1. ಬಳಸಿದ ನಂತರ ಬಿಸಾಡುವ ಮೊಟ್ಟೆಯ ಕವಚ ಮಣ್ಣಲ್ಲಿ ಬೆರೆತರೆ ಗಿಡದ ಬೆಳವಣಿಗೆಯನ್ನು ಪ್ರಚೋದಿಸುವ ಹಾಗೂ ತರಕಾರಿ ಬೆಳೆಗಳಿಗೆ ತಗುಲುವ ಕೊಳೆರೋಗಗಳನ್ನು ತಡೆಗಟ್ಟುವ ಕ್ಯಾಲ್ಸಿಯಂ ಆಂಶ ಸಿಗುತ್ತದೆ.
2. ಕಾಫೀ ಗಸಿಯನ್ನು ಮಣ್ಣಿಗೆ ಸೇರಿಸಿ ಮಣ್ಣಲ್ಲಿ ಖನಿಜಾಂಶ – ಸಾರಜನಕ – ವಿಟಮಿನ್ನುಗಳನ್ನು ಹೆಚ್ಚಿಸಬಹುದು 3. ಟೀ ಗಸಿಯನ್ನೂ ಸಹ ಕಾಂಪೋಸ್ಟ್ ಮೂಲಕ ಮಣ್ಣಿಗೆ ಸೇರಿಸಿ ಮಣ್ಣಿನ ಗುಣಮಟ್ಟ ಹೆಚ್ಚಿಸಬಹುದು 4. ಬಾಳೇಹಣ್ಣಿನ ಸಿಪ್ಪೆಯನ್ನು ನೇರವಾಗಿ ಮಣ್ಣ ಮೇಲೆ ಹಾಕಿ, ಮಣ್ಣಿಗೆ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಷ್ ಅಂಶ ಒದಗಿಸಬಹುದು
ಇದೇ ರೀತಿಯಲ್ಲಿ ಗೋಧೀ – ಅಕ್ಕಿ – ಜೋಳದ ಹಿಟ್ಟುಗಳು – ಕಾಳುಬೆಳೆಗಳ ಹಿಟ್ಟು – ಬಿಸಾಡುವ ಬ್ರೆಡ್ಡು – ಬಿಸ್ಕತ್ತು – ಪಾಸ್ತಾ – ಪೀಜ್ಜಾ ಇತ್ಯಾಗಿಗಳು, ಮೆಕ್ಕೆ ಮತ್ತು ಸೋಯಾ ಅಂಶವೇ ಪ್ರಮುಖವಾಗಿರುವ ಸಾಕುಪ್ರಾಣಿಗಳ ಆಹಾರದ ಉಳಿಕೆಗಳು, ಕಾಳು ಬಿಡಿಸಿದ ನಂತರ ಉಳಿಯುವ ಮೆಕ್ಕೆಜೋಳದ ದಿಂಡು ಮತ್ತು ಒಣಗಿದ ಎಲೆಗಳು, ಬೀರ್, ವೈನ್ ಇತ್ಯಾದಿ ಪೇಯಗಳನ್ನು ಮಣ್ಣಿಗೆ ಬೆರೆಸಿ ಮಣ್ಣಲ್ಲಿ ಇಂಗಾಲ, ಸಾರಜನಕ ಮತ್ತಿತರ ಪೋಷಕಾಂಶಕಗಳು ಹೆಚ್ಚಾಗುವಂತೆ ಮಾಡಬಹುದು.