ಸುದ್ದಿ

ಅಡುಗೆ ಮಾಡಲು ಹೊಲದಲ್ಲಿ ಕ್ಯಾರೆಟ್ ಕಿತ್ತಾಗ, ಅದರಲ್ಲಿ ಇದ್ದ ವಸ್ತುವನ್ನು ನೋಡಿ ಶಾಕ್ ಆದ ಮಹಿಳೆ.

By admin

February 06, 2020

ಸ್ವೀಡನ್ ದೇಶಕ್ಕೆ ಸೇರಿದ ಲೀನಾ ಅನ್ನುವ ಮಹಿಳೆ 16 ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಇದ್ದಾಗ ತನ್ನ ಮದುವೆಯ ದಿನ ಗಂಡ ಕೊಡಿಸಿದ್ದ ಅಮೂಲ್ಯವಾದ ವಸ್ತುವನ್ನ ಕಳೆದುಕೊಳ್ಳುತ್ತಾಳೆ.

ಇನ್ನು ಅದೂ ವೆಡ್ಡಿಂಗ್ ರಿಂಗ್ ಮತ್ತು ದುಬಾರಿ ಬೆಲೆಯ ವಜ್ರದ ಉಂಗುರ ಆದ್ದರಿಂದ ತುಂಬಾ ಬೇಜಾರು ಮಾಡಿಕೊಂಡು ಕಣ್ಣೀರು ಹಾಕುತ್ತ ಮಕ್ಕಳ ಜೊತೆ ಮನೆಯ ತುಂಬಾ ಹುಡುಕಿದಳು ಲೀನಾ, ಆದರೆ ಎಷ್ಟೇ ಹುಡುಕಿದರೂ ಕೂಡ ಆ ಉಂಗುರ ಮಾತ್ರ ಸಿಗಲೇ ಇಲ್ಲ. ಹೀಗೆ 16 ವರ್ಷ ಕಳೆದ ನಂತರ ಒಂದು ದಿನ ಮನೆಯಲ್ಲಿ ಅಡುಗೆ ಮಾಡಲು ಕ್ಯಾರೆಟ್ ಖಾಲಿ ಆಗಿರುತ್ತದೆ ಮತ್ತು ಅಡುಗೆ ಮಾಡಲು ಕ್ಯಾರೆಟ್ ಬೇಕಾದ ಕಾರಣ ತಮ್ಮ ಮನೆಯ ಎದುರುಗಡೆ ಇದ್ದ ತೋಟದಲ್ಲಿ ಕ್ಯಾರೆಟ್ ಕಿತ್ತುಕೊಂಡು ಬರಲು ಹೋಗುತ್ತಾಳೆ ಲೀನಾ.

ಇನ್ನು ತೋಟದಲ್ಲಿ ಕೆಲವೇ ಕ್ಯಾರೆಟ್ ಇದ್ದ ಕಾರಣ ಎಲ್ಲವನ್ನ ಕಿತ್ತು ಕೊನೆಯ ಕ್ಯಾರೆಟ್ ಕೀಳುವಾಗ ಲೀನಾಗೆ ದೊಡ್ಡ ಶಾಕ್ ಕಾದಿತ್ತು, ಕಾರಣ 16 ವರ್ಷಗಳ ಹಿಂದೆ ಲೀನಾ ಕಳೆದುಕೊಂಡಿದ್ದ ಆ ದುಬಾರಿ ಉಂಗುರ ಆ ಕ್ಯಾರೆಟ್ ನಲ್ಲಿ ಇತ್ತು. ಇನ್ನು ಇದನ್ನ ನೋಡಿ ಸಂತೋಷವನ್ನ ತಡೆದುಕೊಳ್ಳಲು ಆಗದ ಲೀನಾ ಇದು ನಿಜಾನಾ ಅಥವಾ ಸುಳ್ಳಾ ಎಂದು ತಿಳಿಯಲು ಮತ್ತೆ ಮತ್ತೆ ಪರೀಕ್ಷೆ ಮಾಡಿದಳು. ಇನ್ನು ತನ್ನ ರಿಂಗ್ ಸಿಕ್ಕಿದ ಸಂತೋಷದಲ್ಲಿ ತೇಲಾಡಿದ ಅದನ್ನ ತನ್ನ ಮಕ್ಕಳು ಮತ್ತು ಗಂಡನಿಗೆ ತೋರಿಸಿ ಸಂಭ್ರಮ ಪಟ್ಟರು, ಸ್ನೇಹಿತರೆ ಎಲ್ಲಿ ಆ ಉಂಗುರ ಮತ್ತು ಎಲ್ಲಿ ಆ ಕ್ಯಾರೆಟ್ ಎರಡಕ್ಕೂ ಸಂಬಂಧವೇ ಇಲ್ಲ.

ಸ್ನೇಹಿತರೆ ಇದಕ್ಕೆ ಹೇಳುವುದು ಜೀವನ ಮತ್ತು ಪ್ರಪಂಚ ಅನ್ನುವುದು ಒಂದು ವಿಚಿತ್ರ ಮತ್ತು ಯಾವ ಸಮಯದಲ್ಲಿ ಏನು ನಡೆಯುತ್ತದೆ ಎಂದು ಯಾರಿಂದಲೂ ಕೂಡ ಊಹೆ ಮಾಡಲು ಸಾಧ್ಯವಿಲ್ಲ ಮತ್ತು ಇಲ್ಲಿ ಏನು ಬೇಕಾದರೂ ನಡೆಯಬಹುದು. ಗಂಡನ ಮೇಲೆ ನನಗೆ ಇರುವ ಪ್ರೀತಿ ಈ ಕ್ಯಾರೆಟ್ ಮೂಲಕ ಉಕ್ಕಿ ಹರಿದಿದೆ ಎಂದು ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ ಲೀನಾ ಅವರು.