ಆರೋಗ್ಯ

ಕ್ಯಾರೆಟ್ ನ ಉಪಯೋಗಗಳು ಗೊತ್ತಾದ್ರೆ ಅಚ್ಚರಿ ಪಡ್ತಿರಾ.! ಈ ಮಾಹಿತಿ ನೋಡಿ.

By admin

December 12, 2019

ಆರೋಗ್ಯ ತಜ್ಞರ ಪ್ರಕಾರ  ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಸಾಧ್ಯವಾದಷ್ಟು ತಮ್ಮ ಆಹಾರಕ್ರಮದಲ್ಲಿ ಕ್ಯಾರೆಟ್‌ನ್ನು ಸೇವಿಸಬೇಕಂತೆ.

ಕ್ಯಾರೆಟ್ ಅನ್ನು ಹೆಚ್ಚಾಗಿ ಮಕ್ಕಳಿಗೆ ನೀಡಬೇಕು. ಇದರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುವುದರ ಜೊತೆಗೆ ಅವರುಗಳಲ್ಲಿ ಮೂಳೆಗಳು ಸದೃಢಗೊಳ್ಳುತ್ತವೆ. ನಿತ್ಯದಲ್ಲೂ ಅವರಿಗೆ ಲಂಚ್ ಬಾಕ್ಸ್ಗಳಿಗೆ ಪೀಸ್ಗಳನ್ನೂ ಹಾಕಬೇಕು, ಅವರಿಗೆ 2 ದಿನೊಕೊಮ್ಮೆ ಅದರಲ್ಲಿ ಪಾಯಸ ಮಾಡಿ ಕೊಡಬೇಕು. ಇಲ್ಲದೆ ಹೋದಲ್ಲಿ ಚಿಕ್ಕ ತುಂಡುಗಳನ್ನು ಮಾಡಿ ಅದರ ಮೇಲೆ ಸ್ವಲ್ಪ ಉಪ್ಪು ಪೆಪ್ಪರ್/ ಮೆಣಸಿನ ಪುಡಿ ಹಾಕಿ ಮೈಕ್ರೋವೇವ್ನಲ್ಲಿ 10 ನಿಮಿಷ ಬೇಯಿಸಿದರೆ ಸಾಕು. ಇದನ್ನು ಮಕ್ಕಳಿಗೆ ಕೊಡಬೇಕು. ಆದಷ್ಟು ಮಕ್ಕಳಿಗೆ ಹಸಿಯಾಗಿ ತಿನ್ನಲು ಕೊಡಿ ಇದರಿಂದ ಅವರ ಹಲ್ಲುಗಳು ಮತ್ತು ವಸಡುಗಳು ಗಟ್ಟಿಯಾಗುತ್ತವೆ. ಕ್ಯಾರೆಟನ್ನು ಹೆಚ್ಚಾಗಿ ಬಳಸಿ ನಿಮ್ಮ ಆರೋಗ್ಯವನ್ನು ಸದೃಢವಾಗಿರಿಸಿ.

ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವ ಖನಿಜಗಳನ್ನು ಇದು ತುಂಬಾನೇ ಹೊಂದಿರುತ್ತದೆ. ಇದರಲ್ಲಿ ತಾಮ್ರ, ಮ್ಯಾಗನೀಸ್, ಕ್ಯಾಲಿಸಿಯಂ, ಕಬ್ಬಿಣ, ಪೋಟ್ಯಾಷಿಯಮ್, ಗಂಧಕ, ಇದ್ದು ಇದರಿಂದ ದೇಹದಲ್ಲಿರುವ ಮೂಳೆಗಳನ್ನು ದಷ್ಟುಪುಷ್ಟಾಗಿ ಮಾಡುತ್ತವೆ. ನಿತ್ಯದಲ್ಲೂ ಕ್ಯಾರೆಟ್ ಸೇವನೆ ಮಾಡೋದ್ರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಕ್ಯಾರೆಟ್ ಉಪಯೋಗ ನಿತ್ಯದಲ್ಲೂ ಮಾಡಿದರೆ ದೇಹಕ್ಕೆ ನಿರೋಧಕ ಶಕ್ತಿಯನ್ನು ನೀಡುತ್ತದೆ. ಇದರಿಂದ ವಿಟಮಿನ್ ಸಿ, ಇರುವ ಕಾರಣ ಹಲ್ಲು ಮತ್ತು ವಸಡುಗಳನ್ನು ಗಟ್ಟಿಮಾಡುತ್ತದೆ.ಹಲ್ಲು ಬರುವ ಮಕ್ಕಳಿಗೆ ಇದನ್ನು ಕೊಡೋದ್ರಿಂದ ವಸಡುಗಳಲ್ಲಿ ನೋವು ಕಾಣದೆ ಹಲ್ಲು ಬೇಗ ಆಚೆ ಬರುತ್ತದೆ.

