ಮೈಸೂರಿನಲ್ಲಿ ನಿವೇದಿತಾ ಗೌಡ, ಚಂದನ್ ಶೆಟ್ಟಿ ನಿಶ್ವಿತಾರ್ಥ ನಡೆಯುತ್ತಿದ್ದು, ಗ್ರೀನ್ ಸ್ಯಾರಿ ತೊಟ್ಟು ಹೋಟೆಲ್ ಗೆ ಬಂದ ಬೇಬಿ ಡಾಲ್. ಹೋಟೆಲ್ಗೆ ಎಂಟ್ರಿಯಾಗೊ ಮುನ್ನ ಆವರಣದಲ್ಲಿಯೇ ಫೋಟೋ ಶೂಟ್ ಮಾಡಿಸಿದ್ದಾರೆ.
ಇನ್ನೂ ಕೆಲವೇ ನಿಮಿಷಗಳಲ್ಲಿ ಚೆಂದನ್ ಶೆಟ್ಟಿ ಹೋಟೆಲ್ ಗೆ ಆಗಮಿಸಲಿದ್ದಾರೆ. ಈಗಾಗಲೇ ಹೋಟೆಲ್ ಗೆ ಚಂದನ್ ಶೆಟ್ಟಿ ಕುಟುಂಬ ಹಾಗು ನಿವೇದಿತಾ ಕುಟುಂಬಸ್ಥರು ಮತ್ತು ಸಂಬಂಧಿಕರು, ಸ್ನೇಹಿತರು ಆಗಮಿಸಿದ್ದಾರೆ. ಸದ್ಯ ಕಲರ್ ಫುಲ್ ಫ್ಲವರ್ ಮೂಲಕ ಎಂಗೆಜ್ಮೆಂಟ್ ಹಾಲ್ ಡೆಕೋರೆಟ್ ಮಾಡಲಾಗಿದೆ. ಮಧ್ಯಾಹ್ನ 12.30ಕ್ಕೆ ಪರಸ್ಪರ ರಿಂಗ್ ಬದಲಿಸಿಕೊಳ್ಳಲೂ ನಿವೇದಿತಾ ಮತ್ತು ಚಂದನ್ ಸಿದ್ದತೆ ಮಾಡಿಕೊಂಡಿದ್ದಾರೆ.
ಈ ಹಿಂದೆ ಯುವ ದಸರಾ 2019 ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ಹಾಕಿ ಶೀಘ್ರದಲ್ಲೇ ನಾವಿಬ್ಬರು ಮದುವೆ ಆಗುವುದಾಗಿ ಘೋಷಿಸಿದ್ದರು. ಆ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೇಲೆ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ನಿಜವಾಗಿಸಿದ್ದರು.
ಈ ಜೋಡಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಪಾಲ್ಗೊಂಡಿದ್ದರು. ಹಾಸನದ ಮೂಲದ ಚಂದನ್ ಶೆಟ್ಟಿ ಆಲ್ಬಂ ಸಾಂಗ್ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ್ಲೂ ಹಾಡುತ್ತಿರುವ ಚಂದನ್‌ಗೆ ಒಳ್ಳೆಯ ಆಫರ್ ಬರುತ್ತಿವೆ.