ಸುದ್ದಿ

ಹೆಚ್ಚರಿಕೆ : ಮುಖಕ್ಕೆ ಕೇಕ್ ಹಚ್ಚಿದರೆ ಜೈಲೇ ಗತಿ…!

By admin

May 17, 2019

ಇತ್ತೀಚಿನ ದಿನಗಳಲ್ಲಿ ಯಾವುದೆ ಹುಟ್ಟುಹಬ್ಬ,ಅನ್ನಿವೆರ್ಸೆರಿ ಅಥವಾ ಯಾವುಧೆ ಶುಭ ಸಮಾರಂಭಗಳಲ್ಲಿ ಕೇಕ್ಅನ್ನು ಕತ್ತರಿಸುವ ಮತ್ತು ಮುಕಕ್ಕೆ ಹಚ್ಚಿಕೊಳ್ಳುವ ಹೊಸ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನದಲ್ಲಿ ದೇಶದಲ್ಲಿ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಕೇಕ್ ಹಚ್ಚುವುದು, ಗಲಾಟೆ ಮಾಡುವುದನ್ನು ನೋಡಿರುವ‌ ಗುಜರಾತ್ ಪೊಲೀಸರು ಹೊಸ‌ ಕಾನೂನು ಜಾರಿಗೆ ತಂದಿದ್ದಾರೆ.

ಹೌದು, ಸೂರತ್ ಪೊಲೀಸರು ಪಬ್ ಜೀ ಬ್ಯಾನ್ ಬಳಿಕ ಇದೀಗ ಸಾರ್ವಜನಿಕ ವಲಯದಲ್ಲಿ ಬರ್ತ್‌ ಡೇ ಕೇಕ್ ಕತ್ತರಿಸಿ ಮುಖಕ್ಕೆ ಮೆತ್ತುವುದನ್ನು ಬ್ಯಾನ್ ಮಾಡಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಇದನ್ನು ವಕೀಲ ಅಪರ್ ಗುಪ್ತಾ ಟ್ವೀಟರ್‌ನಲ್ಲಿ ಹಾಕಿಕೊಂಡಿದ್ದಾರೆ‌. ಸೂರತ್ ಪೊಲೀಸರ ಈ‌ ನಿರ್ಧಾರವನ್ನು ಕೆಲವರು ಒಪ್ಪಿದರೆ ಇನ್ನು ಕೆಲವರು ಅನವಶ್ಯಕ ಕಾನೂನು ಎಂದು ‌ಮೂಗು ಮುರಿದಿದ್ದಾರೆ.