ಕ್ಯಾರೆಟ್ಗಳಲ್ಲಿ ಕ್ಯಾನ್ಸರ್ ರೋಧಕಗಳನ್ನೂ ಹೊಂದಿರುತ್ತದೆ.    ಕ್ಯಾರೆಟ್ಟುಗಳಲ್ಲಿ ಬಿಟಾ ಕ್ಯಾರೋಟಿನ್ ಹೇರಳವಾಗಿರುತ್ತದೆ. ಶ್ವಾಸಕೋಶದ ರೋಗಳಿಗೆ ಇದು ರಾಮಬಾಣ. ಇದು ಕಣ್ಣಿಗೆ ಪೂರೆ ಬರದ ಹಾಗೆ ನೋಡಿಕೊಳ್ಳುತ್ತದೆ.

ಕ್ಯಾರೆಟ್ ಸಾಮಾನ್ಯವಾಗಿ ಕೇಸರಿ ಬಣ್ಣಗಳಲ್ಲಿ ಇರುವುದು ಸರ್ವೇಸಾಮನ್ಯ. ಆದರೆ ಇದರಲ್ಲಿ ಹಲವಾರು ಬಣ್ಣಗಳಿವೆ, ಕೆಂಪು, ಹಳದಿ, ನೇರಳೆ, ದಪ್ಪ ನೇರಳೆ, ಹಿಂತಾಹ ಬಣ್ಣಗಳಲ್ಲೂ ದೊರೆಯುತ್ತದೆ. ಇದರಲ್ಲಿ ಸುಮಾರು 20 ರಿಂದ 30 ರಷ್ಟು ಬಣ್ಣದ ಕ್ಯಾರೆಟ್ಗಳಿವೆ. ಇನ್ನು ಇದರಲ್ಲಿ ಹಲವಾರು ರೀತಿಯ ಅಡುಗೆಗಳಿಗೆ ಮಾಡುತ್ತಾರೆ. ಫೇಮಸ್ ಇರುವ ತಿನುಸು ಅಂದರೆ ಕ್ಯಾರೆಟ್ ಹಲ್ವ. ಇನ್ನು ಇದರಲ್ಲಿ ಮಾಡಿರುವ ಸೂಪ್ ಅಂತೂ ದೇಹಕ್ಕೆ ತುಂಬಾನೇ ಸಹಕಾರಿ. ಇದನ್ನು ಮಕ್ಕಳಿಗೆ ನಿಡುದ್ರಿಂದ ಅವರ ಬೆಳವಣಿಗೆಗೆ ತುಂಬಾನೇ ಅನುಕೂಲವಾಗುತ್ತದೆ. ಇನ್ನ ಹಸಿ ತರಕಾರಿಯನ್ನು ಸಲಾಡ್ ಆಗಿ ಮತ್ತು ಹಸಿ ಬಜ್ಜಿ, ಸಾಂಬಾರ್ ಮಾಡಿದರೆ ಸವಿಯಲು ತುಂಬಾನೇ ರುಚಿಯಾಗಿರುತ್ತದೆ  ಬಟಾಣಿ, ಆಲೂಗಡ್ಡೆ, ಇವುಗಳಲ್ಲಿ ಪ್ರಮುಖವಾಗಿವೆ.