ಬಿಗ್ ಬಾಸ್ ಸೀಸನ್ ನಲ್ಲಿ ತುಂಬಾ ವಿಚಿತ್ರವಾದ ಸ್ಪರ್ದಿ ಎಂದರೆ ಅವರು ಚೈತ್ರಾ ಕೋಟೂರ್ .ಚೈತ್ರಾ ಕೋಟೂರ್‌ಗೆ ಈ ನವೆಂಬರ್ ಬಂದರೆ ಮದುವೆಯಾಗಿ ಮೂರು ವರ್ಷ ಆಗುತ್ತಂತೆ. ಆ ಹುಡುಗ ಸೊಪ್ಪು ಮಾರುತ್ತಿದ್ದಾನಂತೆ. ಶಾಸ್ತ್ರೋಕ್ತವಾಗಿ ಮದುವೆಯಾಗಿಲ್ವಂತೆ, ಸೈನ್ ಮಾಡಿ ಮದುವೆಯಾಗಿದ್ದಾರಂತೆ. ವ್ಯಕ್ತಿತ್ವ ನೋಡಿ ಮದುವೆಯಾಗಬೇಕು. ಸೊಪ್ಪು ಮಾರುವವರಿಗೆ, ತರಕಾರಿ ಮಾರುವವರಿಗೂ ಕೂಡ ಓದಿರುವವರನ್ನು ಮದುವೆಯಾಗಬೇಕು ಎಂಬ ಆಸೆ ಇರತ್ತೆ ಎಂದಿದ್ದಾರೆ ಚೈತ್ರಾ ಕೋಟೂರ್.
ಸೊಪ್ಪು ಮಾರುವವನ ಮೇಲೆ ಚೈತ್ರಾಗೆ ಲವ್ ಆಗಿದ್ದೇಗೆ?ಮಾರ್ಕೆಟ್ ವಿಚಾರವಾಗಿ ಚೈತ್ರಾರಿಗೆ ಶೈನ್ ಶೆಟ್ಟಿ, ಸುಜಾತಾ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಹೀಗಿದ್ದಾಗಲೂ ಕೂಡ ಯಾರು ಕೂಡ ಚೈತ್ರಾ ಮದುವೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. 4ವರ್ಷದ ಹಿಂದೆ ವಿಜಯನಗರದಲ್ಲಿ ಚೈತ್ರಾ ಇದ್ದರಂತೆ. ಆಗ ‘ಅನುರಾಗ ಸಂಗಮ’ ಧಾರಾವಾಹಿಯಲ್ಲಿ ನಟಿತ್ತಿದ್ದರಂತೆ ಚೈತ್ರಾ. ‘ಸೌಭಾಗ್ಯವತಿ’ ಸೀರಿಯಲ್‌ನಲ್ಲಿ ಕೂಡ ನಟಿಸುತ್ತಿರುವಾಗ ಚೈತ್ರಾ ಮನೆ ಚೇಂಜ್ ಮಾಡಬೇಕಿತ್ತು. ಮನೆ ಸಾಮಾನು ಶಿಫ್ಟ್ ಮಾಡುವಾಗ ಸೊಪ್ಪು ಮಾರುವವರು ಕೂಡ ಬಂದು ಸಾಮಾನು ಪ್ಯಾಕ್ ಮಾಡಲು ಸಹಾಯ ಮಾಡಿದ್ದರಂತೆ. ಚೈತ್ರಾಗೆ ಸುಸ್ತಾಗಿದ್ದಕ್ಕೆ ಅವರು ಜ್ಯೂಸ್ ತಂದುಕೊಟ್ಟರಂತೆ. ಅವರ ಹೆಸರು ರಾಜ್‌ಕುಮಾರ್. ರಕ್ತ ಕಡಿಮೆ ಇದೆ ಎಂದು ಮೂರು ವರ್ಷ ಪಾಲಕ್ ಸೊಪ್ಪನ್ನೇ ತಂದಿದ್ದರಂತೆ. ಗಂಡನ ಮೇಲಿನ ಪ್ರೀತಿಯಿಂದ ಪಾಲಕ್ ಸೊಪ್ಪು ಇಷ್ಟವಿಲ್ಲದಿದ್ದರೂ ಕೂಡ ಚೈತ್ರಾ ಪಾಲಕ್ ತಿನ್ನುತ್ತಿದ್ದರಂತೆ.
