ಉಪಯುಕ್ತ ಮಾಹಿತಿ

ಈ ಮರಕ್ಕೆ ಪೋಲೀಸರ ಭದ್ರತೆ ಇವತ್ತಿಗೂ ನೀಡಲಾಗುತ್ತಿದೆ, ಕಾರಣ ಕೇಳಿದರೆ ಆಶ್ಚರ್ಯ.

By admin

February 12, 2020

ಸಾಮಾನ್ಯವಾಗಿ ನೀವು ಯಾವುದೇ ದೇಶದಲ್ಲಿ ಗಣ್ಯ ವ್ಯಕ್ತಿಗಳಿಗೆ, ಹಾಗು ಐತಿಹಾಸಿಕ ಸ್ಥಳಗಳಿಗೆ ಭದ್ರತೆ ಹಾಗು ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದನ್ನು ನೀವು ನೋಡಿರುತ್ತೀರಿ, ಆದರೆ ಭಾರತದಲ್ಲಿ ಇರುವ ಈ ಒಂದು ಮರಕ್ಕೆ ದಿನದ 24 ಗಂಟೆ ಮತ್ತು ವಾರದಲೂ ದಿನವೂ ಕೂಡ ವಿಶೇಷ ಭದ್ರತೆ ಒದಗಿಸಲಾಗುತ್ತದೆ ಎಂದರೆ ನೀವು ನಂಬುತ್ತೀರಾ, ನಿಜಕ್ಕೂ ಇದು ಸತ್ಯ.

ಹೌದು ಭಾರತದ ಈ ಮರಕ್ಕೆ ವಿಶೇಷ ಕಾಳಜಿ ನೀಡಿ ಏಕೆ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಈ ವಿಶೇಷ ವರದಿ  ನೋಡಲೇಬೇಕು. ಈ ವಿಶೇಷ ಮರ ಇರುವ ಸ್ಥಳ ಮಧ್ಯಪ್ರದೇಶದ ಭೋಪಾಲ್ ನಲ್ಲಿ, ಇಲ್ಲಿನ ಸಾಲಮತ್ಪುರ್ ಬೆಟ್ಟದಲ್ಲಿ ಈ ಮರಕ್ಕೆ ರಕ್ಶಣೆ ನೀಡಲಾಗಿದೆ. ಹಾಗಿದ್ದರೆ ಈ ಮರಕ್ಕೆ ಇರುವ ಆ ಮಹಾನ್ ವಿಶೇಷತೆ ಏನೆಂದರೆ ಇದು ಈ ಮರವನ್ನು ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ಅವರು ಈ ಸ್ಥಳಕ್ಕೆ ಭೇಟಿ ಕೊಟ್ಟಾಗ ತಂದು ನೆಟ್ಟಿದ್ದರು. ಇದು ಸಾಮಾನ್ಯವಾದ ಮರ ಎಂದು ಭಾವಿಸಬೇಡಿ, ಬುದ್ದನಿಗೆ ಜ್ಞಾನೋದಯವಾದ ಮರ ಎಂದು ನೀವು ಯಾವುದನ್ನೋ ಕರೆಯುತ್ತಿರೋ ಅದೇ ಮರ. ಹೌದು ಇದು ಭೋದಿ ವೃಕ್ಷ, ಬೌದ್ಧ ಧರ್ಮದಲ್ಲಿ ಬೋಧಿ ಮರಕ್ಕೆ ವಿಶೇಷ ಮಹತ್ವವಿದೆ

ಈ ಮರದ ಹಿಂದೆ ಒಂದು ದೊಡ್ಡ ಕತೆಯೇ ಇದೆ. ಇದರ ಒಂದು ಕೊಂಬೆಯನ್ನು ಮೂರನೇ ಶತಮಾನದಲ್ಲಿ ಭಾರತದಿಂದ ಶ್ರೀಲಂಕಾಗೆ ತರಲಾಗಿತ್ತು, ಶ್ರೀ ಲಂಕಾದ ಅನುರಾಧಪುರದಲ್ಲಿ ಅದನ್ನು ನೀಡಲಾಗಿತ್ತು ಎಂದು ಹೇಳಲಾಗುತ್ತದೆ. ಇದು ಅದೇ ಬೋಧಿ ಮರದ ಕೊಂಬೆ ಎಂದು ಹೇಳಲಾಗಿದೆ. ಭಗವಾನ್ ಗೌತಮ ಬುದ್ಧ ಜ್ಞಾನೋದಯ ಪಡೆದ ಈ ಮರವನ್ನು ಮಹಿಂದ್ರಾ ರಾಜಪಕ್ಸೆ ಅವರು ತನ್ನ ಕೈಯಿಂದಲೇ ನೆಟ್ಟಿಸಿದ್ದರಿಂದ , ಈ ಮರಕ್ಕೆ ವಿವಿಐಪಿ ಸ್ಥಾನಮಾನ ನೀಡಲಾಗಿದೆ. ಈ ಮರವನ್ನು ಭೇಟಿ ಮಾಡಲು ಹೆಚ್ಚಿನ ಸಂಖ್ಯೆಯ ಬೌದ್ಧ ಅನುಯಾಯಿಗಳು ಇಲ್ಲಿಗೆ ಆಗಮಿಸುತ್ತಾರೆ. ಈ ಮರದ ರಕ್ಷಣೆಯಲ್ಲಿ, ಸೆಕ್ಯುರಿಟಿ ಗಾರ್ಡ್‌ಗಳನ್ನು ಸಾರ್ವಕಾಲಿಕವಾಗಿ ನಿಯೋಜಿಸಲಾಗುತ್ತದೆ ಮತ್ತು ಅದರ ರಕ್ಷಣೆಗಾಗಿ 12 ರಿಂದ 13 ಲಕ್ಷ ರೂಪಾಯಿಗಳಷ್ಟು ಖರ್ಚಾಗುತ್ತದೆ.

ಈ ಮರಕ್ಕೆ ವಿಶೇಷ ನೀರಿನ ಟ್ಯಾಂಕರ್‌ಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಮರದ ಬಗ್ಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸುತ್ತದೆ. ಮರವನ್ನು ರಕ್ಷಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದರೆ, ಮರಕ್ಕೆ ಹಾನಿಯಾಗದಂತೆ ಅದರ ಸುತ್ತಲೂ ಬಲವಾದ ಕಬ್ಬಿಣದ ಜಾಲರಿಯನ್ನು ಸಹ ಇರಿಸಲಾಗುತ್ತದೆ. ಇದಲ್ಲದೆ, ಮರಕ್ಕೆ ಗೊಬ್ಬರ ಮತ್ತು ನೀರನ್ನು ಸರಿಯಾಗಿ ಪೂರೈಸಲು ಆಡಳಿತ ವ್ಯವಸ್ಥೆ ಮಾಡಿದೆ. ಸರ್ಕಾರ ಮರದ ಭದ್ರತೆಗಾಗಿ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದೆ. ಆದ್ದರಿಂದ ಈ ಪ್ರಾಚೀನ ಮರವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.