ಆರೋಗ್ಯ

ನೆನಸಿದ ಕಡಲೆಕಾಳು ತಿನ್ನೋದ್ರಿಂದ ಆಗೋ ಪ್ರಯೋಜನಗಳನ್ನ ಕೇಳಿದ್ರೆ, ಈಗ್ಲೇ ತಿನ್ನೋಕೆ ಸ್ಟಾರ್ಟ್ ಮಾಡ್ತೀರಾ..!

By admin

December 31, 2018

ಕಡಲೆಯಿಂದ ನಾವು ಅನೇಕ ಅಡುಗೆಗಳನ್ನು ಮಾಡುತ್ತೇವೆ. ಇದರಲ್ಲಿ ಪಲ್ಯ ಮಾಡುತ್ತೇವೆ. ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಹಲವು ಖಾದ್ಯಗಳನ್ನು ಮಾಡುತ್ತಾರೆ. ಅದೆಷ್ಟೋ ಆಹಾರದಲ್ಲಿ ಕಡಲೆ ಬಳಸುತ್ತಾರೆ.

ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, ಫೈಬರ್, ಮಿನರಲ್ ಹಾಗೂ ವಿಟಮಿನ್ ಬಹಳ ಪ್ರಮಾಣದಲ್ಲಿರುತ್ತದೆ.

ನೆನಸಿದ ಕಡಲೆಕಾಳು ಸೇವನೆ ಮಾಡುವುದರಿಂದ ಅನೇಕ ರೋಗಗಳು ದೂರವಾಗುವ ಜೊತೆಗೆ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ರಾತ್ರಿಪೂರ್ತಿ ಕಡಲೆಯನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಕಡಲೆಕಾಳನ್ನು ಸರಿಯಾಗಿ ಅಗೆದು ತಿನ್ನಿ. ಬೇಕಾದಲ್ಲಿ ಆ ನೀರನ್ನು ಕೂಡ ಸೇವನೆ ಮಾಡಬಹುದು.

ಪ್ರತಿದಿನ ನೆನಸಿದ ಕಡಲೆ ಸೇವನೆಯಿಂದ ಶಕ್ತಿ ಬರುತ್ತದೆ. ಹಾಗೆ ಸ್ನಾಯುಗಳು ಬಲಗೊಳ್ಳುತ್ತವೆ. ನಿತ್ರಾಣ ದೂರವಾಗಿ ದೇಹ ಅನೇಕ ರೋಗಗಳಿಂದ ಮುಕ್ತಿ ಪಡೆಯುತ್ತದೆ.

ಮಲಬದ್ಧತೆ ಸಮಸ್ಯೆ ಇರುವವರು ಕಡಲೆಯನ್ನು ಸೇವಿಸಬೇಕು. ಇದ್ರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಒಂದು ಚಮಚ ಸಕ್ಕರೆ ಜೊತೆ ಕಡಲೆ ಕಾಳು ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯ ಉತ್ಪತ್ತಿಯಲ್ಲಿ ವೃದ್ಧಿಯಾಗುತ್ತದೆ.

ಸ್ವಲ್ಪ ಜೇನುತುಪ್ಪದ ಜೊತೆ ಕಡಲೆ ಸೇವನೆ ಮಾಡುವುದರಿಂದ ಸಂತಾನೋತ್ಪತ್ತಿ ಶಕ್ತಿ ಹೆಚ್ಚಾಗುತ್ತದೆ.

ಬೆಲ್ಲದ ಜೊತೆ ಇದನ್ನು ಸೇವನೆ ಮಾಡಿದ್ರೆ ಮೂತ್ರದ ಸಮಸ್ಯೆ ಕಡಿಮೆಯಾಗುತ್ತದೆ. ಪದೇ ಪದೇ ಮೂತ್ರ ಮಾಡುವ ಹಾಗೂ ಮೂಲವ್ಯಾಧಿಯಂತಹ ಸಮಸ್ಯೆಯಿರುವುದಿಲ್ಲ.