ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲೆ ಕ್ಯಾಂಡಲ್ ಗಳನ್ನು ಉರಿಸಿ ಅದನ್ನು ಆರಿಸೋದು ಕಾಮನ್. ಎಲ್ಲರೂ ಖುಷಿ ಖುಷಿಯಾಗಿ ಮೋಂಬತ್ತಿಗಳನ್ನು ಆರಿಸಿ ನಂತರ ಆ ಕೇಕ್ ಅನ್ನು ಕತ್ತರಿಸ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳು ತುಂಬಿಕೊಳ್ಳುತ್ತವೆ.
ದಕ್ಷಿಣ ಕೆರೊಲಿನಾದ ಕ್ಲೆಮ್ಸನ್ ಯೂನಿವರ್ಸಿಟಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಮೋಂಬತ್ತಿ ಆರಿಸುವ ವೇಳೆ ಉಗುಳು ಕೂಡ ಕೇಕ್ ಮೇಲೆ ಬೀಳುತ್ತದೆ. ಇದರಿಂದಾಗಿ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಶೇ. 1400 ರಷ್ಟು ಜಾಸ್ತಿಯಾಗುತ್ತದೆ.
ಕ್ಯಾಂಡಲ್ ಆರಿಸುತ್ತಿದ್ದಂತೆ ಕೇಕ್ ಮೇಲೆ ಬ್ಯಾಕ್ಟೀರಿಯಾಗಳ ಪ್ರಮಾಣ ದಿಢೀರನೆ ವೃದ್ಧಿಯಾಗುತ್ತದೆ. ಹಾಗಾಗಿ ಆ ಕೇಕ್ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ವಿಜ್ಞಾನಿಗಳು. ಕೇಕ್ ಮೇಲೆ ಕ್ಯಾಂಡಲ್ ಇಟ್ಟು ಅದನ್ನು ಆರಿಸುವ ಸಂಪ್ರದಾಯ ಆರೋಗ್ಯಕ್ಕೆ ಮಾರಕ ಅಂತಾ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ತಮ್ಮ ಹುಟ್ಟುಹಬ್ಬಗಳಲ್ಲಿ ಕ್ಯಾಂಡಲ್ ಉರಿಸಿ ಆರಿಸ್ತಾರೆ. ಆದ್ರೆ ಇದುವರೆಗೂ ಈ ಆಚರಣೆಯಲ್ಲಿರೋ ಅಪಾಯದ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ಮನುಷ್ಯರ ಬಾಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಆದ್ರೆ ಅವುಗಳಲ್ಲಿ ಬಹುತೇಕ ಯಾವುದೂ ಹಾನಿಕಾರಕವಾಗಿರುವುದಿಲ್ಲ. ಅಕಸ್ಮಾತ್ ಕ್ಯಾಂಡಲ್ ಆರಿಸಿದ ವ್ಯಕ್ತಿಗೇನಾದ್ರೂ ಖಾಯಿಲೆ ಇದ್ರೆ, ಆರೋಗ್ಯ ಸಮಸ್ಯೆ ಇದ್ರೆ ಅಪಾಯ ಗ್ಯಾರಂಟಿ.