ಸೊಪ್ಪು ಮಾರುವವನನ್ನೇ ಚೈತ್ರಾ ಮದುವೆಯಾಗಿದ್ಧೇಕೆ ಗೊತ್ತಾ ?ಒಮ್ಮೆ ಡಾಕ್ಟರ್ ಸೊಪ್ಪು ತಿನ್ನಬೇಕು ಅಂದರಂತೆ, ಹೀಗಾಗಿ ಸೊಪ್ಪು ಮಾರುವವರನ್ನು ಮದುವೆಯಾಗಿದ್ದಾರಂತೆ ಚೈತ್ರಾ. ಬೆಳಿಗ್ಗೆ 3ಗಂಟೆಗೆ ಎದ್ದು ಮಾರ್ಕೆಟ್‌ಗೆ ಸೊಪ್ಪು ಮಾರುತ್ತಾರಂತೆ. ಬೆಳಿಗ್ಗೆ ಫ್ರೆಶ್ ಆಗಿರೋ ಸೊಪ್ಪು ತಂದು ಬೇಯಿಸಿ ಉಪ್ಪು, ಖಾರ ಹಾಕಿ ತಿನ್ನಿಸಿ, ಮಾರ್ಕೆಟ್‌ಗೆ ಹೋಗುತ್ತಾರಂತೆ.
ಚೈತ್ರಾ ಮದುವೆ ಕಥೆ ನಿಜಾನಾ? ಬಿಗ್ ಮನೆಯವರು ಏನು ಹೇಳ್ತಾರೆ?ಹೀಗೆ ಚೈತ್ರಾ ಕಥೆ ಹೇಳುತ್ತ ಹೋಗಿದ್ದಾರೆ. ಆದರೆ ಈ ಕಥೆಯನ್ನು ಬಿಗ್ ಮನೆಯ ಸದಸ್ಯರು ತುಂಬ ಫನ್ ಆಗಿ ಸ್ವೀಕರಿಸಿದ್ದಾರೆ. ಅಲ್ಲಿದ್ದವರಿಗೆ ಇದು ಕಟ್ಟುಕಥೆ ಎಂದು ತಿಳಿದಿದೆ. ಹೀಗಾಗಿ ಈ ವಿಚಾರದಲ್ಲಿ ಎಷ್ಟು ಕಾಮಿಡಿ ಮಾಡಬಹುದು ಅಷ್ಟು ಕಾಮಿಡಿ ಮಾಡಿದ್ದಾರೆ ಬಿಗ್ ಮನೆಯ ಇತರ ಸ್ಪರ್ಧಿಗಳು. ಮತ್ತೊಂದು ದಿನ ನಾನು ಒಂದು ಹುಡುಗನನ್ನು ತುಂಬ ತುಂಬ ಪ್ರೀತಿಸುತ್ತಿದ್ದೆ, ಆಮೇಲೆ ಸುಮ್ನಾದೆ ಎಂದಿದ್ದಾರೆ ಚೈತ್ರಾ. ಕನ್ನಡಿ ಮುಂದೆ ಕುಳಿತು ಐ ಹೇಟ್ ಯೂ, ಐ ಲವ್ ಯೂ, ನೀನು ನನಗೆ ಬೇಕು ಎಂದೆಲ್ಲ ಚೈತ್ರಾ ಕೋಟೂರು ಮಾತನಾಡಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಚೈತ್ರಾ ನಡವಳಿಕೆ ತುಂಬ ವಿಭಿನ್ನವಾಗಿದೆ ಎನ್ನೋದಂತೂ ಸತ್ಯ. ಚೈತ್ರಾ ಫೂಟೇಜ್‌ಗಾಗಿ ಈ ರೀತಿ ಮಾಡುತ್ತಿದ್ದಾರೋ ಅಥವಾ ನಿಜಕ್ಕೂ ಇವರು ಇರೋದು ಹೀಗೇನಾ ಎಂಬ ಸಂದೇಹ ಎಲ್ಲರಿಗೂ ಇದೆ.