ನಿನ್ನೆ ತಾನೇ ಚಂದನ್ ಶೆಟ್ಟಿ ಅವರು ತನ್ನ ಬಹುದಿನಗಳ ಪ್ರೇಯಸಿ ನಿವೇಧಿತಾ ಗೌಡ ಅವರನ್ನ ಗುರು ಹಿರಿಯರ ಸಮ್ಮುಖದಲ್ಲಿ ಮೈಸೂರಿನಲ್ಲಿ ಮದುವೆಯಾಗಿದ್ದು ನಿಮಗೆಲ್ಲ ಗೊತ್ತೇ. ಬಿಗ್ ಬಾಸ್ ನಲ್ಲಿ ಆರಂಭ ಆದ ಇವರಿಬ್ಬರ ಪ್ರೀತಿಗೆ ನಿನ್ನೆ ಒಂದು ಅರ್ಥ ಬಂತು ಹೇಳಿದರೆ ತಪ್ಪಾಗಲ್ಲ, ಹೌದು ಯುವದಸರ ವೇದಿಕೆಯ ಮೇಲೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಚಂದನ್ ಶೆಟ್ಟಿ ಅವರು ನಿವೇಧಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿ ಕೈಗೆ ರಿಂಗ್ ತೊಡಿಸಿದ್ದರು. ಇನ್ನು ಯುವದಸರ ವೇಧಿಕೆಯ ಮೇಲೆ ಕೊಟ್ಟ ಮಾತಿನಂತೆ ಕೆಲವು ತಿಂಗಳುಗಳ ಹಿಂದೆ ಅದ್ದೂರಿಯಾಗಿ ನಿಶ್ಚಿತಾರ್ಥವನ್ನ ಕೂಡ ಮಾಡಿಕೊಡಿದ್ದರು. ಇನ್ನು ನಿನ್ನೆ ಗುರು ಹಿರಿಯರು ನಿಶ್ಚಯ ಮಾಡಿದಂತೆ ಮೈಸೂರಿನಲ್ಲಿ ರಾಜನ ಕಳೆಯಲ್ಲಿ ನಿವೇಧಿತಾ ಅವರನ್ನ ವರಿಸಿದ್ದಾರೆ ಚಂದನ್ ಶೆಟ್ಟಿ ಅವರು.
ಇನ್ನು ಈ ಮದುವೆಯ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಹಲವು ನಟ ನಟಿಯರು ಮತ್ತು ಹಿರಿಯ ಗಣ್ಯ ವ್ಯಕ್ತಿಗೂ ಆಗಮಿಸಿದ್ದು ವಧು ಮತ್ತು ವರನಿಗೆ ಆಶೀರ್ವಾದವನ್ನ ಮಾಡಿದ್ದಾರೆ. ಹೌದು ಪುನೀತ್ ರಾಜಕುಮಾರ್, ದ್ರುವ ಸರ್ಜಾ, ದರ್ಶನ್ ಹೀಗೆ ಚಿತ್ರರಂಗದ ಹಲವು ಗಣ್ಯ ವ್ಯಕ್ತಿಗಳು ಚಂದನ್ ಶೆಟ್ಟಿ ಮತ್ತು ನಿವೇಧಿತಾ ಅವರ ಮದುವೆಗೆ ಬಂದಿದ್ದರು. ಇನ್ನು ಚಂಧನ್ ಶೆಟ್ಟಿ ಮತ್ತು ನಿವೇಧಿತಾ ಅವರಿಗೆ ಕುಟುಂಬದವರು ಒಂದು ಭರ್ಜರಿಯಾದ ಉಡುಗೊರೆಯನ್ನ ನೀಡಿದ್ದು ಈ ಉಡುಗೊರೆಯನ್ನ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಚಂದನ್ ಶೆಟ್ಟಿ ಮತ್ತು ನಿವೇಧಿತಾ ಗೌಡ ಅವರ ಮದುವೆ ಮೈಸೂರಿನ ಹಿನಕಲ್ ನಲ್ಲಿ ಇರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದಿದೆ ಮತ್ತು ಇಬ್ಬರ ಮದುವೆ ಗೌಡ ಮತ್ತು ಶೆಟ್ಟಿ ಸಂಪ್ರದಾಯ ಎರಡರಲ್ಲೂ ಕೂಡ ನಡೆದಿದೆ, ಇನ್ನು ಕುಟುಂಬದವರು ವಧು ಮತ್ತು ವರನಿಗೆ ಜಾಗ್ವಾರ್ ಕಾರ್ ಉಡುಗೊರೆಯಾಗಿ ನೀಡಿದ್ದು ಮದುವೆಯ ದಿನ ಆ ಕಾರ್ ಗೆ ಶೃಂಗಾರ ಮಾಡಿ ಮದುವೆಯ ಉಡುಗೊರೆಯಾಗಿ ನೀಡಲಾಗಿದೆ.
ಇನ್ನು ಇಷ್ಟು ದೊಡ್ಡ ಉಡುಗೊರೆಯನ್ನ ಕುಟುಂದವರು ನೀಡುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ ಮತ್ತು ಸ್ವತಃ ಚಂಧನ್ ಶೆಟ್ಟಿ ಮತ್ತು ನಿವೇಧಿತಾ ಅವರಿಗೂ ಕೂಡ ಈ ವಿಷಯ ತಿಳಿದಿರಲಿಲ್ಲ, ಆದರೆ ಮದುವೆಯ ದಿನ ಮಂಟಪಟದ ಎದುರುಗಡೆ ಕಾರ್ ನಿಲ್ಲಿಸಿ ವಧು ವರರಿಗೆ ಶಾಕ್ ಆಗುವ ರೀತಿಯಲ್ಲಿ ಭರ್ಜರಿ ಉಡುಗೊರೆಯನ್ನ ನೀಡಿದ್ದಾರೆ ಕುಟುಂಬದವರು. ಇನ್ನು ಕುಟುಂದವರು ನವ ದಂಪತಿಗಳಿಗೆ ನೀಡಿರುವ ಕಾರ್ ಬೆಲೆ ಸುಮಾರು 40 ಲಕ್ಷ ರೂಪಾಯಿ ಆಗಿದ್ದು ಇಷ್ಟು ದೊಡ್ಡ ಉಡುಗೊರೆ ಸಿಗುತ್ತದೆ ಚಂಧನ್ ಶೆಟ್ಟಿ ಅವರು ಭಾವಿಸಿರಲಿಲ್ಲ ಮತ್ತು ಕುಟುಂಬದವರು ಈ ಉಡುಗೊರೆ ಕೊಟ್ಟಿದ್ದಕ್ಕೆ ತುಂಬಾ ಸಂತಸವನ್ನ ವ್ಯಕ್ತಪಡಿಸಿದ್ದಾರೆ ಚಂದನ್ ಶೆಟ್ಟಿ ಮತ್ತು ನಿವೇಧಿತಾ ಗೌಡ ಅವರು. ಸ್ನೇಹಿತರೆ ಚಂಧನ್ ಶೆಟ್ಟಿ ಮತ್ತು ನಿವೇಧಿತಾ ಅವರ ಜೋಡಿ ಹೇಗಿದೆ ಮತ್ತು ಕುಟುಂಬದವರು ಕೊಟ್ಟ ಜಾಗ್ವಾರ್ ಕಾರ್ ಉಡುಗೊರೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.