ್ಲಿ ಇದ್ದು ಮೊತ್ತೊಂದು ಉದ್ಯೋಗ ಸರ್ಚ್‌ ಮಾಡುವುದು ಹಲವರಿಗೆ ತುಂಬಾ ಕಷ್ಟದ ಕೆಲಸ.ಇದನ್ನು ಸರಳಗೊಳಿಸುವುದು, ಎಲ್ಲರೂ ಬೆಳೆಸಿಕೊಂಡ ವೃತ್ತಿಪರ ಸಂಪರ್ಕಗಳು ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ. ಉತ್ತಮ ಸಂವಹನ ಬೆಳವಣಿಗೆಗಾಗಿ ಇರುವ ಹಲವು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು.

ಖಾಸಗಿ ಕ್ಷೇತ್ರಗಳಲ್ಲಿ ಆಗಲಿ, ಸರ್ಕಾರಿ ಇಲಾಖೆಗಳ ಖಾಯಂ ಮತ್ತು ಗುತ್ತಿಗೆ ಆಧಾರದ ಕೆಲಸಗಳೇ ಆಗಲಿ, ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ವೃತ್ತಿ ಪರ ಸಂಪರ್ಕಗಳು ಮತ್ತು ಅವರೊಂದಿಗಿನ ಉತ್ತಮ ಸಂವಹನ ಮಾತ್ರ ಕೆಲಸ ಮಾಡಬಲ್ಲದು. ಆದ್ದರಿಂದ ಇಂದಿನ ಲೇಖನದಲ್ಲಿ ಉದ್ಯೋಗ ಹರಸಲು ಹೇಗೆ ಹೆಚ್ಚು ವೃತ್ತಿಪರ ಸಂಪರ್ಕಗಳನ್ನು ಬೆಳೆಸಿಕೊಳ್ಳ ಬಹುದು ಎಂಬುದನ್ನು ಹಂತ ಹಂತವಾಗಿ ಈ ಕೆಳಗೆ ನೀಡಿದ್ದೇವೆ.

ನೀವು ಯಾವ ಕ್ಷೇತ್ರದಲ್ಲಿ ಉದ್ಯೋಗ ಬಯಸಿದ್ದೀರಿ, ಯಾವ ಉದ್ಯೋಗ ಮಾಡಬೇಕು ಎಂದುಕೊಂಡಿದ್ದೀರಿ, ಎಂತಹ ಕಂಪನಿಗಳಿಗೆ ಸೇರಬೇಕು ಎಂದುಕೊಂಡಿದ್ದೀರಿ ಎಂಬುದನ್ನು ನಿಮಗೆ ನೀವೆ ಮೊದಲು ಪ್ರಶ್ನಿಸಿಕೊಳ್ಳಿ. ನಿಮ್ಮ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರ ಆ ಉದ್ಯೋಗಕ್ಕೆ ಸಂಬಂಧಪಟ್ಟಂತೆ ವೃತ್ತಿಪರರ ಸಂಪರ್ಕಗಳನ್ನು ಹೊಂದಬೇಕು.

ಉದ್ಯೋಗ ಹರಸುತ್ತಾ ಇನ್ನೂ ಹತಾಶರಾಗಿಯೇ ಉಳಿದಿರುವವರಿಗೆ, ಮತ್ತು ಹೊಸಬರು ಹೇಗೆ ವೃತ್ತಿಪರ ಸಂಪರ್ಕಗಳನ್ನು ಹೆಚ್ಚಿಸಿಕೊಳ್ಳುವುದು ಎಂಬುದನ್ನು ಈ ಕೆಳಗೆ ತಿಳಿಯಿರಿ. ಆಸಕ್ತ ಉದ್ಯೋಗದ ಆಧಾರದಲ್ಲಿ ಆರಂಭಿಸಿ. ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ. ನಿಮ್ಮ ಉದ್ಯೋಗದ ಬಗ್ಗೆ ನಿಖರ ಮಾಹಿತಿ ನೀಡಿ. ಗುರಿಗೆ ಸಹಾಯಕವಾಗಿರಲಿ ವೃತ್ತಿಪರ ಸಂಪರ್ಕ. ಒಳ್ಳೆಯ ಕೆಲಸಗಳಿಗೆ ಸ್ವಯಂ ಸೇವಕರಾಗಿ. ಫಾಲೋ ಅಪ್‌ ಮತ್ತು ಉದ್ದೇಶಗಳನ್ನು ಮರೆಯದಿರಿ. ವೃತ್ತಿಪರ ಸಂಪರ್ಕಗಳು ನಿಮಗೆ ಹೆಚ್ಚು ಮಾರ್ಗ ದರ್ಶನ ನೀಡುವ, ಸ್ಫೂರ್ತಿ ತುಂಬುವ, ಪ್ರೋತ್ಸಾಹ ನೀಡುವಂತಿರಲಿ.