ಈ ಹಣ್ಣನ್ನು ಸಾಮಾನ್ಯವಾಗಿ ಕೆಲವರು ತಿನ್ನುತ್ತಿರುತ್ತಾರೆ, ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಚಿರಪರಿಚಿತ, ಸಾಮಾನ್ಯವಾಗಿ ಈ ಹಣ್ಣು ಇದರ ಹೆಸರು ಚಳ್ಳೆಹಣ್ಣು ಎಂಬುದಾಗಿ ಇದನ್ನು ಅಡುಗೆಗೆ ಹಾಗೂ ಮತ್ತಿತರ ಕೆಲಸಕ್ಕೆ ಹಾಗೂ ಮನೆಮದ್ದುಗಳಿಗೆ ಔಷಧಿಯಾಗಿ ಕೂಡ ಬಳಸಲಾಗುತ್ತದೆ. ಅದ್ರಲ್ಲೂ ಇದರ ಉಪ್ಪಿನ ಕಾಯಿ ಸೇವನೆ ಅತಿ ಹೆಚ್ಚು ಬಳಕೆಯಲ್ಲಿದೆ ಕೆಲವು ಕಡೆ. ಈ ಚಳ್ಳೆಹಣ್ಣು ಯಾವೆಲ್ಲ ಉಪಯೋಗಕಾರಿ ಅಂಶಗಳನ್ನು ಹೊಂದಿದೆ ಹಾಗೂ ಇದರಿಂದ ದೇಹಕ್ಕೆ ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಪಡೆಯಬಹುದಾಗಿದೆ,ಹಾಗೂ ಇದರ ಬಳಕೆಯನ್ನು ಹೇಗೆ ಮಾಡಬಹುದು ಯಾವ ಸಮಸ್ಯೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ತಿಳಿಯಿರಿ.
ಚಳ್ಳೆ ಹಣ್ಣಿನ ಔಷಧೀಯ ಗುಣಗಳು ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಮತ್ತು ಕೆಮ್ಮು ನಿವಾರಕ.ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ. ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ.ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ. ಗಾಯಕ್ಕೆ ತೊಗಟೆಯ ಗಂಧ ಲೇಪನ.
ಚಳ್ಳೆಹಣ್ಣಿನಲ್ಲಿ ಪ್ರೋಟೀನ್, ಕಬ್ಬಿಣಾಂಶ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣದ ಅಂಶವಿರುತ್ತದೆ. ಈ ಕಾಯಿಯಿಂದ ಉಪ್ಪಿನಕಾಯಿ, ಸಾಂಬಾರ್ ನ್ನೂ ಮಾಡಲಾಗುತ್ತದೆ. ಮೂತ್ರವರ್ಧನೆಗೆ, ಕೆಮ್ಮಿಗೆ ಈ ಹಣ್ಣು ಉತ್ತಮ ಔಷಧ. ಗಾಯಕ್ಕೆ ಇದರ ತೊಗಟೆಯನ್ನು ತೇದು ಹಚ್ಚಬಹುದಾಗಿದೆ. ಹಣ್ಣಿನ ತಿರುಳನ್ನು ಅಂಟಿನಂತೆಯೂ ಬಳಸಲಾಗುತ್ತದೆ. ಹೀಗೆ ಹಲವು ಸಮಸ್ಯೆಗೆ ಇದನ್ನು ಬಳಕೆ ಮಾಡಲಾಗುವುದು.