Health

ಜಿರಲೆಗಳ ಸೂಪರ್ ಸಂಸಾರ ನೋಡಿ ಬೆರಗಾದ ವೈದ್ಯರು..!ಯಾಕೆ ಗೊತ್ತಾ?ತಿಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ..

By admin

November 08, 2019

ಸ್ವಚ್ಛತೆ ಕಾಪಾಡದ ಅಡುಗೆ ಮನೆಯಂತಹ ಸ್ಥಳಗಳಲ್ಲಿ ಜಿರಲೆಗಳು ನೆಲೆ ಕಂಡುಕೊಂಡು ಕುಟುಂಬ ಬೆಳೆಸುವುದು ಸಾಮಾನ್ಯ. ಆದರೆ ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬನ ಕಿವಿಯೊಳಗೇ ಜಿರಲೆ ಸಂಸಾರ ನಡೆಸಿದೆ.ಅದನ್ನು ಕಂಡು ವೈದ್ಯರೂ ಬೆಚ್ಚಿಬಿದ್ದಿದ್ದಾರೆ.ಎಲ್ವಿ ಎಂಬ ಹೆಸರಿನ 24 ವರ್ಷದವ್ಯಕ್ತಿ ಬೆಳಿಗ್ಗೆ ಏಳುವಾಗ ಕಿವಿಯಲ್ಲಿ ವಿಪರೀತ ನೋವುಂಟಾಗುತ್ತಿತ್ತು. ಒಳಗೆ ತೀರಾ ಕಿರಿಕಿರಿ. ಏನೋ ಓಡಾಡುತ್ತಿರುವ, ಕೊರೆಯುತ್ತಿರುವ ಸದ್ದು. ಆ ನೋವನ್ನು ಸಹಿಸಿಕೊಳ್ಳಲಾಗದೆ ಆತ ಒದ್ದಾಡತೊಡಗಿದ. ಆತನ ಮನೆಯವರು ಕಿವಿಯೊಳಗೆ ಬೆಳಕು ಹಾಯಿಸಿ ನೋಡಿದಾಗ ಏನೋ ಕೀಟವೊಂದು ಒಳಗೆ ಹರಿದಾಡುತ್ತಿದೆ ಎಂದೆನಿಸಿತ್ತು.ಕೂಡಲೇ ವೈದ್ಯರ ಬಳಿ ತೆರಳಿದರು.

ಹುಯಿಯಾಂಗ್‌ನಲ್ಲಿನ ಸಾನ್ಹೆ ಆಸ್ಪತ್ರೆಯ ವೈದ್ಯರು ಆತನ ಕಿವಿ ತಪಾಸಣೆ ನಡೆಸಿದಾಗ ಕಂಡಿದ್ದು, ಒಳಗೆ ಸಂಸಾರ ನಡೆಸಿದ್ದ ಜಿರಲೆಯ ಕುಟುಂಬ. ಚಿಮಟ ಬಳಸಿ ಮರಿಗಳನ್ನು ಹೊರತೆಗೆದ ಬಳಿಕ ತಾಯಿ ಜಿರಲೆ ಕಣ್ಣಿಗೆ ಬಿತ್ತು. ಸಾಹಸ ಪಟ್ಟು ಅದನ್ನೂ ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಆತನ ಕಿವಿಯ ನಾಳಕ್ಕೆ ಸ್ವಲ್ಪ ಹಾನಿಯಾಗಿತ್ತು.

‘ಎಲ್ವಿ ಕಿವಿಯೊಳಗೆ ಅಸಾಧ್ಯ ನೋವಾಗುತ್ತಿದೆ ಎಂದು ಹೇಳಿದ್ದರು. ಒಳಗಿನಿಂದ ಕೆರೆದಂತೆ, ಓಡಾಡಿದಂತೆ ಭಾಸವಾಗುತ್ತಿತ್ತು. ಇದರಿಂದ ಸುಮ್ಮನೆ ಕುಳಿತು ಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಪರಿಶೀಲಿಸಿದಾಗ ಒಳಗೆ ಹತ್ತಕ್ಕೂ ಹೆಚ್ಚುಜಿರಲೆ ಮರಿಗಳು ಇರುವುದು ಕಾಣಿಸಿತು. ಅವು ಆಗಲೇ ಅಲ್ಲಿ ಅಡ್ಡಾಡುತ್ತಿದ್ದವು’ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞರು ತಿಳಿಸಿದ್ದಾರೆ.

ಎಲ್ವಿ ಅರೆ ಬರೆ ಆಹಾರ ತಿಂದು ತನ್ನ ಹಾಸಿಗೆ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಭ್ಯಾಸ ಇರಿಸಿಕೊಂಡಿದ್ದ. ಇದೇಆತನಿಗೆ ಎರವಾಗಿತ್ತು. ಆಹಾರ ತಿನ್ನಲು ಬಂದ ಜಿರಲೆ ಅಲ್ಲಿಯೇ ಮಲಗಿದ್ದ ಆತನ ಕಿವಿಯೊಳಗೆ ನುಗ್ಗಿ ಅದನ್ನೇ ತನ್ನಆವಾಸ ಸ್ಥಾನವನ್ನಾಗಿ ಮಾಡಿಕೊಂಡಿತ್ತು. ಅಲ್ಲಿಯೇ ಮೊಟ್ಟೆಯಿಟ್ಟು ಮರಿಯನ್ನೂ ಮಾಡಿತ್ತು. ಎಷ್ಟು ಸಮಯದಿಂದ ಅದು ಆತನ ಕಿವಿಯೊಳಗೆ ಇದ್ದಿರ ಬಹುದು ಎಂಬುದು ಗೊತ್ತಾಗಿಲ್ಲ.