ಮಂಡ್ಯ ಚುನಾವಣಾ ಕಣ ಸ್ಟಾರ್ ನಟರ ಎಂಟ್ರಿಯಿಂದ ರಂಗೇರಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಮತ್ತು ಯಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸ್ಟಾರ್ ಗಳ ಕ್ಯಾಂಪೇನ್‍ನಿಂದ ಮಂಡ್ಯದಲ್ಲಿ ಸುಮಲತಾ ಪರ ಮತ ಗಳಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತಾ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಇದೇ ವೇಳೆ ಚಿತ್ರನಟರ ಪ್ರಚಾರದಿಂದ ಅಭ್ಯರ್ಥಿಗೆ ಮತ ಸಿಗಲ್ಲ ಎಂಬ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಜಿ.ಟಿ. ದೇವೇಗೌಡರ ಹೇಳಿಕೆಯನ್ನು ಬಿ.ಸಿ. ಪಾಟೀಲ್ ಅಲ್ಲಗೆಳೆದಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್, ತಾವು ಹಿರೇಕೆರೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿದಾಗ ಕೆಲವರು ತಮಗೆ 5 ಸಾವಿರ ವೋಟ್ ಬೀಳಲ್ಲ ಅಂತಾ ಹಾಸ್ಯ ಮಾಡಿದ್ರು. ಆದ್ರೆ ಒಬ್ಬ ನಟನಾಗಿ, ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರಿಂದ ನಾನು ಶಾಸಕನಾಗಿ ಆಯ್ಕೆಯಾದೆ.
ಅದೇ ರೀತಿ ಮಂಡ್ಯದಲ್ಲೂ ಕೂಡಾ ಯಶ್ ಮತ್ತು ದರ್ಶನ್ ಪ್ರಚಾರ, ಮತಗಳಾಗಿ ಪರಿವರ್ತನೆಗೊಳ್ಳೋದ್ರಲ್ಲಿ ಎರಡು ಮಾತಿಲ್ಲ ಅಂತಾ ಹೇಳಿದ್ದಾರೆ.