ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋ ಮಾದರಿಯಲ್ಲಿ ತಮ್ಮ ಫೋನ್‌ಗಳನ್ನು ಬಿಡುಗಡೆ ಮಾಡಲು ಶುರು ಮಾಡಿವೆ.
ತಮ್ಮದೇ ಫೋನ್‌ನೊಂದಿಗೆ ಗ್ರಾಹಕರಿಗೆ ಹೆಚ್ಚಿನ ಡೇಟಾ ಮತ್ತು ಕರೆಯ ಆಫರ್‌ಗಳನ್ನು ನೀಡುತ್ತಿದ್ದು, ಹೆಚ್ಚಿನ ದಿನಗಳ ಕಾಲ ತಮ್ಮದೇ ನೆಟ್‌ವರ್ಕ್ ಬಳಕೆ ಮಾಡಿಕೊಳ್ಳಲಿ ಎನ್ನುವುದು ಇದರ ಉದ್ದೇಶವಾಗಿದೆ.
ಬಿ.ಎಸ್.ಎನ್.ಎಲ್ ಫೋನ್:-
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(BSNL) 499 ರೂ.ಗೆ ಫಿಚರ್ ಫೋನ್ ಪರಿಚಯಿಸಿದೆ.ಬಿ.ಎಸ್.ಎನ್.ಎಲ್. ಮತ್ತು ಡಿಟೆಲ್ ಸಂಸ್ಥೆಗಳ ವತಿಯಿಂದ ‘ಡಿಟೆಲ್ ಡಿ -1’ ಹೆಸರಲ್ಲಿ ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ರೂ.499ಕ್ಕೆ ಫೋನ್ ಲಾಂಚ್:-
ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಫೋನ್‌ಗಳ ಬೆಲೆಯೂ ಕುಸಿಯುತ್ತಿದ್ದು, ಇದೇ ಮಾದರಿಯಲ್ಲಿ ಡಿಟೆಲ್ D1 ಫೀಚರ್ ಫೋನ್ ಅನ್ನು BSNL ರೂ. 499ಕ್ಕೆ ಲಾಂಚ್ ಮಾಡಿದೆ.
ಈ ಪೋನ್ ಬೆಲೆ ರೂ.346 ಮಾತ್ರವೇ ಆಗಿದ್ದು, ಇದರೊಂದಿಗೆ BSNL ಆಫರ್ ಸೇರಿ ರೂ.499 ಆಗಿದೆ ಎನ್ನಲಾಗಿದೆ.
BSNL ಆಫರ್:-
ಡಿಟೆಲ್ D1 ಫೋನ್‌ನೊಂದಿಗೆ BSNL ರೂ.153ರ ಆಫರ್ ಅನ್ನು ನೀಡಿದೆ. ಇದರಲ್ಲಿ ಬಳಕೆದಾರರು ರೂ.153 ಟಾಕ್ ಟೈಮ್ ಪಡೆದುಕೊಳ್ಳಲಿದ್ದು, ಅಲ್ಲದೇ ವಾಯ್ಸ್ ಕಾಲಿಂಗ್ ಮೇಲೆ ಒಂದು ವರ್ಷಗಳ ಕಾಲ ಡಿಸ್ಕೌಂಟ್ ಅನ್ನು ನೀಡಲಿದೆ ಎನ್ನಲಾಗಿದೆ.
ಡಿಟೆಲ್ D1 ಫೋನ್:-
ಈ ಫೋನ್ ಮೊದಲ ರೀಚಾರ್ಜ್ ವ್ಯಾಲಿಡಿಟಿ 365 ದಿನ ಇರಲಿದೆ. 103 ರೂ. ವರೆಗೂ ಟಾಕ್ ಟೈಮ್ ಸಿಗಲಿದೆ.
1.44 ಇಂಚು ಕಲರ್ ಡಿಸ್ ಪ್ಲೇ, 650 ಎಂ.ಎ.ಹೆಚ್. ಬ್ಯಾಟರಿ, ಟಾರ್ಚ್ ಲೈಟ್, ಫೋನ್ ಬುಕ್, ಎಫ್.ಎಂ. ರೇಡಿಯೋ, ಸ್ಪೀಕರ್ ಮೊದಲಾದ ಸೌಲಭ್ಯಗಳನ್ನು ಇದು ಒಳಗೊಂಡಿದೆ.