ಸುದ್ದಿ

BSNL ಲ್ಯಾಂಡ್ ಲೈನ್ ಫೋನ್ ಬಳಸುವವರಿಗೆ ಬಹುಮಾನವಾಗಿ ಕೊಡಲಿದೆ ದುಡ್ಡು..!ಯಾಕೆ ಗೊತ್ತಾ?

By admin

November 08, 2019

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ.

ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ ಬಾರಿಗೆ ಪರಿಚಯ ಆಗುತ್ತದೆ. ಧ್ವನಿ ಕರೆಯನ್ನು ಮಾಡುವ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯೇ ಹಣವನ್ನು ನೀಡುವ ವಿಶಿಷ್ಟಯೋಜನೆ ಇದು.

ನೆನಪಿರಲಿ.ಇದು ಬಿಎಸ್ ಎನ್ ಎಲ್ಮೊಬೈಲ್ ಗ್ರಾಹಕರಿಗೆ ಅನ್ವಯ ಆಗಲ್ಲ. ದೂರವಾಣಿ,ಬ್ರ್ಯಾಡ್ ಬ್ಯಾಂಡ್ ಮತ್ತು ಎಫ್ಟಿಟಿಎಚ್ ಗ್ರಾಹಕರಿಗೆ ಮಾತ್ರ ಈ ಯೋಜನೆ.ಐವತ್ತೊಂದು ಪರ್ಸೆಂಟ್ ಮಾರ್ಕೆಟ್ ಷೇರು ಹೊಂದಿರುವ ಬಿಎಸ್ಎನ್ ಎಲ್, ಭಾರತದಲ್ಲಿ ದೂರವಾಣಿಸೇವೆ ಒದಗಿಸುವ ಅತಿ ದೊಡ್ಡಸಂಸ್ಥೆ. ಇದೀಗ ತನ್ನ ಪಾರಮ್ಯ ಉಳಿಸಿಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದೆ.

ಇದರಿಂದಜಿಯೋ ಗ್ರಾಹಕರನ್ನು ಬಿಎಸ್ಎನ್ ಲ್  ದೂರವಾಣಿ ಬಳಸಲು ಸೆಳೆಯಬಹುದು ಎಂಬ ಲೆಕ್ಕಾಚಾರವೂ ಇದ್ದಂತಿದೆ. ಐಯುಸಿ ಶುಲ್ಕವನ್ನು ಭರಿಸುವ ಸಲುವಾಗಿ ಜಿಯೋ ಸಂಸ್ಥೆಯು, ಉಳಿದ ನೆಟ್ ವರ್ಕ್ ಗಳಿಗೆ ಮಾಡುವ ಕರೆಗೆ ಆರು ಪೈಸೆ ದರ ವಿಧಿಸುತ್ತಿದೆ.